ಮನೆಯಲ್ಲಿ ಕಾಜಲ್ ಮಾಡುವ ಸಾಂಪ್ರದಾಯಿಕ ವಿಧಾನ | ನೈಸರ್ಗಿಕ ಕಾಜಲ್ ಮಾಡುವ ವಿಧಾನ!!

ಪ್ರತಿಯೊಬ್ಬರೂ ಕೂಡ ಕಣ್ಣಿಗೆ ಕಣ್ಣು ಕಪ್ಪನ್ನು ಹಾಕುತ್ತಾರೆ ಹಾಗೂ ಕೆಲವೊಬ್ಬರು ಹಾಕುವುದಿಲ್ಲ ಅದರಲ್ಲೂ ಹೆಚ್ಚಾಗಿ ಹುಟ್ಟಿದಂತಹ ಮಕ್ಕಳಿಗೆ ಕಣ್ಣು ಚೆನ್ನಾಗಿ ಅಗಲವಾಗಲಿ ಎನ್ನುವ ಉದ್ದೇಶದಿಂದ ಹಾಗೂ ಕಣ್ಣಿಗೆ ತಂಪು ಆಗಲಿ ಎನ್ನುವ ಕಾರಣದಿಂದ ಮಕ್ಕಳಿಗೆ ಕಣ್ಣು ಕಪ್ಪನ್ನು ಹಾಕುತ್ತಾರೆ.

ಆದರೆ ಇತ್ತೀಚಿನ ದಿನದಲ್ಲಿ ಯಾವುದೇ ಪದಾರ್ಥವು ಕೂಡ ಸ್ವಚ್ಛವಾಗಿ ಅಂದರೆ ಯಾವುದೇ ರೀತಿಯ ಆರೋಗ್ಯಕ್ಕೆ ತೊಂದರೆಯಾಗದಂತೆ ತಯಾರಿಸುತ್ತಿಲ್ಲ ಬದಲಿಗೆ ಅವುಗಳಿಗೆ ಕೆಮಿಕಲ್ ಹಾಕಿ ಅವುಗಳನ್ನು ತಯಾರಿಸುತ್ತಾರೆ ಆದರೆ ಅವುಗಳನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಇನ್ನೂ ಹಲವಾರು ರೀತಿಯ ಪರಿಣಾಮ ಬೀರುತ್ತದೆ ಆದ್ದರಿಂದ ಅವುಗಳನ್ನು ಬಳಸುವುದರಿಂದ ಹೆಚ್ಚಾಗಿ ಉಪಯೋಗ ಆಗುವುದರ ಬದಲು ಅನಾಹುತವೇ ಆಗುತ್ತದೆ.

ಜೊತೆಗೆ ಈ ದಿನ ನಾವು ಹೇಳುತ್ತಿರುವoತಹ ಕಣ್ಣು ಕಪ್ಪನ್ನು ಅದರಲ್ಲೂ ಬಹಳ ಸೂಕ್ಷ್ಮವಾಗಿ ಯಾವುದೇ ರೀತಿಯ ಕೆಮಿಕಲ್ ತಯಾರಿಸದೆ ಇರುವಂತ ಕಣ್ಣು ಕಪ್ಪು ಉಪಯೋಗಿಸುವುದು ಉತ್ತಮ ಏಕೆಂದರೆ ನಮ್ಮ ಕಣ್ಣಿಗೆ ಏನಾದರೂ ತೊಂದರೆ ಉಂಟಾಗಬಹುದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ದಿನ ನಾವು ಹೇಳುವಂತಹ ಈ ಒಂದು ಸುಲಭ ವಿಧಾನದಲ್ಲಿ ನೀವು ಕಣ್ಣು ಕಪ್ಪನ್ನು ತಯಾರಿಸಿ ಇಟ್ಟುಕೊಂಡರೆ ಪ್ರತಿಯೊಬ್ಬರೂ ಕೂಡ ಉಪಯೋಗಿಸಬಹುದು.

ಜೊತೆಗೆ ಯಾವುದೇ ರೀತಿಯಾದಂತಹ ಭಯಪಡದೆ ಚಿಕ್ಕ ಮಕ್ಕಳಿಗೂ ಕೂಡ ಇದನ್ನು ಉಪಯೋಗಿಸಬಹುದು ಇದನ್ನು ಮಾಡಿ ಮಕ್ಕಳಿಗೆ ಹಚ್ಚುವುದರಿಂದ ಯಾವುದೇ ರೀತಿಯಾದ ತೊಂದರೆ ಉಂಟಾಗುವುದಿಲ್ಲ ಹಾಗಾದರೆ ಈ ದಿನ ಕಣ್ಣು ಕಪ್ಪನ್ನು ಹೇಗೆ ಸುಲಭವಾಗಿ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಬಹುದು ಯಾವ ವಿಧಾನವನ್ನು ಅನುಸರಿಸಿ ಇದನ್ನು ತಯಾರಿಸುವುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.

ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥ ಬೃಂಗರಾಜ ಸಸ್ಯದ ಎಲೆಗಳು ಹಾಗೂ ಒಂದು ದೀಪಕ್ಕೆ ಎಣ್ಣೆ ಒಂದು ಕಾಟನ್ ಬಟ್ಟೆ ಇದನ್ನು ಮಾಡುವ ವಿಧಾನ ಮೊದಲು ಬೃಂಗರಾಜ ಎಲೆಯನ್ನು ಚೆನ್ನಾಗಿ ಅರೆದು ಅದರಿಂದ ರಸವನ್ನು ತೆಗೆದುಕೊಳ್ಳಬೇಕು ನಂತರ ಆ ರಸವನ್ನು ಒಂದು ಕಾಟನ್ ಬಟ್ಟೆಗೆ ಹಾಕಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಕೊಳ್ಳಬೇಕು

ನಂತರ ಬಟ್ಟೆಯನ್ನು ದೀಪಕ್ಕೆ ಬತ್ತಿ ಎಷ್ಟು ಬೇಕು ಅಷ್ಟು ಸಣ್ಣದಾಗಿ ಹರಿದುಕೊಂಡು ಅದನ್ನು ದೀಪಕ್ಕೆ ಹಾಕಿ ದೀಪ ಹಚ್ಚಿ ಅದರ ಮೇಲೆ ಒಂದು ಪಾತ್ರೆಯನ್ನು ಮುಚ್ಚಬೇಕು ದೀಪ ಉರಿಯುವುದರ ಮುಖಾಂತರ ಪಾತ್ರೆಯಲ್ಲಿ ಕಣ್ಣು ಕಪ್ಪು ಶೇಖರಣೆಯಾಗುತ್ತದೆ ಈ ರೀತಿಯಾಗಿ ಯಾವುದೇ ರೀತಿಯ ಕೆಮಿಕಲ್ ಬಳಸದೆ ಇರುವಂತಹ ಕಣ್ಣು ಕಪ್ಪು ನಿಮಗೆ ತಯಾರಾಗುತ್ತದೆ ನಂತರ ಅದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಗಟ್ಟಿಯಾಗಿ ಮಾಡಿಕೊಂಡು ಇದನ್ನು ಉಪಯೋಗಿಸುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.