ಬಾದಾಮಿ ಪೋಷಕಾಂಶಗಳ ಆಗರ ಇದನ್ನು ಇಂಗ್ಲಿಷ್ನಲ್ಲಿ ಸೂಪರ್ ನೆಟ್ಸ್ ಅಂತಾನೆ ಹೇಳುತ್ತಾರೆ.ಈ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನಾವು ತೆಗೆದುಕೊಳ್ಳೋಣ.ಬಾದಾಮಿಯನ್ನು ಬೇರೆ ಬೇರೆ ರೂಪದಲ್ಲಿ ನಾವು ತಿನ್ನಬಹುದು ಆದರೆ ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ತಿನ್ನುವುದರಲ್ಲಿರುವ ಪೋಷಕಾಂಶಗಳು ಚೆನ್ನಾಗಿ ಬಿಡುಗಡೆಯಾಗುತ್ತೆ. ಹಾಗೂ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಹೇಳಬಹುದು.ಬಾದಾಮಿಯ ಅತ್ಯಂತ ಮುಖ್ಯ ಪ್ರಯೋಜನವೆಂದರೆ ನೆನಪಿನ ಶಕ್ತಿಯನ್ನು ಜಾಸ್ತಿ ಮಾಡುತ್ತದೆ. ಹಾಗೂ ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾ ಅಂದರೆ ತುಂಬಾ ಒಳ್ಳೆಯದು. ಮಕ್ಕಳಿಗೆ ದಿನ ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ತಿನಿಸುವುದರಿಂದ ಇದರಲ್ಲಿರುವ ಬಿ ಕಾಂಪ್ಲೆಕ್ಸ್ ಹಾಗೂ ವಿಟಮಿನ್ ಇ ಮಕ್ಕಳಲ್ಲಿ ಮೆಮೊರಿ ಪವರ್ ಮತ್ತು ಕಾಂಸೆಂಟ್ರೇಷನ್ ಅನ್ನು ಹೆಚ್ಚಿಸುತ್ತದೆ.
ಇನ್ನು ಬಾದಾಮಿಯನ್ನು ಹೇಗೆ ತಿನ್ನಬೇಕೆಂದರೆ ರಾತ್ರಿ ಮಲಗುವ ಮೊದಲು ಒಂದು ಬೌಲ್ ನಲ್ಲಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ತಿನ್ನಬೇಕು. ಇನ್ನು ಬಿಸಿ ನೀರಿನಲ್ಲಿ ನೆನೆಸಿ ತಿಂದರೆ ಅದರಲ್ಲಿರುವ ಪೋಷಕಾಂಶಗಳು ಹೇರಳವಾಗಿ ಸಿಗುತ್ತದೆ ಹಾಗೂ ಇನ್ನು ಉತ್ತಮ.
ಬೆಳಿಗ್ಗೆ ಎದ್ದು ನೆನೆಸಿದ ಬಾದಾಮಿಯ ಸಿಪ್ಪೆಯನ್ನು ತೆಗೆದು ಎಂದರೆ ಉತ್ತಮ . ಆಯುರ್ವೇದದ ಪ್ರಕಾರ ಬಾದಾಮಿ ಸಿಪ್ಪೆಯಲ್ಲಿ ಪಿತಾಂಶ ಜಾಸ್ತಿ ಇರುತ್ತದೆ. ಮತ್ತು ಜೀರ್ಣಕ್ರಿಯೆಗೆ ಇದು ಕಷ್ಟವಾಗುತ್ತದೆ. ಆದ್ದರಿಂದ ಬಾದಾಮಿಯ ಸಿಪ್ಪೆ ತೆಗೆದು ತಿನ್ನುವುದರಿಂದ ತುಂಬಾ ಒಳ್ಳೆಯದು .
ಬಾದಾಮಿಯಲ್ಲಿ ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇದೆ .ಪ್ರೋಟೀನ್ ಮತ್ತೆ ಫೈಬರ್ ಅಂಶ ಜಾಸ್ತಿ ಇದೆ. ನಮಗೆ ಹಸಿವನ್ನು ಕಡಿಮೆ ಮಾಡಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ಡಯಟ್ ಮಾಡುವವರು ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದು ತಿನ್ನುವುದರಿಂದ ಇದು ತುಂಬಾ ಸಹಾಯಕವಾಗಿದೆ.
ಬಾದಾಮಿಯಲ್ಲಿ ಆಂಟಿ ಆಕ್ಸಿಡೆಂಟ್ ಜಾಸ್ತಿ ಕೇರಳವಾಗಿದ್ದು ಇದು ನಮ್ಮ ದೇಹದಲ್ಲಿ ಹಾನಿಗೊಳಗಾದಂತಹ ಜೀವಕೋಶಗಳಿದ್ದರೆ ಅದನ್ನು ಸರಿ ಮಾಡಲು ಸಹಾಯಮಾಡುತ್ತದೆ . ಹಾಗೂ ಮುಖದಲ್ಲಿ ಇರುವಂತಹ ಚರ್ಮದ ಸುಕ್ಕು ನೆರಿಗೆಗಳನ್ನು ಹೋಗಲಾಡಿಸುತ್ತದೆ.
ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ಇನ್ನು ಬಾದಾಮಿಯಲ್ಲಿರುವಂತಹ ವಿಟಮಿನ್ ಇ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾರ್ಟ್ ಪೇಷಂಟ್ ಗಳು ಬಾದಾಮಿಯನ್ನುವುದರಿಂದ ಅವರ ಹೃದಯದ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯಕವಾಗಿದೆ . ಹಾಗೂ ಕ್ಯಾನ್ಸರ್ ಪೇಶಂಟ್ ಹಾಗೂ ವಯಸ್ಸಾದವರಿಗೆ ನೆನಪಿನ ಶಕ್ತಿ ಇರುವುದಿಲ್ಲ ಅಂತವರಿಗೆ ಇದು ತುಂಬಾ ಒಳ್ಳೆಯದು.
ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಬಾದಾಮಿ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವಂತಹ ಮೆಗ್ನೀಷಿಯಂ ಬ್ಲಡ್ ಪ್ರೆಶರ್ ಅನ್ನು ಕಡಿಮೆ ಮಾಡುತ್ತದೆ.
ಬಾದಾಮಿ ಸಕ್ಕರೆ ಕಾಯಿಲೆ ಇರುವಂತಹವರಿಗೆ ಊಟ ಆದನಂತರ ಸಕ್ಕರೆ ಅಂಶ ಜಾಸ್ತಿ ಇದ್ದರೆ ಅಂತಹ ಸಮಸ್ಯೆಯನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ.
ಬಾದಾಮಿಯಲ್ಲಿ ಪ್ರೋಟೀನ್ ಫೈಬರ್ ತುಂಬಾ ಅಂಶ ಹೇರಳವಾಗಿ ಸಿಗುತ್ತದೆ. ಇನ್ನು ಬಾದಾಮಿಯನ್ನು ದಿನಕ್ಕೆ 5 ರಿಂದ 20 ತಿಂದರೆ ತುಂಬಾ ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ನೆನೆಸಿದ ಬಾದಾಮಿಯನ್ನು ತಿಂದರೆ ತುಂಬಾ ಒಳ್ಳೆಯದು.
ಮಕ್ಕಳಿಗೆ ಲಂಚ್ ಬಾಕ್ಸ್ ನಲ್ಲಿ ಕೊಟ್ಟು ತಿನ್ನಿಸಿದರು ತುಂಬಾ ಒಳ್ಳೆಯದು. ಮಕ್ಕಳ ನೆನಪಿನ ಶಕ್ತಿಯನ್ನು ಮತ್ತು ಏಕಾಗ್ರತೆಯನ್ನು ಜಾಸ್ತಿ ಮಾಡಲು ಅವರ ವಿದ್ಯಾಭ್ಯಾಸಕ್ಕೆ ಬಾದಾಮಿಯು ತುಂಬಾ ಪ್ರಯೋಜನಕಾರಿಯಾಗಿದೆ.
ಇಂದು ನಾವು ನೀರಿನಲ್ಲಿ ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಂಡಿದ್ದೇವೆ.