2023 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ತಾರೆಯರು.
ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಸಾಕಷ್ಟು ಕಲಾವಿದರು ತಮ್ಮ ಅತ್ಯದ್ಭುತ ನಟನೆಯ ಮೂಲಕ ನಮ್ಮ ಚಂದನವನವನ್ನು ಮೇಲುಗೈ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಕನ್ನಡದ ಹಿರಿತೆರೆ ಮತ್ತು ಕಿರಿತರೆ ಎರಡರಲ್ಲೂ ಸಹ ಸಾಕಷ್ಟು ಕಲಾವಿದರು ಜನರ ಮನಸ್ಸನ್ನು ಗೆದ್ದು ಇಂದಿಗೂ ತಮ್ಮ ನಟನೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಚಂದನವನದ ನಟರು ಇತ್ತೀಚಿನ ದಿನಗಳಲ್ಲಿ ಪ್ರೀತಿಯಲ್ಲಿ ಬಿದ್ದು ನಂತರ ವಹಿವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸಾಕಷ್ಟು ಜೋಡಿಗಳನ್ನು ನಾವು ನೋಡುತ್ತಿದ್ದೇವೆ ಇದು ಈಗ ಮಾತ್ರವಲ್ಲದೆ ಹಿಂದಿನ ತಲೆಮಾರುಗಳಲ್ಲಿಯು ನೋಡಬಹುದು. ಡಾಕ್ಟರ್ ವಿಷ್ಣುವರ್ಧನ್ ಮತ್ತು ಭಾರತಿ, ಅಂಬರೀಶ್ ಮತ್ತು ಸುಮಲತಾ ಹೀಗೆ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರು ಪ್ರೀತಿಸಿ ಮದುವೆಯಾಗಿ ಈಗಿನ ಪೀಳಿಗೆಗೂ ಸಹ ಮಾದರಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ 2023 ನೇ ಸಾಲಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ಜೋಡಿಗಳನ್ನು ನಾವು ನೋಡುವುದಾದರೆ. ನಟ ಶರತ್ ಹಾಗೂ ದಿವ್ಯಶ್ರೀ ನಟ ಶರತ್ ಅವರು ಜೀ ಕನ್ನಡದ ಪಾರು ಧಾರವಾಹಿಯ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ತಮ್ಮ ಅತ್ಯದ್ಭುತ ನಟನೆಯ ಮೂಲಕ ಈ ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಇವರು 2023ರಲ್ಲಿ ದಿವ್ಯಶ್ರೀ ಎಂಬುವವರ ಜೊತೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಈ ಜೋಡಿಯು ಹಲವಾರು ವರ್ಷಗಳಿಂದ ಪ್ರೀತಿಯಲ್ಲಿ ಇದೀಗ ತಮ್ಮ ಪ್ರೀತಿಯನ್ನು ಮದುವೆಯ ಮೂಲಕ ನೆರವೇರಿಸಿಕೊಂಡಿದ್ದಾರೆ ಹೌದು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿಷಯ ಸುದ್ದಿ ಆಗುತ್ತಿತ್ತು ಮದುವೆಯ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ.
ನಟಿ ಶುಬ್ರ ಅಯ್ಯಪ್ಪ ಹಾಗೂ ವಿಶಾಲ್ ಶುಬ್ರ ಅಯ್ಯಪ್ಪ ಅವರು ಕನ್ನಡದಲ್ಲಿ ಶಿವಣ್ಣ ಅವರ ಜೊತೆ ನಟಿಸಿ ಸೈನಿಸಿಕೊಂಡಂತಹ ನಟಿ ಇವರು ಸಹ 2023ರಲ್ಲಿ ವಿಶಾಲ್ ಎಂಬುವವರ ಜೊತೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಟ ಸಾಗರ್ ಹಾಗೂ ಸಿರಿ, ಸಾಗರ್ ಅವರು ಜೀ ಕನ್ನಡ ಧಾರಾವಾಹಿಯ ಸತ್ಯ ಧಾರಾವಾಹಿಯಲ್ಲಿ ತುಂಬಾ ಫೇಮಸ್ ಆದಂತಹ ನಟ ಇವರು ತಮ್ಮ ಗೆಳತಿಯನ್ನು ಪ್ರೀತಿಸಿ ಇದೀಗ ದಾಂಪತ್ಯ ಜೀವನಕ್ಕೂ ಸಹ ಕಾಲಿಟ್ಟಿದ್ದಾರೆ.
ನಟ ಲೋಕೇಶ್ ಹಾಗೂ ರಚನಾ ಲೋಕೇಶ್ ಅವರ ಕಾಮಿಡಿ ಎಲ್ಲರಿಗೂ ಸಹ ತುಂಬಾ ಇಷ್ಟವಾಗುತ್ತದೆ ಅತ್ಯದ್ಭುಕ್ತ ಹಾಸ್ಯ ನಟನೆಯ ಮೂಲಕ ರಂಜಿಸುತ್ತಿದ್ದ ಲೋಕೇಶ್ ಅವರು ರಚನಾ ಅವರ ಜೊತೆಯಲ್ಲಿ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಮ್ಮ ಸ್ಯಾಂಡಲ್ ವುಡ್ ನ ಈ ಎಲ್ಲ ಜೋಡಿಗಳು ಸಹ ಇದೇ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.