2024 ರ ವರ್ಷ ಭವಿಷ್ಯ ವೃಷಭ ರಾಶಿಯವರಿಗೆ ವರ್ಷ ಪೂರ್ತಿ ತಮ್ಮ ವೃತ್ತಿ ಜೀವನ ಹೇಗಿದೆ ಅನ್ನುವಂತದ್ದು, ಈ ರಾಶಿಯ ಫಲಾಫಲ ಗಳೇನು? ವ್ಯಾಪಾರದಲ್ಲಿ ಯಾವ ರೀತಿ ಲಾಭ ನಷ್ಟಗಳಿವೆ. ಅಲ್ಲದೆ ಯಾವ ಸಮಸ್ಯೆಗಳು ನಿಮಗೆ ಈ ವರ್ಷದಲ್ಲಿ ಕಾಡುತ್ತವೆ. ಮತ್ತೆ ಗ್ರಹಗತಿಗಳ ಗೋಚಾರ ಫಲ ಹೇಗಿದೆ? ಇನ್ನು ಕೆಲವೊಂದು ಪರಿಹಾರ ಫಲದ ಮಾಹಿತಿಗಳನ್ನು ತಿಳಿಸಿಕೊಡುವಂತಹ ಪ್ರಯತ್ನಗಳು ಮಾಡ್ತಾ ಇದ್ದೇವೆ ನೋಡಿ. ವೃಷಭ ರಾಶಿಯ ನಕ್ಷತ್ರಗಳು ಕೃತ್ತಿಕಾ ರೋಹಿಣಿ, ಮೃಗ ಶಿರಾ, ಕೃತ್ತಿಕಾ ನಕ್ಷತ್ರದ ಮೂರು ಪಾದ ಆಗಿದ್ದರೆ ರೋಹಿಣಿ ನಕ್ಷತ್ರ ನಾಲ್ಕು ಪಾದ ಮೃಗಶಿರ ನಕ್ಷತ್ರದ ಎರಡು ಪಾದ ಆಗಿರುವಂತದ್ದು ವೃಷಭ ರಾಶಿಯವರ ಅಧಿಪತಿ ಬಂದು ಶುಕ್ರ ಆಗಿರುತ್ತಾನೆ.

ಇನ್ನು ಮಿತ್ರ ರಾಶಿಗಳು ಮಕರ ಕುಂಭ ಆಗಿದ್ದರೆ ಶತ್ರು ರಾಶಿ ಸಿಂಹ ಧನಸ್ಸು ಮೀನ ರಾಶಿ ಆಗಿರುತ್ತೆ. ಮತ್ತೆ ದಕ್ಷಿಣ ದಿಕ್ಕು ವೃಷಭ ರಾಶಿಯವರಿಗೆ ಅದೃಷ್ಟವಾಗಿರುವಂತದ್ದು ರಾಶಿಯ ಬಣ್ಣಗಳು ಬಿಳಿ ಮತ್ತು ನೀಲಿ ಅದೃಷ್ಟವಂತ ಬಣ್ಣವಾಗಿರುತ್ತೆ. ಅದೃಷ್ಟವಂತ ದೇವತೆ ಮಹಾಲಕ್ಷ್ಮಿ ಆಗಿರುವಂತದ್ದು. ಅದೃಷ್ಟವಂತ ದಿನ ಶುಕ್ರವಾರ ಮತ್ತು ಶನಿವಾರ ಆಗಿದ್ರೆ ಆರು ಮತ್ತು ಎಂಟು ಅದೃಷ್ಟವಂತ ಸಂಖ್ಯೆ ಆಗಿರುತ್ತೆ ಮತ್ತು ಈ ರಾಶಿಯವರಿಗೆ ಈ ವರ್ಷದಲ್ಲಿ ಎಲ್ಲರ ಜೊತೆ ಬೆರೆಯುವಂತಹ ಮನಸ್ಸು ನಿಮ್ಮದಾಗಿರುತ್ತೆ ಅಂದರೆ ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ಮಾತನಾಡುವಂಥ ಸ್ವಭಾವ ನಿಮ್ಮಲ್ಲಿರು ವಂತದ್ದು. ಮತ್ತೆ ಹಣಕಾಸಿನ ವಿಷಯದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಈ ಸಮಯದಲ್ಲಿ ಆದಷ್ಟು ಹಣವನ್ನು ಸೇವ್ ಮಾಡಬೇಕಾಗುತ್ತೆ. ಸುಮ್ಮನೇ ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುತ್ತಾ ಹೋದ ಲ್ಲಿ ಮುಂದೆ ಜೀವನ ಸಾಗಿಸುವ ಸಂದರ್ಭದಲ್ಲಿ ಕಷ್ಟಕರವಾಗಿರುತ್ತೆ ಮತ್ತೆ ಈ ವರ್ಷದಲ್ಲಿ ಸಂಪಾದಿಸಿದ ಹಣವನ್ನು ಯಾವುದೇ ವ್ಯವಹಾರಕ್ಕೆ ಹಣವನ್ನು ಖರ್ಚು ಮಾಡಬಾರದು. ಯಾಕಂದ್ರೆ ಈ ಸಮಯದಲ್ಲಿ ನಿಮಗೆ ಅನುಕೂಲವಾಗಿರುವುದಿಲ್ಲ. ಇನ್ನು ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳು ಸಂಪೂರ್ಣ ಪ್ರಾಮಾಣಿಕತೆಯಿಂದ ಶ್ರಮ ಪಡಬೇಕಾಗುತ್ತೆ. ಇದರ ಪರಿಣಾಮವಾಗಿ ಅವರು ತಮ್ಮ ಪ್ರಯತ್ನಗಳಿಗೆ ತಕ್ಕ ಫಲಿತಾಂಶ ಗಳನ್ನು ಪಡೆಯುವಂತಹ ಸಾಧ್ಯತೆಗಳಿವೆ. ಮತ್ತೆ ಈ ವರ್ಷದಲ್ಲಿ ವೃಷಭ ರಾಶಿಯವರಿಗೆ ಅಲ್ಪ ಪ್ರಮಾಣದಲ್ಲಿ ಕೆಟ್ಟದಾಗಿರುತ್ತೆ.

ಹಾಗಂತ ವರ್ಷಪೂರ್ತಿ ನಿಮಗೆ ಕೆಟ್ಟದೇ ಇರೋದಿಲ್ಲ. ಗ್ರಹಗಳ ಬದಲಾವಣೆ ಮೂಲಕದಲ್ಲಿ ಹೆಚ್ಚಿನ ರೀತಿಯ ಶುಭ ಫಲಗಳು ನಿಮಗೆ ಸಿಗುವಂತದ್ದು, ಇನ್ನು ಯಾವ ಗ್ರಹ ಗಳಿಂದ ಶುಭ ಯಾವ ಗ್ರಹಗಳಿಂದ ಅಶುಭ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಗುರು ಮೇಷ ರಾಶಿಯಲ್ಲಿರುವಾಗ ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಇರುತ್ತಾನೆ. ಆಗ ಸಾಲದ ಸಮಸ್ಯೆಯಲ್ಲಿ ಒತ್ತಡ ಆಗಿರುವಂತದ್ದು. ಹಣಕಾಸಿನಲ್ಲಿ ಸಮಸ್ಯೆಯಾಗಿರುವಂತದ್ದು ನಿಮ್ಮ ಜೀವನದಲ್ಲಿ ಬೆಳವಣಿಗೆ ಹೇಗೆ ಅಭಿವೃದ್ಧಿ ಇಂಪ್ರೂವ್‌ಮೆಂಟ್ ಆಗಿರುವುದನ್ನು ನೋಡಿ ನಿಮ್ಮ ಶತ್ರುಗಳಿಗೆ ನೋಡೋಕೆ ಆಗದೆ ಇರುವಂತಹ ಸಂದರ್ಭದಲ್ಲಿ ಅವರಿಂದ ತುಂಬಾ ಕಷ್ಟಗಳನ್ನು ಎದುರಿಸ ಬೇಕಾಗುವಂಥ ಪರಿಸ್ಥಿತಿ ಬರುತ್ತೆ.

ಕೌಟುಂಬಿಕ ಜೀವನದಲ್ಲಿ ಅಶಾಂತಿ ಗಂಡ ಹೆಂಡತಿಯರಲ್ಲಿ ಕಲಹ ಪ್ರೀತಿ ಪ್ರೇಮದಲ್ಲಿ ಕಿರಿಕಿರಿ, ಸಣ್ಣ ಸಣ್ಣ ವಿಚಾರಕ್ಕೆ ಜಗಳ ಆಗುವಂತದ್ದು ಫ್ಯಾಮಿಲಿ ಒಳಗಡೆ ಅಂಡರ್ ಸ್ಟಾಂಡಿಂಗ್ ಇಲ್ಲದೆ ಇರುವಂತದ್ದು ಈ ರೀತಿ ಸಮಸ್ಯೆಗಳು ಸೃಷ್ಟಿ ಆಗ್ತಾ ಹೋಗುತ್ತೆ. ಇನ್ನು ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬರುವಂತದ್ದು ಆದಷ್ಟು ತಮ್ಮ ತಮ್ಮ ಆರೋಗ್ಯದ ಕಡೆ ಗಮನವನ್ನು ಕೊಡಬೇಕಾಗುತ್ತೆ. ಇನ್ನು ಗುರು ಈ ರಾಶಿಯಲ್ಲಿ ಸಂಚರಿಸುವಾಗ ನಿಮ್ಮ ರಾಶಿಗೆ ಒಂದನೇ ಮನೆಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕಾಗುತ್ತೆ. ನಿಮ್ಮ ದುಡಿಮೆಯಲ್ಲಿ ಹೆಚ್ಚಿನ ರೀತಿಯ ಪರಿಶ್ರಮ ಪಡಬೇಕಾಗುತ್ತೆ. ಏನಾದರೊಂದು ಖರೀದಿ ಮಾಡುವಂತಹ ಸಂದರ್ಭದಲ್ಲಿ ಒಳ್ಳೆಯ ಸಮಯಗಳಿಗೆಯನ್ನು ನೋಡಿಕೊಂಡು ಖರೀದಿ ಮಾಡುವಂತದ್ದು ಅಂದರೆ ಆಸ್ತಿ ವಾಹನ ಆಗಿರಬಹುದು. ಮತ್ತೆ ಯಾವುದಾದರು ಒಂದು ಒಡವೆ ವಸ್ತ್ರ ಆಭರಣಗಳ ಆಗಿರಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.