ಮಹಾಲಯ ಅಮಾವಾಸ್ಯೆ ಪಿತೃಪಕ್ಷ… ಜೀವನದಲ್ಲಿ ಶುಭ ಫಲಗಳು ದೊರೆಯಲು ಪಿತೃಪಕ್ಷದ ಸಮಯದಲ್ಲಿ ಈ ವಸ್ತುಗಳನ್ನು ದಾನ ಮಾಡಿದರೆ ಒಳಿತಾಗುವುದು, ಪಿತೃಗಳ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ ಆದರೆ ಅಗಲಿದ ಪಿತೃಗಳನ್ನು ವರ್ಷಕೊಮ್ಮೆ ಪಿತೃಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆ ದಿನ ಸ್ಮರಿಸಿ ತಿಲಕರ್ಪಣ ಜಲತರ್ಪಣ ಹಾಗೂ ಪಿಂಡ ದಾನವನ್ನು.
ನೀಡಿ ಕೃತಜ್ಞತೆ ಸೂಚಿಸುವುದು ಮಹಾಲಯ ಅಮಾವಾಸ್ಯೆಯ ಉದ್ದೇಶ ಪಿತೃಗಳಿಗೆ ಪಿಂಡಪ್ರದಾನ ಮಾಡಿ ಈ ಲೋಕದ ದರ್ಪಣ ಬಿಡುತ್ತಾರೆ. ಗೋಗ್ರಸವಿಟ್ಟು ಆ ದಿನ ಮಾಡಿರುವ ಪ್ರತಿಯೊಂದು ಆಹಾರವನ್ನು ಕಾಗೆಗೆ ನೀಡಿ ಕಾಗೆ ಆಹಾರವನ್ನು ಸೇವಿಸಿದ ಬಳಿಕವೇ ಕುಟುಂಬದವರು ಊಟ ಮಾಡುತ್ತಾರೆ ಈ ವರ್ಷ 2023 ಅಕ್ಟೋಬರ್ 14 ಶನಿವಾರದಂದು ಮಹಾಲಯ.
ಅಮಾವಾಸ್ಯೆಯು ಬಂದಿದೆ ಪಿತೃಪಕ್ಷ ಮತ್ತು ಮಹಾಲಯ ಅಮಾವಾಸ್ಯೆ ದಿನ ಪೂರ್ವಜರನ್ನು ನೆನೆದು ಕೆಲವೊಂದು ವಸ್ತುಗಳನ್ನು ದಾನ ಮಾಡಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ ಈ ಸಮಯದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ ಕೆಲ ವಸ್ತುಗಳನ್ನು ದಾನ ಮಾಡಿದರೆ ಪೂರ್ವಜರು ಸಂತೋಷದಿಂದ.
ಹರಸುತ್ತಾರೆ ಎನ್ನುವ ನಂಬಿಕೆ ಹಿಂದೂ ಪರಂಪರೆಯಲ್ಲಿ ಪಿತೃಪಕ್ಷದ ಸಮಯದಲ್ಲಿ ಅನೇಕ ರೀತಿಯ ಕೆಲಸಗಳನ್ನು ನಿಷೇಧಿಸಲಾಗಿದೆ ಹಾಗೂ ಈ ಅವಧಿಯಲ್ಲಿ ಕೆಲವು ಕೆಲಸಗಳನ್ನು ಅಗತ್ಯವೆಂದು ಪರಿಗಣಿಸಲಾಗುತ್ತದೆ ಶಾಸ್ತ್ರಗಳ ಪ್ರಕಾರ ಭೂಮಿ ಮನೆ ವಾಹನಗಳು ಆಭರಣಗಳು ಇನ್ನು ಮುಂತಾದ ವಸ್ತುಗಳ ಖರೀದಿಯನ್ನು ಪಿತೃಪಕ್ಷದಲ್ಲಿ ನಿಷೇಧಿಸಲಾಗಿದೆ ಮತ್ತು ಶ್ರದ್ಧಾ.
ಪಿಂಡದಾನ ಕರ್ಪಣ ಇವುಗಳನ್ನು ಮಾಡುವುದು ಕಡ್ಡಾಯವೆಂದು ಪರಿಗಣಿಸಲಾಗುತ್ತದೆ ಇವುಗಳ ಜೊತೆಯಲ್ಲಿ ಪಿತೃಪಕ್ಷದಲ್ಲಿ ಅನೇಕ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಇದರಿಂದ ಪೂರ್ವಜರು ಸಂತೃಪ್ತಿಯಾಗಿ ಆಯುರ್ ಆರೋಗ್ಯ ಆಯುಷ್ಯವನ್ನು ಆಶೀರ್ವದಿಸುತ್ತಾರೆ ಎನ್ನುವ ವಾಡಿಕೆ ಪಿತೃಪಕ್ಷದಲ್ಲಿ ಯಾವ ವಸ್ತುಗಳನ್ನು ದಾನ.
ಮಾಡುವುದು ಉತ್ತಮ? ಗೋದಾನ ಧರ್ಮ ಗ್ರಂಥಗಳಲ್ಲಿ ಗೋವಿಗೆ ಮಾತೃಸ್ಥಾನವನ್ನು ನೀಡಲಾಗಿದೆ ಧಾರ್ಮಿಕ ದೃಷ್ಟಿಯಿಂದ ಗೋವಿನ ದಾನ ಎಲ್ಲ ದಾನಗಳಲ್ಲಿ ಶ್ರೇಷ್ಠ ಶ್ರಾದ್ದ ಪಕ್ಷದ ಸಮಯದಲ್ಲಿ ಹಸುವನ್ನು ದಾನ ಮಾಡಿದರೆ ಜೀವನದಲ್ಲಿ ಸಂತೋಷ ಮತ್ತು ಸಂಪತ್ತು ದೊರೆಯುತ್ತದೆ, ಬಾಳೆಹಣ್ಣು ನಿತ್ಯಹರಿದ್ವರ್ಣದ ಹಣ್ಣು ವಿಷ್ಣುವಿಗೆ ಪ್ರಿಯವಾದ ಹಣ್ಣು.
ಭಗವಾನ್ ವಿಷ್ಣು ವೈಕುಂಠ ಧಾಮದ ಒಡೆಯ ಮೋಕ್ಷವನ್ನು ಒದಗಿಸುವವನು ಪೂರ್ವಜರು ಬಾಳೆಹಣ್ಣಿನ ದಾನವನ್ನು ಸ್ವೀಕರಿಸಿದ ನಂತರ ಸಂತೃಪ್ತಿಗೊಂಡು ತಮ್ಮ ವಂಶಸ್ಥರಿಗೆ ಆಶೀರ್ವಾದ ನೀಡುತ್ತಾರೆ ಎನ್ನುವ ನಂಬಿಕೆ, ಎಳ್ಳು ದಾನ ಶ್ರಾದ್ಧ ಪ್ರತಿ ಆಚರಣೆಯಲ್ಲಿ ಎಳ್ಳಿನ ದಾನವು ಮುಖ್ಯವಾಗಿದೆ ಹಾಗೆಯೇ ಶ್ರದ್ಧಾದಲ್ಲಿ ಕಪ್ಪುಹಳ್ಳನ್ನು ದಾನ ಮಾಡಿದರೆ ಮುಂದೆ ಬರುವ.
ಆಪತ್ತು ಕಡಿಮೆ ಮಾಡುತ್ತದೆ ತೊಂದರೆ ಮತ್ತು ಅನಾಹುತಗಳಿಂದ ರಕ್ಷಣೆ ನೀಡುತ್ತದೆ. ಹಸುವಿನ ತುಪ್ಪದ ದಾನ ತುಪ್ಪದ ದಾನ ಎಂದರೆ ಶ್ರದ್ಧಾ ಪಕ್ಷದಲ್ಲಿ ಒಂದು ಸಣ್ಣ ಬಟ್ಟಲಿನಷ್ಟಾದರೂ ಹಸುವಿನ ತುಪ್ಪವನ್ನು ದಾನ ಮಾಡಬೇಕು ಶ್ರದ್ಧಾದಲ್ಲಿ ತುಪ್ಪವನ್ನು ದಾನ ಮಾಡಿದರೆ ಕುಟುಂಬಕ್ಕೆ ಒಳಿತಾಗುತ್ತದೆ.
ಧಾನ್ಯಗಳ ದಾನ ಧಾನ್ಯಗಳ ದಾನದಲ್ಲಿ ಗೋಧಿ ಅಕ್ಕಿಯ ಜೊತೆ ಯಾವುದೇ ತರಹದ ಧಾನ್ಯವನ್ನು ಸಹ ದಾನ ಮಾಡಬಹುದು ಈ ದಾನವನ್ನು ಸಂಕಲ್ಪ ದೊಂದಿಗೆ ಮಾಡಿದರೆ ಬಯಸಿದ ಫಲಿತಾಂಶಗಳು ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.