ಒಡೆದ ಹಿಮ್ಮಡಿಗಳಿಂದ ನಿಮಗೂ ತೊಂದರೆಯಾಗುತ್ತಿದೆಯೇ? ಇದನ್ನು ಹಚ್ಚಿ ಸಾಕು…..!!
ಒಬ್ಬ ಮನುಷ್ಯ ನಿಂತುಕೊಳ್ಳುವುದಕ್ಕೆ ಬಹಳ ಪ್ರಮುಖವಾದಂತಹ ಅಂಗ ಯಾವುದು ಎಂದರೆ ಅವನ ಪಾದ. ಯಾವುದೇ ಒಬ್ಬ ಮನುಷ್ಯನಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂದರೆ ಆ ಒಂದು ಸ್ಥಳಕ್ಕೆ ಏನಾದರೂ ಪೆಟ್ಟು ಆದಾಗ ಅಥವಾ ಆ ಜಾಗದಲ್ಲಿ ತೊಂದರೆ ಉಂಟಾದಾಗ ಆ ಜಾಗವು ಅನಾರೋಗ್ಯಗೊಳ್ಳುತ್ತದೆ.
ಅದೇ ರೀತಿಯಾಗಿ ಯಾವುದೇ ಒಬ್ಬ ಮನುಷ್ಯ ಯಾವುದೇ ಕೆಲಸವನ್ನು ಮಾಡಬೇಕು ಎಂದರೆ ಅವನು ಸದಾ ಕಾಲ ನಿಂತಿರಬೇಕು ಅಥವಾ ಕುಳಿತಿರಬೇಕು ಅದರಲ್ಲೂ ಹೆಚ್ಚಾಗಿ ಪ್ರತಿಯೊಬ್ಬರು ನಿಂತುಕೊಂಡೇ ಕೆಲಸ ಮಾಡುತ್ತಾರೆ, ಇದರಿಂದ ಒಬ್ಬ ಮನುಷ್ಯನ ಸಂಪೂರ್ಣವಾದ ದೇಹದ ತೂಕ ಅವನು ಆ ಸ್ಥಳದಲ್ಲಿ ಮಾಡುವಂತಹ ಕೆಲಸದ ಧೂಳ್ ಆಗಿರಬಹುದು ಅಥವಾ ಇನ್ಯಾವುದೇ ರೀತಿಯ ಗಾಳಿ ಮೊದಲು ಅವನ ಪಾದಕ್ಕೆ ತಾಗುತ್ತದೆ.
ಹಾಗಾಗಿ ಅವನಿಗೆ ಕಾಲಿಗೆ ಸಂಬಂಧಿಸಿದಂತೆ ಅವನ ಬೆರಳುಗಳು ಹಾಗೂ ಅವನ ಚರ್ಮ ಇವೆಲ್ಲದಕ್ಕೂ ಸಮಸ್ಯೆಗಳು ಉಂಟಾಗುವುದು ಸರ್ವೇಸಾಮಾನ್ಯ. ಅದರಲ್ಲೂ ಆಯುರ್ವೇದದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಗೆ ಕಾಲಿನಲ್ಲಿ ಹಿಮ್ಮಡಿಗಳು ಹೊಡೆದರೆ ಅದು ಒಳ್ಳೆಯದು ಅವನ ದೇಹದಲ್ಲಿರುವಂತಹ ಉಷ್ಣಾಂಶವನ್ನು ಹೊರಹಾಕುವಂತಹ ಲಕ್ಷಣ ಅದಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವೊಬ್ಬರಿಗೆ ಅದು ವಿಪರೀತವಾಗಿ ಆ ಜಾಗದಲ್ಲಿ ರಕ್ತವು ಸಹ ಬರುತ್ತಿರುತ್ತದೆ.
ಹೀಗೆ ಇಂತಹ ಸಮಸ್ಯೆಯನ್ನು ಅನುಭವಿಸಿರುವವರಿಗೆ ಇದರ ನೋವು ತಿಳಿದಿರುತ್ತದೆ. ಅಂತಹ ಸಮಯದಲ್ಲಿ ಆ ವ್ಯಕ್ತಿ ನಡೆದಾಡಲು ಸಹ ಕಷ್ಟ ಪಡುತ್ತಿರುತ್ತಾನೆ. ಹಾಗಾಗಿ ಅಂಥವರು ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಕೆಮಿಕಲ್ ಪದಾರ್ಥಗಳನ್ನು ತಂದು ಉಪಯೋಗಿಸುತ್ತಿರು ತ್ತಾರೆ. ಆದರೆ ಅವು ಕೇವಲ ತಕ್ಷಣದಲ್ಲಿ ನಿಮಗೆ ನೋವನ್ನು ಕಡಿಮೆ ಮಾಡಬಹುದು ಆದರೆ ಅದರಿಂದ ನಿಮ್ಮ ಹಿಮ್ಮಡಿಯಲ್ಲಿ ಆಗಿರುವಂತಹ ಬಿರುಕಾಗಿರಬಹುದು ಅದರ ಕಲೆಗಳು ಹೋಗುವುದಿಲ್ಲ.
ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಮನೆಮದ್ದು ನಿಮಗೆ ಸಂಪೂರ್ಣವಾದಂತಹ ಫಲಿತಾಂಶವನ್ನು ಕೊಡುವುದರ ಜೊತೆಗೆ ಆ ಬಿರುಕಿನ ಕಲೆಗಳನ್ನು ಸಹ ದೂರ ಮಾಡುತ್ತದೆ. ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದರೆ ಮೊದಲನೆಯದಾಗಿ ಮೇಣದಬತ್ತಿ ಮೊದಲು ಮೇಣದ ಬತ್ತಿಯನ್ನು ಚೆನ್ನಾಗಿ ಕತ್ತರಿಸಿಟ್ಟುಕೊಳ್ಳಬೇಕು. ಅಂದರೆ
ಒಂದು ಚಮಚ ಮೇಣದ ಬತ್ತಿ ಪುಡಿ
ಒಂದು ಚಮಚ ಆಲಿವ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆ
ಮೂರು ಚಮಚ ಸಾಸಿವೆ ಎಣ್ಣೆ
ಒಂದು ಚಮಚ ಅಲೋವೆರಾ ಜೆಲ್
ಇಷ್ಟನ್ನು ಚೆನ್ನಾಗಿ ಬಿಸಿ ಮಾಡಿ ಕರಗಿಸಿಕೊಳ್ಳಬೇಕು ಆನಂತರ ಇದು ಚೆನ್ನಾಗಿ ಆರಿದ ನಂತರ ಒಂದು ಡಬ್ಬಿಯಲ್ಲಿ ಶೇಖರಿಸಿಟ್ಟುಕೊಂಡು ಇದನ್ನು ನಿಮ್ಮ ಹಿಮ್ಮಡಿಗೆ ಹಚ್ಚುತ್ತ ಬರುವುದರಿಂದ ಒಡೆದ ಹೆಮ್ಮಡಿ ಗುಣವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.