ಬಂಗಾರಪ್ಪ ಅವರಿಗೆ ಎಷ್ಟು ಮಕ್ಕಳು ಮತ್ತು ಅವರ ಕುಟುಂಬ ಕಲಹಕ್ಕೆ ಕಾರಣವೇನು ಗೊತ್ತಾ?…
ಕರ್ನಾಟಕದ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ರಾಜಕೀಯ ಇತಿಹಾಸದಲ್ಲಿ ಮಾಸ್ ಲೀಡರ್ ಎಂದೇ ಫೇಮಸ್ ಆದವರು. ಪದೇಪದೇ ಪಕ್ಷ ಬದಲಾಯಿಸುತ್ತಿದ್ದ ಇವರು ಪಕ್ಷಾಂತರವಾಗಿಯೇ ಫೇಮಸ್ ಆದವರು. ಎಸ್.ಬಂಗಾರಪ್ಪನವರ ನಂತರ ಅವರ ಕುಟುಂಬದಲ್ಲಿ ಮಕ್ಕಳು ಸಹ ರಾಜಕೀಯಕ್ಕೆ ಇಳಿದಿದ್ದಾರೆ. ಆದರೆ ಎಸ್ ಬಂಗಾರಪ್ಪ ಅವರಿಗೆ ಐದು ಜನ ಮಕ್ಕಳು. ಅವರ ಕುಟುಂಬದ ಬಗ್ಗೆ ಮತ್ತು ಯಾರು ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಮತ್ತು ಈಗ ಬಂಗಾರಪ್ಪ ಕುಟುಂಬದಲ್ಲಿ ನಡೆಯುತ್ತಿರುವ ಕಲಹಕ್ಕೆ ಅಸಲಿ ಕಾರಣ ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಎಸ್ ಬಂಗಾರಪ್ಪ ಮತ್ತು ಅವರ ಪತ್ನಿ ಶಕುಂತಲಾ ಅವರ ಮೊದಲನೇ ಮಗ ಕುಮಾರ್ ಬಂಗಾರಪ್ಪ. ಇವರು 90ರ ದಶಕದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದರು. ನಂತರ ಈಗ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ವಿದ್ಯುಲತಾ ಎನ್ನುವವರನ್ನು ವಿವಾಹವಾಗಿರುವ ಇವರಿಗೆ ಅರ್ಜುನ್ ಮತ್ತು ಲಾವಣ್ಯ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ಎಸ್.ಬಂಗಾರಪ್ಪ ಅವರ ಎರಡನೇ ಮಗ ಮಧು ಬಂಗಾರಪ್ಪ. ಇವರು ಆರಂಭದ ದಿನಗಳಲ್ಲಿ ಸಿನಿಮಾ ಇಂಡಸ್ಟ್ರಿಯ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದರು ತೆರೆ ಹಿಂದೆ ನಿರ್ಮಾಣದ ಹೊರೆಹೊತ್ತು ಹಲವು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ನಂತರ ಈಗ ರಾಜಕೀಯದಲ್ಲಿ ಸಕ್ರಿಯ ರಾಗಿದ್ದಾರೆ. ಇವರು ಅನಿತಾ ಎನ್ನುವವರನ್ನು ವಿವಾಹವಾಗಿದ್ದರೆ ಓರ್ವ ಮಗನಿದ್ದಾನೆ.
ಮೂರನೆಯವರು ಹಿರಿಮಗಳು ಸುಜಾತ ತಿಲಕ್ ಕುಮಾರ್ ಇವರು ಮೊದಲಿನಿಂದಲೂ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಇವರ ಪತಿ ತಿಲಕ್ ಕುಮಾರ್ ಮೈಸೂರು ಪ್ರಿಂಟರ್ಸ್ ಲಿಮಿಟೆಡ್ ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮಕ್ಕಳು ಕೂಡ ಪಬ್ಲಿಸಿಟಿ ಇಷ್ಟ ಪಡದ ಕಾರಣ ಹೆಚ್ಚಿನ ಜನರಿಗೆ ಪರಿಚಯವಿಲ್ಲ.
ನಾಲ್ಕನೇಯವರು ಗೀತಾ ಶಿವರಾಜ್ ಕುಮಾರ್ ಇವರು ವರನಟ ರಾಜಕುಮಾರ್ ಕುಟುಂಬದ ಹಿರಿ ಸೊಸೆ. ಶಿವರಾಜ್ ಕುಮಾರ್ ಅವರನ್ನು ಕೈಹಿಡಿದಿರುವ ಇವರು ಇತ್ತೀಚಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅನುಪಮ ಮತ್ತು ನಿವೇದಿತಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೊನೆಯ ಮಗಳು ಅನಿತಾ ಪವನ್ ಕುಮಾರ್ ಇವರು ಎಂ.ಪಿ ಬಸವರಾಜ್ ಅವರ ಮೊಮ್ಮಗ ಪವನ್ ಕುಮಾರ್ ಎನ್ನುವವರನ್ನು ಕೈ ಹಿಡಿದಿದ್ದರು ಆದರೆ ಪವನ್ ಕುಮಾರ್ ಅವರು ಈಗ ಇಹಲೋಕ ತ್ಯಜಿಸಿದ್ದಾರೆ. ಪವನ್ ಕುಮಾರ್ ಮತ್ತು ಅವರ ಮಕ್ಕಳು ಸಹ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಷ್ಟಪಡದ ಕಾರಣ ಹೆಚ್ಚಿನ ಮಾಹಿತಿ ಇಲ್ಲ.
ಇವರ ಕುಟುಂಬ ಕಲಹಕ್ಕೆ ಕಾರಣ ಆಗಿರುವುದು ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರ ರಾಜಕೀಯ ವಿಚಾರ ಅಣ್ಣ-ತಮ್ಮಂದಿರು ಒಂದೇ ಕ್ಷೇತ್ರದಲ್ಲಿ ವಿರುದ್ಧ ಪಕ್ಷಗಳಲ್ಲಿ ನಿಂತು ಗೆದ್ದಿರುವುದು ಸೋತಿರುವ ವಿಚಾರ ದೊಡ್ಡದಾಗಿ ಬೆಳೆದು ಈಗ ಮನೆ ಜಗಳ ಬೀದಿ ರಂಪವಾಗಿದೆ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.