200% ನೀವು ಅಂದುಕೊಂಡಿದ್ದು ಆಗುತ್ತೆ ಅಂದರೆ ಕೂತ ಕಲ್ಲು ನಿಮ್ಮ ಬಲಕ್ಕೆ ತಿರುಗುತ್ತೆ….ಈ ಭೂಮಿಯ ಮೇಲೆ ಮನುಷ್ಯನಿಗೆ ಅರ್ಥವಾಗದೆ ಅವನ ಊಹೆಗು ಮಿಲುಕ ದಂತಹ ಚಮತ್ಕಾರಗಳು ನಡೆಯುತ್ತಿರುತ್ತದೆ ಅಂಥದ್ದು ಒಂದು ಸಮತ್ಕಾರವನ್ನು ನಾನು ಇವತ್ತು ತೋರಿಸುವುದಕ್ಕೆ ಕರೆದುಕೊಂಡು ಬಂದಿದ್ದೇನೆ ನಮ್ಮ ಬೆಂಗಳೂರಿನ ಹತ್ತಿಗುಪ್ಪೆಯ.
ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲಿ ಗುಂಡಪ್ಪ ಎನ್ನುವ ಹೆಸರಿನಿಂದ ಕರೆಯಲ್ಪಡುವ ಒಂದು ಚಮತ್ಕಾರಿ ಕಲ್ಲಿದೆ ಆ ಕಲ್ಲನ್ನು ಸುದರ್ಶನ ಚಕ್ರ ಎಂದು ಕೂಡ ಕರೆಯುತ್ತಾರೆ ಇಲ್ಲಿ ಬರುವ ಭಕ್ತರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ಆ ಕಲ್ಲು ಇಲ್ಲಿ ಚಮತ್ಕಾರವನ್ನು ಸೃಷ್ಟಿಸುತ್ತಾ ಇದೆ ಅದನ್ನು ನಾನು ನಿಮಗೆ.
ಕಣ್ಣಾರೆ ತೋರಿಸುವುದಕ್ಕೆ ಈ ಸನ್ನಿಧಿಗೆ ಕರೆದುಕೊಂಡು ಬಂದಿದ್ದೇನೆ ಈ ದೇವಸ್ಥಾನದಲ್ಲಿ ನಮ್ಮ ಮನಸ್ಸಿನಲ್ಲಿರುವ ಪ್ರಶ್ನೆ ಕೇಳಿದಾಗ ಆ ಕಲ್ಲು ಬಲಗಡೆಗೆ ತಿರುಗುತ್ತದೆ ಆಗುವುದಿಲ್ಲ ಎನ್ನುವುದಾದರೆ ನಮ್ಮ ಎಡಗಡೆಗೆ ತಿರುಗುತ್ತದೆ ಈ ದೇವಸ್ಥಾನದ ಸಮಯ ನೋಡಿ ಬೆಳಗ್ಗೆ 6:30 ರಿಂದ 11 ಗಂಟೆ ವರೆಗೂ ಇರುತ್ತದೆ ಸಂಜೆ 6:00 ಯಿಂದ 8:30 ವರೆಗೂ ಇರುತ್ತದೆ ಮತ್ತೆ ಶನಿವಾರದ.
ಸಮಯದಲ್ಲಿ ಪ್ರಶ್ನೆ ಕೇಳುವುದಕ್ಕೆ ಅವಕಾಶ ಇರುವುದಿಲ್ಲ ಅಂದರೆ ತುಂಬಾ ಜನ ಬರ್ತಾ ಇರುತ್ತಾರೆ ದೇವಸ್ಥಾನಕ್ಕೆ ಆದ್ದರಿಂದ ಪ್ರಶ್ನೆ ಕೇಳುವುದಕ್ಕೆ ಅವರು ಅವಕಾಶವನ್ನು ಕೊಟ್ಟಿಲ್ಲ ಇನ್ನು ಮಿಕ್ಕಿದ ಆರು ದಿನಗಳಲ್ಲಿ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ನಾವು ಇಲ್ಲಿ ಆ ಗುಂಡಪ್ಪ ಎನ್ನುವ ಕಲ್ಲಿನ ಮೇಲೆ ಕುಳಿತು ಅಥವಾ ನಿಂತುಕೊಂಡು ಪ್ರಶ್ನೆಗಳನ್ನು.
ಕೇಳಬಹುದು ಪ್ರಶ್ನೆ ಕೇಳುವುದಕ್ಕಿಂತ ಮೊದಲು ನಮ್ಮ ಮನೆಯ ದೇವರನ್ನು ಖಂಡಿತವಾಗಿಯೂ ಮೊದಲು ನೆನಪು ಮಾಡಿಕೊಳ್ಳಬೇಕು ಮನೆದೇವರನ್ನು ನೆನೆದು ಒಂದು ಬಾರಿಗೆ ಒಂದು ಪ್ರಶ್ನೆಯನ್ನು ಮಾತ್ರ ಕೇಳಬೇಕು ಅದು ನ್ಯಾಯ ಬದ್ಧವಾಗಿರಬೇಕು ಈಗ ಬೇರೆಯವರಿಗೆ ಕೆಡುಕು ಮಾಡುವಂತಹ ಪ್ರಶ್ನೆಯನ್ನೆಲ್ಲ ಮಾಡುವುದರ ಬಗ್ಗೆ ಕೇಳಿದರೆ ಇಲ್ಲಿ ಉತ್ತರವನ್ನು.
ನೀಡುವುದಿಲ್ಲ ಒಂದು ಬಾರಿಗೆ ಒಂದು ಪ್ರಶ್ನೆಯನ್ನು ಕೇಳಿದಾಗ ಅದು ಆಗುತ್ತದೆ ಎನ್ನುವುದಾದರೆ ನಮ್ಮ ಬಲಭಾಗಕ್ಕೆ ತಿರುಗುತ್ತದೆ ಇಲ್ಲವೆಂದರೆ ಎಡಭಾಗಕ್ಕೆ ತಿರುಗುತ್ತದೆ ಮತ್ತು ಎಷ್ಟು ದಿನದ ಒಳಗಡೆ ಆಗುತ್ತದೆ ಎಂದು ಕೂಡ ನಾವು ಕೇಳಬಹುದು ಎಂದು ಪೂಜಾರಿ ಹೇಳಿದರು ನಾವು ಒಟ್ಟು ಮೂರು ಪ್ರಶ್ನೆಯನ್ನು ಕೇಳಬಹುದು ಒಂದು ಪ್ರಶ್ನೆಯನ್ನು ಕೇಳಿ ಅದಾದ ಮೇಲೆ.
ಇನ್ನೊಂದು ಪ್ರಶ್ನೆ ಈಗ ನಮಗೆ ಮಕ್ಕಳಾಗಿಲ್ಲ ಎಷ್ಟು ವರ್ಷದಲ್ಲಿ ಆಗುತ್ತದೆ ಎಂದು ಕೇಳಿದರೆ ಅದಾದ ನಂತರವೇ ಇನ್ನೊಂದು ಪ್ರಶ್ನೆಯನ್ನು ಕೇಳಬೇಕು ಇನ್ನು ನಿಮ್ಮ ಮನಸ್ಸಿನಲ್ಲಿ ಯಾವ ಯಾವ ತೊಂದರೆಗಳು ಅಥವಾ ಕಷ್ಟಗಳು ಪ್ರಶ್ನೆಗಳು ಇರುತ್ತದೋ ಅದನ್ನು ನೀವು ಕೇಳಬಹುದು ಮತ್ತೆ ಇಲ್ಲಿ ಇನ್ನೊಂದು ವಿಶೇಷ.
ಏನು ಎಂದರೆ ನಾವು ಕೇಳುವಂತಹ ಪ್ರಶ್ನೆ ಗಳಿಗೆ ಎಲ್ಲರಿಗೂ
ಉತ್ತರ ಸಿಗುವುದಿಲ್ಲ ಎಷ್ಟೋ ಜನರಿಗೆ ಉತ್ತರ ಸಿಗದೆ ವಾಪಸ್ ಕೂಡ ಹೋಗಿದ್ದಾರೆ ಮತ್ತೆ ಅವರು ನಮಗೆ ಬೇಕೇ ಬೇಕು ಉತ್ತರ ಎಂದು ಕುಳಿತುಕೊಂಡಾಗ ಅವರಿಗೆ ಉತ್ತರ ಸಿಗುತ್ತದೆ ನಾನು ಹೋಗಿದ್ದಾಗ ನನ್ನ ಮುಂದೆ ಇಬ್ಬರಿಗೆ ಉತ್ತರ ಆಗಲಿಲ್ಲ ನಾನು.
ಕೂಡ ಪ್ರಶ್ನೆ ಕೇಳಿದೆ ನನಗೂ ಕೂಡ ಉತ್ತರ ಆಗಲಿಲ್ಲ ಆಮೇಲೆ ನಾನು ಮತ್ತೆ ದೇವರ ಸುತ್ತ ಮೂರು ಪ್ರದಕ್ಷಣೆಯನ್ನು ಹಾಕಿ ಮತ್ತೆ ಬಂದು ನಾನು ಮನೆದೇವರನ್ನು ನೆನೆಸಿಕೊಂಡು ಮತ್ತೆ ನಾನು ಕುಳಿತುಕೊಂಡೆ ಆಗ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.