ದೇವರ ದೀಪಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನ ಇಂದು ತಿಳಿದುಕೊಳ್ಳೋಣ ದೇವರ ಮುಂದೆ ಎಷ್ಟು ದೀಪಗಳನ್ನ ಯಾವ ದಿಕ್ಕಿನಲ್ಲಿ ಹಚ್ಚಬೇಕು ದೀಪಕ್ಕೆ ಯಾವ ಎಣ್ಣೆ ಶ್ರೇಷ್ಠ ಹೇಗಿದ್ದರು ಎಲ್ಲರ ಮನೆಯಲ್ಲೂ ಕಡ್ಡಾಯವಾಗಿ ಪ್ರತಿನಿತ್ಯ ದೀಪವನ್ನು ಹಚ್ಚುತ್ತೇವೆ. ಹಚ್ಚುವ ದೀಪದ ಬಗ್ಗೆ ಇನ್ನು ಕೆಲವೊಂದು ಸಂಗತಿಗಳನ್ನು ತಿಳಿದುಕೊಂಡರೆ ದೇವರ ಅನುಗ್ರಹದ ಜೊತೆಗೆ ಮನೆಯಲ್ಲಿ ಸುಖ ಸಂತೋಷ ನೆಲೆಸಿರುತ್ತದೆ ಜೊತೆಯಲ್ಲಿ ಯಾವುದೇ ಒಂದು ಶುಭ ಕಾರ್ಯ ಪ್ರಾರಂಭ ಮಾಡಬೇಕು ಎಂದರು ದೀಪ ಹಚ್ಚುವುದರ ಮೂಲಕವೇ ಪ್ರಾರಂಭ ಮಾಡುತ್ತಾರೆ.
ಸಾಮಾನ್ಯವಾಗಿ ಮನೆಯಲ್ಲಿ ಎರಡು ದೀಪ ಹಚ್ಚಬೇಕು ಮನುಷ್ಯನ ಜೀವನದಲ್ಲಿ ಕಷ್ಟ ಸುಖ ಎರಡು ಸಮನಾಗಿರಬೇಕು ಅದೇ ರೀತಿಯಲ್ಲಿ ಮನೆಯಲ್ಲಿ ಎರಡು ದೀಪಗಳನ್ನು ಹಚ್ಚಿದರೆ ಒಳ್ಳೆಯದು. ಆರೋಗ್ಯವಿರಲಿ ಸಿರಿಸಂಪತ್ತು ಇವೆಲ್ಲವೂ ವೃದ್ಧಿಸುತ್ತದೆ ದೇವರ ಮನೆಯಲ್ಲಿ ಮೂರು ಇಂಚಿನ ದೀಪವನ್ನು ಬೆಳಗುವುದು ಶ್ರೇಷ್ಠ ತಾಮ್ರ ಹಿತ್ತಾಳೆ ಪಂಚಲೋಹ ಅಥವಾ ಬೆಳ್ಳಿ ದೀಪವನ್ನು ಹಚ್ಚಬಹುದು ಅದರಲ್ಲೂ ಮಣ್ಣಿನ ದೀಪ ತುಂಬಾನೇ ಶ್ರೇಷ್ಠವಾಗಿದೆ ಇದರ ಜೊತೆಯಲ್ಲಿ ಕಾಮಾಕ್ಷಿ ದೀಪವನ್ನು ಹಚ್ಚುವುದು ಕೂಡ ತುಂಬಾ ಒಳ್ಳೆಯದು.
ಕಾಮಾಕ್ಷಿ ದೀಪವನ್ನು ದೇವರ ಮನೆ ಮುಂದೆ ಮನೆಯ ಮುಖ್ಯ ದ್ವಾರದ ಬಳಿ ತುಳಿಸಿ ಮತ್ತು ಅರಳಿಕಟ್ಟೆ ಮುಂದೆ ಹಚ್ಚುವುದು ತುಂಬಾ ಶ್ರೇಷ್ಠವಾಗಿದೆ ಯಾವುದೇ ದೀಪವಾಗಲಿ ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಉರಿಯುತ್ತಿರಬೇಕು. ಉತ್ತರ ದಿಕ್ಕಿನಲ್ಲಿ ದೀಪವನ್ನು ಹಚ್ಚಿದರೆ ಹಣ ಹಣದ ಸಮಸ್ಯೆ ಪರಿಹಾರವಾಗುತ್ತದೆ ಯಾವುದೇ ಕಾರಣಕ್ಕೂ ಪಶ್ಚಿಮ ದಿಕ್ಕಿನಲ್ಲಿ ಮಾತ್ರ ದೀಪವನ್ನು ಹಚ್ಚಬಾರದು ದೇವರಿಗೆ ದೀಪ ಹಚ್ಚಲು ಬೆಳಗಿನ ಬ್ರಹ್ಮ ಮುಹೂರ್ತ ಪ್ರಶಸ್ತವಾದ ಸಮಯ ಇನ್ನೂ ಸಂಜೆ ಗೋದೊಳ್ಳಿ ಸಮಯದಲ್ಲಿ ದೀಪಾರಾಧನೆ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.
ಈ ಸಮಯದಲ್ಲಿ ದೀಪಾರಾಧನೆ ಮಾಡುವುದರಿಂದ ಮನೆಗೆ ಶ್ರೇಯೋಭಿವೃದ್ಧಿ ಆಗುತ್ತದೆ ದೇವರಿಗೆ ಹಚ್ಚುವ ದೀಪ ಯಾವಾಗಲು ಶುಭವಾಗಿರಬೇಕು ದೀಪಗಳು ಸಮನಾಗಿ ಇರಬೇಕು ಯಾವುದೇ ರೀತಿ ಭಿನ್ನವಾಗಿ ಇರಬಾರದು. ದೀಪವನ್ನು ಸ್ವಲ್ಪ ಎತ್ತರದ ಸ್ಥಳದಲ್ಲಿ ಇಡಬೇಕು ಯಾವುದೇ ಕಾರಣಕ್ಕೂ ದೀಪವನ್ನು ನೆಲದ ಮೇಲೆ ಇಡಬೇಡಿ ಪ್ಲೇಟ್ ಮೇಲೆ ದೀಪವನ್ನು ಹಚ್ಚಬೇಕು ದೀಪವನ್ನು ಆದಷ್ಟು ನೆಲದ ಮೇಲೆ ಇಡಬೇಡಿ.
ಒಂದುವೇಳೆ ಹಿತ್ತಾಳೆ ಪ್ಲೇಟ್ ಇಲ್ಲವಾದರೆ ಒಂದು ರಂಗೋಲಿ ಎಳೆಯನ್ನಾದರೂ ಹಾಕಿ ಅದರ ಮೇಲೆ ವೀಳ್ಯದೆಲೆ ಇಟ್ಟು ದೀಪವನ್ನು ಹಚ್ಚಿದರೆ ಕೂಡ ತುಂಬಾನೇ ಒಳ್ಳೆಯದಾಗುತ್ತದೆ ಆದಷ್ಟು ದೀಪಕ್ಕೆ ಹಚ್ಚುವ ಎಣ್ಣೆ ಶುದ್ದವಾಗಿ ತೆಳುವಾಗಿರಬೇಕು ಇನ್ನು ತುಪ್ಪದ ದೀಪ ಹಚ್ಚಿದರೆ ತುಂಬಾನೇ ಒಳ್ಳೆಯದಾಗುತ್ತದೆ ಕೊಬ್ಬರಿ ಎಣ್ಣೆ ಮತ್ತು ತುಪ್ಪ ಶೀಘ್ರ ಫಲವನ್ನು ಕೊಡುತ್ತದೆ ಹೇಳಿನ ಎಣ್ಣೆ ಬಳಸುವುದರಿಂದ ನಿಮ್ಮ ಮನೆಯಲ್ಲಿ ಶುಭಸೂಚನೆ ಹೆಚ್ಚಾಗುತ್ತದೆ ಪ್ರತಿದಿನ ಎಳ್ಳಿನ ಎಣ್ಣೆ ಹಚ್ಚುವುದರಿಂದ ಶನಿ ಮತ್ತು ಆಂಜನೇಯನ ಅನುಗ್ರಹ ಸಿಗುತ್ತದೆ ಕುಲದೇವರಿಗೆ ಆದಷ್ಟು ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚಿ ಈ ರೀತಿ ದೀಪ ಹಚ್ಚಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.
ಸುಬ್ರಹ್ಮಣ್ಯ ದೇವರಿಗೆ ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಅಂತನ ಭಾಗ್ಯ ಸಿಗುತ್ತದೆ ವೆಂಕಟೇಶ್ವರ ಸ್ವಾಮಿಯ ಪೂಜೆಯನ್ನ ಮಾಡುವವರು ಪ್ರತಿ ಶನಿವಾರ ಎರಡು ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಬೇಕಾಗುತ್ತದೆ ಮುಖ್ಯವಾಗಿ ಕಾಮಾಕ್ಷಿ ದೀಪ ಹಚ್ಚಿದರೆ ಸಾವಿರ ದೀಪ ಹಚ್ಚಿದಷ್ಟು ಫಲ ಸಿಗುತ್ತದೆ. ಈ ರೀತಿಯಾಗಿ ದೀಪಾರಾದರೆ ಮಾಡುವುದರಿಂದ ಯಶಸ್ಸು ಖಂಡಿತ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.