ಸ್ವಾಮೀ ವಿವೇಕಾನಂದರ ಸಾವಿನ ರಹಸ್ಯ ಇದೇ ನೋಡಿ||ಜೈ ಸನಾತನ!!
ಅದು ಸೆಪ್ಟೆಂಬರ್ 11, 1893 ಅಮೇರಿಕಾದ ಚಿಕಾಗೋದಲ್ಲಿ ನಡೆಯುತ್ತಿದ್ದ ವಿಶ್ವ ಸರ್ವಧರ್ಮ ಸಮ್ಮೇಳನ ಹಲವು ದೇಶಗಳು ನಾನಾ ಜ್ಞಾನಿಗಳು ಸೇರಿದಂತಹ ಆಡಂಬರದ ಸಮ್ಮೇಳನ ಅದು! ಅಲ್ಲಿ ನಮ್ಮ ಭಾರತವನ್ನು ಭಾರತೀಯ ಸಂಸ್ಕೃತಿಯನ್ನು, ಸಂಪ್ರದಾಯವನ್ನು ಆಚಾರ ವಿಚಾರಗಳನ್ನು ಸನಾತನ ಧರ್ಮಗಳನ್ನು ಹೇಳುವುದಕ್ಕೆ ಸಿದ್ಧವಾಗಿದ್ದರು ಸ್ವಾಮಿ ವಿವೇಕಾನಂದರು.
ಘಟಾನುಘಟಿ ರಾಷ್ಟ್ರಗಳ ಆಂಗ್ಲರ ನಾಡಿನಲ್ಲಿ ಕೇಸರಿ ಬಣ್ಣದ ಕಾವಿ ತೊಟ್ಟು ತಲೆಗೆ ಪೇಠ ಧರಿಸಿ ಇಡೀ ವಿಶ್ವದೆದುರು ಮಿಂಚು ಹರಿಸಿ ಬಿಟ್ಟಿದ್ದಂತಹ ದಿನವದು. ಮೈ ಡಿಯರ್ ಬ್ರದರ್ಸ್ ಅಂಡ್ ಸಿಸ್ಟರ್ಸ್ ಆಫ್ ಅಮೇರಿಕಾ ಎಂದು ಶುರುವಾದ ಆ ವಾಕ್ಯಕ್ಕೆ ಆ ಪಾರ್ಲಿಮೆಂಟಿನ ಸಭೆಯಲ್ಲಿ ಸೇರಿದ 7,000 ಜನರು ಎದ್ದು ನಿಂತು ಇಡೀ ಕಟ್ಟಡವೆ ಕಂಪಿಸುವಂತೆ ಚಪ್ಪಾಳೆಯ ಹರ್ಷೋದ್ಗಾರವನ್ನು ಹರಿಸಿಬಿಟ್ಟಿದ್ದರು.
ಆಮೇಲೆ ನಡೆದಿದ್ದೆಲ್ಲವೂ ಇತಿಹಾಸವೇ. ನಮ್ಮ ನಂಬಿಕೆಗೆ ಸ್ಪೂರ್ತಿಯೇ ಸ್ವಾಮಿಗಳಿಗೆ ಆ ಕಿಚ್ಚು ತುಂಬಿದ ಸ್ನೇಹ ಪ್ರೀತಿ ಹರಿಸಿದ ಆ ವಾಕ್ಯವೇ ಮೈ ಡಿಯರ್ ಬ್ರದರ್ಸ್ ಅಂಡ್ ಸಿಸ್ಟರ್ಸ್!. ಅದೇ ರೀತಿಯಾಗಿ ಈ ದಿನ ಸ್ವಾಮಿ ವಿವೇಕಾನಂದರ ಸಣ್ಣ ವಿಚಾರವಾಗಿ ಹಾಗೂ ಅವರ ಕೊನೆಯ ಕ್ಷಣದ ವಿಚಾರವಾಗಿ ಅವರ ಸಾವು ಹೇಗೆ ಸಂಭವಿಸಿತು ಎನ್ನುವುದರ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿಯೋಣ.
1863 ಜನವರಿ 12 ಸೋಮವಾರದಂದು ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದಂಪತಿಗಳಿಗೆ ಕಲ್ಕತ್ತಾದಲ್ಲಿ ಜನಿಸುತ್ತಾರೆ ಸ್ವಾಮಿ ವಿವೇಕಾನಂದರು. ದತ್ತ ಕುಟುಂಬವು ಶ್ರೀಮಂತಿಕೆ ಮತ್ತು ಗೌರವ ಮತ್ತು ಪ್ರತಿಷ್ಠೆಗಳನ್ನು ಗಳಿಸಿದ್ದು ಔದಾರ್ಯ ಪಾಂಡಿತ್ಯ ಮತ್ತು ದೇಶಭಕ್ತಿ ಹೊಂದಿದ್ದ ಕುಟುಂಬ. ನರೇಂದ್ರನ ತಾತನವರಾದ ದುರ್ಗಾ ಚರಣದತ್ತರು ಪರ್ಷಿಯನ್, ಸಂಸ್ಕೃತ ಹಾಗೂ ಕಾನೂನಿನಲ್ಲಿಯೂ ಸಹ ಪರಿಣಿತರಾಗಿದ್ದರು.
ಆದರೆ ತಮ್ಮ ಮಗ ವಿಶ್ವನಾಥದತ್ತರು ಜನಿಸಿದ ನಂತರ ಲೌಕಿಕ ಜಗತ್ತನ್ನು ತ್ಯಜಿಸಿ ಸನ್ಯಾಸಿಯಾಗಿ ಬಿಡುತ್ತಾರೆ, ಆಗ ಅವರಿಗೆ ಕೇವಲ 25 ವರ್ಷವಷ್ಟೇ ಆಗಿತ್ತು. ಆ ನಡೆಯೆ ಮುಂದೆ ನರೇಂದ್ರರು ತೆಗೆದುಕೊಳ್ಳುತ್ತಾರೆ. ವಿಶ್ವನಾಥ ದತ್ತರು ಕಲ್ಕತ್ತಾ ಹೈಕೋರ್ಟ್ ನಲ್ಲಿ ಸರ್ಕಾರಿ ವಕೀಲರಾಗಿದ್ದರು. ಇಂಗ್ಲಿಷ್ ಹಾಗೂ ಪರ್ಶಿಯನ್ ಭಾಷೆಗಳಲ್ಲಿ ಪ್ರವೀಣರಾಗಿದ್ದಂತಹ ಅವರು ಪರ್ಷಿಯಾದ ಪ್ರಸಿದ್ಧ ಕವಿಯಾದ.
ಅಫಿಜನ ಕವನಗಳನ್ನು ಮನೆಯವರ ಮುಂದೆ ಪಠಿಸಿ ಸಂತೋಷ ಪಡುತ್ತಿದ್ದರು. ಬೈಬಲ್ ಮತ್ತು ಸಂಸ್ಕೃತದಲ್ಲಿರುವ ಹಿಂದೂ ಧರ್ಮಗಳ ಅಧ್ಯಯನದಿಂದ ಆನಂದವನ್ನು ಅನುಭವಿಸುತ್ತಿದ್ದರು.ಅವರು ಬಹಳ ಉದಾರಿಗಳಾಗಿದ್ದರು, ಅವರಿಗೆ ಬಡಜನರಲ್ಲಿ ಅಪಾರ ಸಹಾನುಭೂತಿ ಇತ್ತು. ಆದರೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಲೋ ಏನೋ ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳಲ್ಲಿ ಪ್ರಗತಿ ಪರ ಮನೋಭಾವ ಉಳ್ಳವರಾಗಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.