ತನ್ನ ಎಲ್ಲಾ ಆಸ್ತಿ ಜನರಿಗೆ ಕೊಟ್ಟ?? ಈ ಖ್ಯಾತ ನಟ ಯಾರು!!

ಭಾರತೀಯ ಚಿತ್ರರಂಗದಲ್ಲಿ ಈ ನಟ ಒಬ್ಬ ಅದ್ಭುತ ಕಲಾವಿದ ಯಾವ ಪಾತ್ರ ಕೊಟ್ಟರು ಸರಿಯೇ ಸೈ ಎನಿಸುವಂತೆ ನಟನೆ ಮಾಡಿ ಹೀರೋ ಆಗಿ ವಿಲನ್ ಆಗಿ ಯಾವುದೇ ಭಾಷೆ ಆದರೂ ಸರಿ ಅಷ್ಟೇ ಗಡಸಿನ ನಟನೆ ಇನ್ನೊಂದು ಕಡೆ ತನ್ನ ಆಸ್ತಿಯನ್ನೆಲ್ಲ ಇತರರಿಗೆ ಹಂಚಿ.

ನಿಜವಾದ ಮಾನವೀಯತೆಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಇಷ್ಟಕ್ಕೂ ಈ ನಟ ಯಾರು ಅವರೇ ನಾನಾ ಪಾಟೇಕರ್ ಕಡು ಬಡತನದಲ್ಲಿ ಹುಟ್ಟಿದಂತಹ ನಾನಾ ಪಾಟೇಕರ್ ರಸ್ತೆ ಪಕ್ಕದಲ್ಲಿ ಪೇಂಟಿಂಗ್ ಹಾಗೂ ಸಿನಿಮಾ ಪೋಸ್ಟರ್ ಗಳನ್ನು ಗೋಡೆಗೆ ಅಂಟಿಸುವುದು ಹೀಗೆ ಸಿಕ್ಕ ಸಿಕ್ಕ ಎಲ್ಲಾ ಕೆಲಸವನ್ನು ಹಾಗೂ ಕೈಗೆ ಸಿಕ್ಕ ಎಲ್ಲಾ ಕೆಲಸವನ್ನು ಕೂಡ ಮಾಡುತ್ತಿರುತ್ತಾರೆ. ಆಗ ದಿನಕ್ಕೆ 30 ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದರು.

ವ್ಯವಸಾಯದ ಕುಟುಂಬದಲ್ಲಿ ಹುಟ್ಟಿದಂತಹ ನಾನಾ ಪಾಟೇಕರ್ ಬಡತನದಿಂದ ಆಚೆ ಬರಬೇಕು ಎಂದು ತೀರ್ಮಾನ ಮಾಡಿ ಥಿಯೇಟರ್ ಆರ್ಟಿಸ್ಟ್ ಆಗಿ ನಂತರ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿ ತಮ್ಮ ಅಮೋಘ ನಟನೆಯಿಂದ ಶತ್ರುಗಳನ್ನು ಸಹ ಮೆಚ್ಚಿಸಿದ್ದರು. ಕೃಷಿಕನಾಗಿ ತನ್ನ ತಂದೆ ಮತ್ತು ತಾನು ಅನುಭವಿಸಿದಂತಹ ಎಲ್ಲಾ ಕಷ್ಟಗಳನ್ನು ಕೂಡ ನಾನಾ ಪಾಟೇಕರ್ ಎಂದು ಮರೆಯಲಿಲ್ಲ.

ರೈತರ ಅಭಿವೃದ್ಧಿಗಾಗಿ ಪಣತೊಟ್ಟಿದಂತಹ ಈ ನಟ ನಾಂ ಫೌಂಡೇಶನ್ ಅನ್ನು ಕಟ್ಟಿ ಆತ್ಮಹತ್ಯೆ ಮಾಡಿಕೊಂಡಂತಹ 400 ಕುಟುಂಬಗಳಿಗೆ 15,000 ದಂತೆ ಎಲ್ಲರಿಗೂ ಹಂಚಿದರು. ಹಾಗೂ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ ರೈತರಿಗೆ ಉತ್ತಮ ಮೂಲ ಸೌಕರ್ಯ ಅಂದರೆ ಮೂಲ ನೀರಿನ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ.

ರೈತರಿಗೆ ಮೂಲಸೌಕರ್ಯವನ್ನು ಒದಗಿಸುವುದಕ್ಕೆ ಸುಮಾರು 22 ಕೋಟಿ ಹಣವನ್ನು ಶೇಖರಿಸಿದ ನಾನಾ ಪಾಟೇಕರ್ ಅವರು.ತಾನು ಸಂಪಾದಿಸಿದ ಹಣವನ್ನು ಅದರಲ್ಲಿ ಶೇಕಡ 90ರಷ್ಟನ್ನು ಫೌಂಡೇಶನ್ ಗೆ ಹಾಕಿ ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಕಷ್ಟಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ನಾನಾ ಪಾಟೇಕರ್ ಈಗಲೂ ಸಹ ಒಂದು ಹಳೆಯ ಸಿಂಗಲ್ ಬೆಡ್ ರೂಂನಲ್ಲಿ ವಾಸ ಮಾಡುತ್ತಾ ಇದ್ದಾರೆ.

ಶೂಟಿಂಗ್ ಇಲ್ಲದ ವೇಳೆಯಲ್ಲಿ ಹೆಗಲ ಮೇಲೆ ಒಂದು ಟವಲ್ ಹಾಕಿಕೊಂಡು ಹಳ್ಳಿ ಹಳ್ಳಿಗಳನ್ನು ಸುತ್ತುವ ಇವರು ದಿನವೆಲ್ಲ ಹಳ್ಳಿಗಳಲ್ಲಿ ಇದ್ದು ಅವರ ತೊಂದರೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವವರೆಗೂ ಕೂಡ ಬಿಡುವುದಿಲ್ಲ ವ್ಯವಸಾಯ ಮಾಡುವ ರೈತರಿಗೆ ನೀರಿನ ವ್ಯವಸ್ಥೆ ಮಾಡುವುದು ನಾನಾ ಪಾಟೇಕರ್ ಅವರ ಮುಖ್ಯ ಉದ್ದೇಶವಾಗಿದೆ. ನಾನಾ ಪಾಟೇಕರ್ ಅವರು ನಮ್ಮ ಅಣ್ಣ ಎನ್ನುವ ಭಾವನೆ ನೂರಾರು ಹಳ್ಳಿಯ ಜನರ ಮನಸ್ಸಿನಲ್ಲಿ ಇದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.