ಮೇಷ ರಾಶಿ:- ಕೆಲಸ ಹಾಗೂ ನಡವಳಿಕೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಇಂದು ದೂರವಾಗುತ್ತದೆ. ಇಂದು ಹೊಸ ಯೋಜನೆಯನ್ನು ಸಹ ಪ್ರಾರಂಭಿಸಬಹುದು. ವ್ಯಾಪಾರಸ್ಥರಿಗೆ ಈ ದಿನ ಬಹಳ ಮುಖ್ಯ ದಿನವಾಗಿರುತ್ತದೆ. ಮೇಲಾಧಿಕಾರಿಗಳು ಸಲಹೆ ನೀಡಿದರೆ ಅದನ್ನು ನಿರ್ಲಕ್ಷಿಸಬೇಡಿ. ಹಣದ ವಿಷಯದಲ್ಲಿ ನಿಮಗೆ ಈ ದಿನ ಯಾವುದೇ ಕೊರತೆ ಇರುವುದಿಲ್ಲ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:30ರ ವರೆಗೆ.

ವೃಷಭ ರಾಶಿ:-ವ್ಯಾಪಾರಸ್ಥರು ಅಥವಾ ಉದ್ಯೋಗಿಗಳು ನಿಮ್ಮ ಕೆಲಸದ ಸ್ಥಳಗಳಲ್ಲಿ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡರೆ ಹೆಚ್ಚಿನ ಲಾಭವನ್ನು ಗಳಿಸುತ್ತೀರಿ. ದಿನದ ಆರಂಭದಲ್ಲಿ ಕೆಲಸದ ಬಗ್ಗೆ ಸೋಮಾರಿತನ ಇರಬಹುದು. ಈ ದಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 8:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ

ಮಿಥುನ ರಾಶಿ:- ಕುಟುಂಬದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಅವೆಲ್ಲವೂ ಈ ದಿನ ನಿವಾರಣೆಯಾಗುತ್ತದೆ. ನಿಮ್ಮ ಮನೆಯ ಹಿರಿಯ ರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಕೆಲಸದ ಮೇಲೆ ಹೆಚ್ಚಿನ ಗಮನಹರಿಸುವಂತೆ ಸೂಚಿಸಲಾಗಿದೆ. ಹಿರಿಯ ಸಹೋದರರಿಂದ ಯಾವುದೇ ಪ್ರಮುಖ ಕೆಲಸವನ್ನು ಪೂರ್ಣಗೊಳಿಸ ಬಹುದು. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 12 ಗಂಟೆಯಿಂದ ಮಧ್ಯಾಹ್ನ 3:30ರ ವರೆಗೆ.

ಕಟಕ ರಾಶಿ:- ಇಂದು ಹಣ ಸಂಪಾದಿಸಲು ಹಲವಾರು ಮಾರ್ಗಗಳು ಸಿಗುತ್ತದೆ. ಹೂಡಿಕೆಯ ವಿಷಯದಲ್ಲಿ ಈ ದಿನ ಹೆಚ್ಚು ಲಾಭ ಸಿಗಲಿದೆ. ಮನೆಯ ಸದಸ್ಯರು ತಮ್ಮ ಕೆಲಸದಲ್ಲಿ ಸಂತೋಷವಾಗಿರುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಸಮಸ್ಯೆಗಳು ಕಾಣಿಸಬಹುದು. ಮಕ್ಕಳೊಂದಿಗೆ ಈ ದಿನ ಉತ್ತಮ ಸಮಯವನ್ನು ಕಳೆಯುತ್ತೀರಿ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಸಿಂಹ ರಾಶಿ:- ಸರ್ಕಾರಿ ಉದ್ಯಮಿಗಳಿಗೆ ಈ ದಿನ ಶುಭದಿನವಾಗಿರುತ್ತದೆ. ದೊಡ್ಡ ವ್ಯಾಪಾರಿಗಳು ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವು ವೇಗವಾಗಿ ಬೆಳೆಯುತ್ತದೆ. ನಿಮ್ಮ ನಿಂತು ಹೋದ ಕೆಲವೊಂದಷ್ಟು ಕೆಲಸಗಳು ಈ ದಿನ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಹ ಉದ್ಯೋಗಿಗಳೊಂದಿಗೆ ಇಂದು ಜಾಗರೂಕತೆಯನ್ನು ವಹಿಸಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ

ಕನ್ಯಾ ರಾಶಿ:-ಹಿಂದೆ ಮಾಡಿದ ತಪ್ಪುಗಳಿಂದ ಈ ದಿನ ಪಾಠ ಕಲಿಯುವಿರಿ. ಮಧ್ಯಾಹ್ನದ ಹೊತ್ತಿಗೆ ಕೆಲವೊಂದಷ್ಟು ಜನರಿಗೆ ಲಾಭ ದೊರೆಯಲಿದೆ ಹಾಗೂ ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮನೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ನೀವು ಅನಗತ್ಯ ಚಿಂತೆ ಮಾಡುವುದನ್ನು ಬಿಡಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆವರೆಗೆ.

ತುಲಾ ರಾಶಿ:- ಈ ದಿನ ಒಂದೇ ಸಮಯದಲ್ಲಿ ಒಂದೇ ಕೆಲಸವನ್ನು ಮಾಡಲು ಪ್ರಯತ್ನಿಸಿ. ನಿಮ್ಮ ಮೇಲೆ ಹೆಚ್ಚು ಒತ್ತಡವನ್ನು ಹೇರಬೇಡಿ. ವೈವಾಹಿಕ ಜೀವನದಲ್ಲಿ ಸುಂದರ ತಿರುವು ಪಡೆಯಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ವ್ಯಾಪಾರಸ್ಥರು ಇಂದು ಸ್ವಲ್ಪ ನಿರಾಶೆಯನ್ನು ಅನುಭವಿಸಿದಿರಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ವೃಶ್ಚಿಕ ರಾಶಿ:- ಈ ದಿನ ನೀವು ಕುಟುಂಬದ ಜೀವನದಲ್ಲಿ ಹೆಚ್ಚು ಕಾಳಜಿಯನ್ನು ವಹಿಸಬೇಕು. ನಿಮ್ಮ ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಗಮನವನ್ನು ಹರಿಸಿ. ಸಂಗಾತಿಯ ಆರೋಗ್ಯದಲ್ಲಿ ಕೆಲವೊಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಿಕ್ಕಿ ಕೊಂಡಿರುವಂತಹ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 8:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಧನಸ್ಸು ರಾಶಿ:- ಇಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ. ವ್ಯಾಪಾರಿಗಳಿಗೆ ಈ ದಿನ ಮಿಶ್ರ ದಿನವಾಗಿರುತ್ತದೆ. ಆರ್ಥಿಕ ರಂಗದಲ್ಲಿರುವವರಿಗೆ ಈ ದಿನ ಸಾಧಾರಣ ದಿನವಾಗಿರುತ್ತದೆ. ನಿಮ್ಮ ಮನೆ ದೇವರ ಆರಾಧನೆಯನ್ನು ಮಾಡುವುದು ಉತ್ತಮ. ಇದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ವರೆಗೆ.

ಮಕರ ರಾಶಿ:- ಈ ದಿನ ಕೆಲಸದಲ್ಲಿ ಒತ್ತಡ ಉಂಟಾಗಬಹುದು. ಇದರಿಂದ ಕೆಲವೊಂದಷ್ಟು ಸಮಸ್ಯೆಗಳು ಕೂಡ ಉಂಟಾಗಬಹುದು. ಈ ದಿನ ಹೆಚ್ಚು ಶ್ರಮ ಪಟ್ಟು ಕೆಲಸ ಮಾಡಿದರೆ ಅದೃಷ್ಟದ ಅವಕಾಶಗಳು ಸಿಗುತ್ತದೆ. ಮನೆಯವರ ಸಂಪೂರ್ಣವಾದ ಬೆಂಬಲವನ್ನು ಸಹ ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ.

ಕುಂಭ ರಾಶಿ:- ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಪಡೆಯಬಹುದು. ಈ ದಿನ ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ದಿನದ ಮಧ್ಯಂತರದಲ್ಲಿ ಕೆಲವೊಂದಷ್ಟು ಸಮಸ್ಯೆಗಳು ಕೂಡ ಬರಬಹುದು. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 8:30 ರಿಂದ 10:30 ರವರೆಗೆ.

ಮೀನ ರಾಶಿ:- ಆರ್ಥಿಕ ರಂಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ದಿನ ಬಹಳ ಕಷ್ಟಕರ ದಿನವಾಗಿರುತ್ತದೆ. ನಿಮ್ಮ ಹಳೆಯ ಸಾಲಗಳನ್ನು ಈ ದಿನ ತೀರಿಸಬಹುದು ಅದೇ ರೀತಿಯಾಗಿ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಕೂಡ ಅಷ್ಟೇ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ವ್ಯಾಪಾರಸ್ಥರಿಗೆ ಸರ್ಕಾರದ ನಿಯಮಗಳನ್ನು ಸೂಚಿಸುವಂತೆ ತಿಳಿಸಲಾಗಿದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.