ಹಿರಿಯರು ಯಾವಾಗಲೂ ಒಂದು ಮಾತನ್ನ ಹೇಳ್ತಾ ಇರ್ತಾರೆ. ಜನಸಾಮಾನ್ಯನ ತೀರಾ ಕೆಣಕುವುದಕ್ಕೆ ಹೋಗಬಾರದು. ಅದು ಪರಿಣಾಮ ಬೇರೆ ರೀತಿಯಲ್ಲಿರುತ್ತೆ ಅಂತ ಯಾಕೆ ಈಗ ಈ ಮಾತು ನೆನಪಾಯಿತು ಅಂದ್ರೆ ವರ್ತೂರು ಸಂತೋಷ ವಿಚಾರದಲ್ಲಿ ಹೆಚ್ಚು ಕಡಿಮೆ ಹಾಗೆ ಆಯ್ತು. ಹುಲಿ ಉಗುರು ಪೆಂಡೆಂಟ್ ಧರಿಸಿದ್ದು ತಪ್ಪೇ ನಾನು ವರ್ತೂರು ಸಂತೋಷನ ಸಮರ್ಥನೆ ಮಾಡಿಕೊಳ್ಳೋದಕ್ಕೆ ಹೋಗ್ತಾ ಇಲ್ಲ ಆದರೆ ಹೊರತು ಸಂತೋಷನ್ನ ಬಂಧಿಸಿ,ಇನ್ನು ಉಳಿದಂಥ ವಿಐಪಿಗಳಿಗೆ ಅಥವಾ ದುಡ್ಡಿದ್ದಂತವರಿಗೆ ಅರಣ್ಯ ಅಧಿಕಾರಿಗಳು ಕ್ಲೀನ್‌ಚಿಟ್ ಕೊಡುವಂತ ಕೆಲಸ ಮಾಡಿದ್ದರು.

ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸೋಶಿಯಲ್ ಮೀಡಿಯಾ ಸೇರಿದಂತೆ ಸಾರ್ವಜನಿಕ ವಲಯದಿಂದ ತೀವ್ರವಾದ ಆಕ್ರೋಶ ವ್ಯಕ್ತವಾಗಿತ್ತು. ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತು ಅಂದ್ರೆ ಇಲ್ಲಿಯವರೆಗೆ ಕೆಲವೇ ಕೆಲವು ಮಂದಿಯ ನಡುವೆ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ ಇದೀಗ ಕರ್ನಾಟಕದ ಮೂಲೆಮೂಲೆಗೆ ಮನೆ ಮಾತಾಗಿದ್ದಾರೆ. ಆರಂಭದಲ್ಲಿ ಒಂದು ಸಂತೋಷ ಕುರಿತಾಗಿ ಸಣ್ಣ ಮಟ್ಟಿಗಿನ ಆಕ್ರೋಶ ಇತ್ತು ನೋಡಿ. ಹುಲಿಯುಗುರು ಪೆಂಡೆಂಟ್ ಧರಿಸಿ ಶೋಕಿ ಮಾಡ್ತಿದ್ದಾನೆ ಅಂತ. ಆದರೆ ಇದೀಗ ಅದೆಲ್ಲವೂ ಕೂಡ ಅನುಕಂಪವಾಗಿ ಪರಿವರ್ತನೆ ಆಗಿದೆ.

ಇವತ್ತು ವರ್ತೂರು ಸಂತೋಷ್ ಜಾಮೀನು ಸಿಕ್ಕಿ ಜೈಲಿನಿಂದ ಹೊರಗಡೆ ಬಂದ್ರು. ಹೊರಗಡೆ ಬರುತ್ತಿದ್ದ ಹಾಗೆ ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ರಾಜಕಾರಣಿಗಳು ಜೈಲಿನ ಹೊರಗಡೆ ಬರುವಾಗ ಅಥವಾ ಸಿನಿಮಾ ನಟರು ಬರುವಾಗ ಯಾವ ರೀತಿಯಾಗಿ ಜನ ಜೈಕಾರ ಹಾಕುತ್ತಾರೆ, ಸನ್ಮಾನ ಮಾಡ್ತಾರೆ, ಅಭಿಮಾನದಿಂದ ಅವರನ್ನು ಹಾಡಿ ಹೊಗಳುವ ಕೆಲಸವನ್ನು ಮಾಡುತ್ತಾರೆ. ಇವತ್ತು ಸಂತೋಷ ವಿಚಾರದಲ್ಲೂ ಕೂಡ ಹಾಗೆ ಇತ್ತು. ಬಿಗ್ ಬಾಸ್ ಮನೆಗೆ ಹೋದಾಗಲೂ ಕೂಡ ಒಂದಷ್ಟು ಮಂದಿಗೆ ಮಾತ್ರ ಆಗಿದ್ದರು.

ಆದರೆ ಜೈಲಿಗೆ ಹೋಗಿ ಹೊರಗಡೆ ಬರುತ್ತಿದ್ದ ಹಾಗೆ ಇಡೀ ಕರ್ನಾಟಕಕ್ಕೆ ಒಂದು ಹಂತಕ್ಕೆ ವರ್ತೂರು ಸಂತೋಷ ಮನೆಮಾತಾಗಿಬಿಟ್ಟರು.ಅಷ್ಟು ಮಾತ್ರ ಅಲ್ಲ ಹೊರತು ಸಂತೋಷ ಪ್ರಕರಣ ಬೇರೆ ಬೇರೆ ರೀತಿಯ ಪಾಠವನ್ನು ಜನರಿಗೆ ಕಲಿಸುವದು ಜೊತೆಗೆ ಬೇರೆ ಬೇರೆ ವಿಚಾರಗಳು ಕೂಡ ಜನರಿಗೆ ಗೊತ್ತಾಗುವ ಹಾಗಾಯ್ತು. ಒಂದು ಮೊದಲ ವಿಚಾರ ಅಂದ್ರೆ ನಾನು ಆಗಲೇ ಹೇಳಿದ ಹಾಗೆ ಜನಸಾಮಾನ್ಯನ ತೀರಾ ಕೆಣಕುವುದಕ್ಕೆ ಹೋಗಬಾರದು. ಪರಿಣಾಮ ಬೇರೆ ರೀತಿಯಲ್ಲಿರುತ್ತೆ ಅಂತ.

ಮತ್ತೊಂದು ಏನಪ್ಪ ಅಂದ್ರೆ ನಮ್ಮ ಕಾನೂನು ಹೇಗಿದೆ. ಜನಸಾಮಾನ್ಯರಿಗೊಂದು ಶ್ರೀಮಂತರಿಗೊಂದು ಕಾನೂನು ಅಂತ ಹಿಂದಿನಿಂದ ಹೇಳ್ಕೊಂಡು ಬರ್ತಾ ಇದ್ರು. ಅದರ ಪ್ರತ್ಯಕ್ಷ ವಾಗಿ ನಾವೆಲ್ಲರೂ ಕೂಡ ನೋಡಿ ಬಿಟ್ಟುವಿ ನಮ್ಮ ಕಾನೂನು ವ್ಯವಸ್ಥೆ ನಮ್ಮ ಅಧಿಕಾರಿಗಳು ನಮ್ಮ ಒಂದಷ್ಟು ಇಲಾಖೆಯ ಮುಖವಾಡ ಎಲ್ಲವೂ ಕೂಡ ಬಟಾಬಯಲಾಗಿ ಹೋಯಿತು. ಒಟ್ಟಾರೆಯಾಗಿ ಜೈಲಿಗೆ ಹೋಗುವ ಸಂದರ್ಭದಲ್ಲಿ ತೀರಾ ಸಾಮಾನ್ಯವಾಗಿ ಜೈಲಿಗೆ ಹೋಗಿ ದಂತ ತ್ತೂರು ಸಂತೋಷ್ ಜೈಲಿನಿಂದ ವಾಪಸ್ ಬರುವ ಸಂದರ್ಭದಲ್ಲಿ ಹೀರೋ ರೀತಿಯಲ್ಲಿ ವಾಪಾಸ್ ಬಂದಿದ್ದಾರೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ. ಏನಾಗ್ತಿದೆ? ಒಂದ ಷ್ಟು ವಿಚಾರವನ್ನು ನಿಮ್ಮ ಮುಂದೆ ಇಡ್ತೀನಿ ಹೊರತು ಸಂತೋಷ ಬಿಗ್ ಬಾಸ್ ಮನೆಗೆ ವಾಪಸ್ ಹೋಗ್ತಾರಾ ಎಲ್ಲರಿಗೂ ಕೂಡ ಇದ್ದಂತ ಒಂದಷ್ಟು ಕುತೂಹಲ ಜೊತೆಗೆ ಪ್ರಶ್ನೆ ಯಾಕಂದ್ರೆ ಬಿಗ್ ಬಾಸ್ ಮನೆಯಿಂದ ಒಮ್ಮೆ ಹೊರಗಡೆ ಬಂದ್ರೆ ಮತ್ತೆ ಒಳಗೆ ಹೋಗಿದಂತ ಉದಾಹರಣೆ ತೀರಾ ಕಡಿಮೆ ಇದೆ.ಅಲ್ಲೂ ಕೂಡ ಸಂತೋಷ್ ಈಗಲೂ ಕೂಡ ಕಾನೂನು ಪ್ರಕ್ರಿಯೆ ವ್ಯಾಪ್ತಿ ಒಳಗಡೆ ಇದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.