ಇಂದು ನಾನು ನಿಮಗೆ ತಿಳಿಸಲು ಹೊರಟಿರುವ ವಿಷಯವೆಂದರೆ ಶ್ರೀರಾಮನ ಸಾವಿಗೆ ನಿಜವಾದ ಕಾರಣ ಯಾರು. ನಿಮಗೆಲ್ಲ ತಿಳಿದಿರುವಂತೆ ಹುಟ್ಟು ಉಚಿತ ಸಾವು ಖಚಿತ. ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯು ಸಾವನಪಲೇಬೇಕು ಎಂಬುದು ವಿಧಿ ಲಿಖಿತ ಎಂದು ಜಗತ್ತಿನ ಎಲ್ಲಾ ಧರ್ಮ ಗ್ರಂಥಗಳು ಅಷ್ಟೇ ಅಲ್ಲ ವಿಜ್ಞಾನವು ಕೂಡ ಒಪ್ಪಿಕೊಳ್ಳುತ್ತದೆ. ಇನ್ನೂ ಸನಾತನ ಧರ್ಮದ ನಂಬಿಕೆಯ ಪ್ರಕಾರ ಕಲಿಯುಗದಲ್ಲಿ ಧರ್ಮ ರಕ್ಷಣೆಗಾಗಿ ಅದೆಷ್ಟು ಬಾರಿ ದೇವಾನುದೇವತೆಗಳು ಧರ್ಮರಕ್ಷಣೆಗಾಗಿ ಭೂಮಿಯ ಮೇಲೆ ಅವತ್ತರಿಸಿರುವ ಉದಾಹರಣೆಗಳು ಕೂಡ ನಿಮಗೆ ಗೊತ್ತಿದೆ. ಹಾಗೆಯೇ ಅಯೋಧ್ಯೆಯ ರಾಜ ದಶರಥನ ಹಿರಿಯ ಮಗನಾಗಿ ಜನಿಸಿದ ಶ್ರೀರಾಮ.

ಶ್ರೀ ರಾಮನನ್ನು ಹಿಂದೂ ಧರ್ಮದ ಮರ್ಯಾದ ಪುರುಷೋತ್ತಮ ಎಂದೇ ಕರೆಯಲಾಗುತ್ತದೆ. ಅಕ್ಷರ ಸಹ ಪರಿಪೂರ್ಣ ವ್ಯಕ್ತಿತ್ವ ಸಂಪೂರ್ಣವಾಗಿ ಸ್ವಯಂ ನಿಯಂತ್ರಣವನ್ನು ಸಾಧಿಸಿದಂತಹವರು. ಶ್ರೀ ರಾಮನ ಜೀವನ ಕಠಿಣ ಪರಿಶ್ರಮಗಳು ನೋವುಗಳಿಂದ ತುಂಬಿದವು. ಆಗಿದ್ದರು ಸಹ ಶ್ರೀರಾಮ ಸಂಪೂರ್ಣ ಧರ್ಮಕ್ಕೆ ಬದ್ಧರಾಗಿದ್ದರು ದೇವರಿಗೆ ಸಾವಿಲವಾದರು ಮನುಷ್ಯ ಜನ್ಮವೆತ್ತಿದ ಮೇಲೆ ಮನುಷ್ಯನಂತೆ ಕೊನೆಗಾಣಬೇಕಷ್ಟೇ ಹಾಗೆಯೇ ಶ್ರೀರಾಮರ ಅಂತ್ಯ ಕೂಡ ಆಯ್ತು. ಆಗೆಯೇ ಶ್ರೀ ರಾಮರ ಹುಟ್ಟು ವನವಾಸ ರಾಮಾಯಣದ ಯುದ್ಧ ಇವೆಲ್ಲವೂ ಗೊತ್ತು ಆದರೆ ಶ್ರೀ ರಾಮರ ಅಂತ್ಯ ಅಥವಾ ಕೊನೆಯ ಹೇಗಾಯಿತು ಎಂದು ಎಷ್ಟೋ ಜನಕ್ಕೆ ಗೊತ್ತಿಲ್ಲ.

ಶಕ್ತಿಯುತವಾದಂತಹ ಕುತೂಹಲಕಾರಿಯಾದಂತಹ ಈ ವಿಷಯ ಎಷ್ಟೋ ಜನಕ್ಕೆ ತಿಳಿದಿಲ್ಲ. ರಾಮನ ಅವತಾರ ರಾಮನ ಅವತಾರ ಅಂತ್ಯ ಹೇಗಾಯಿತು ಎಂದು ತಿಳಿಯಲು ಹೊರಟರೆ ಭಗವಂತನ ಲೀಲೆಯ ಅವತಾರಗಳ ಸಂದರ್ಭ ತಂತಾನೆ ಸೃಷ್ಟಿಯಾಗುತ ಹೋಗುತ್ತಿದ್ದ ಸಂದರ್ಭಗಳು ಕಣ್ಣ ಮುಂದೆ ಬರುತ್ತದೆ. ಸೀತಾಮಾತೆಯು ತನ್ನ ಅವತಾರವನ್ನು ಭೂಮಿಯ ಮೇಲೆ ಕೊನೆಗೊಳಿಸಿದ ಬಳಿಕ ಶ್ರೀ ರಾಮನ ಸೋದರರಾದಂತಹ ಭರತ, ಶತ್ರುಜ್ಞ, ಕೂಡ ಇಹಲೋಕ ಯಾತ್ರೆಯನ್ನು ಮುಕ್ತಾಯಗೊಳಿಸುತ್ತಾರೆ. ಆದರೆ ಲಕ್ಷ್ಮಣ, ಹನುಮಂತ, ಮಾತ್ರ ರಾಮನ ಹಿಂದೆ ನೆರಳಿನಂತೆ ಇರುತ್ತಾರೆ.
ಅವರೆಲ್ಲ ವೈಕುಂಠದಲ್ಲಿ ಸೇರಿ ಶ್ರೀ ರಾಮನ ಆಗಮನವನ್ನು ಕಾಯುತ್ತಿರುತ್ತಾರೆ.

ಇಂತಹ ಸಮಯದಲ್ಲಿ ಭೂಮಿಯ ಮೇಲೆ ಶ್ರೀರಾಮನ ಸೇವೆಯನ್ನು ಮಾಡಿಕೊಂಡು ಇದ್ದಂತಹ ವ್ಯಕ್ತಿಗಳೆಂದರೆ ಹನುಮಂತ ಹಾಗೂ ಲಕ್ಷ್ಮಣ ಆಗಿರುತ್ತಾರೆ. ಶ್ರೀ ರಾಮನ ಅವತಾರ ಅಂತಿಮ ಸಮೀಪಿಸಿದ ಸಂದರ್ಭ ಬಂದಾಗ ಯಮಧರ್ಮ ಬ್ರಾಹ್ಮಣನ ರೂಪ ಧರಿಸಿ ನಾನು ರಾಮನ ಜೊತೆ ಏಕಾಂತದಲ್ಲಿ ಭೇಟಿಯಾಗಬೇಕಿದೆ ಎಂದು ಶ್ರೀರಾಮರಲ್ಲಿ ಕೇಳಿಕೊಳ್ಳುತ್ತಾರೆ. ಇದರ ಜೊತೆಗೆ ಆತ ಷರತನ ಸಹ ವಿಧಿಸುತ್ತಾನೆ ತಾನು ಏಕಾಂತದಲ್ಲಿ ಸಂಭಾಷಣೆ ಮಾಡುತ್ತಿರುವಾಗ ಯಾರಾದರೂ ಅಡ್ಡಿ ಬಂದರೆ ಅಂತವರ ಶಿರಶ್ಚೇಧನ ಎಂದು ಕೇಳಿಕೊಳ್ಳುತ್ತಾನೆ. ಇಂತಹ ಮಾತಿಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪುವ ಶ್ರೀ ರಾಮ ಲಕ್ಷ್ಮಣನನ್ನು ತನ್ನ ಕೊಠಡಿಯ ದ್ವಾರಪಾಲಕನ್ನಾಗಿ ನೇಮಿಸುತ್ತಾನೆ.

ಕೊಠಡಿಯ ಬಾಗಿಲನ್ನು ಮುಚ್ಚಿದಾಗ ಯಮರಾಜನು ತನ್ನ ಅಸಲಿ ರೂಪದಲ್ಲಿ ಕಾಣಿಸಿಕೊಂಡು ಭೂಮಿಯ ಮೇಲಿನ ರಾಮನ ಅವತಾರವನ್ನು ಕೊನೆಗೊಳಿಸಿ ಯಮಲೋಕಕ್ಕೆ ಮರಳುವಂತೆ ಶ್ರೀ ರಾಮನನ್ನು ಒತ್ತಾಯಿಸುತ್ತಾರೆ. ಸ್ವತಃ ಯಮಧರ್ಮರೇ ಬಂದು ಕೇಳಿಕೊಂಡರು ಸಹ ಲಕ್ಷ್ಮಣ ಹಾಗೂ ಹನುಮಂತ ತನ್ನ ಮೇಲೆ ಇಟ್ಟಿರುವ ಭಕ್ತಿ, ಪ್ರೀತಿ, ವಿಶ್ವಾಸ, ಕಾರಣಕ್ಕಾಗಿ ಇನ್ನು ಸ್ವಲ್ಪ ಕಾಲ ರಾಮನ ಅವತಾರದಲ್ಲಿಯೇ ಭೂಮಿಯ ಮೇಲೆ ಇದ್ದು ಭೂಮಿಯ ಸೇವೆಯಲ್ಲಿ ಇರಲು ಇಚ್ಚಿಸುತ್ತೇನೆ ಎಂದು ಶ್ರೀರಾಮನು ಯಮಧರ್ಮನಿಗೆ ತಿಳಿಸುತ್ತಾನೆ. ಶ್ರೀರಾಮ ಹಾಗೂ ಹನುಮಂತನ ಬೌದ್ಧಿಕ ಪ್ರೀತಿ ಶೀಘ್ರದಲ್ಲಿ ಕೊನೆಗೊಳಿಸುವುದಾಗಿ ತಿಳಿಸುತ್ತಾರೆ.

ಶ್ರೀ ರಾಮ ಹಾಗೂ ಯಮಧರ್ಮರ ನಡುವೆ ಸಂಭಾಷಣೆ ನಡೆಯುತ್ತಿರುವಾಗ ಶ್ರೀರಾಮನನ್ನು ತತ್ತಕ್ಷಣವೇ ಭೇಟಿಯಾಗಬೇಕೆಂದು ದೂರ್ವಾಸ ಮುನಿಗಳು ಕೊಠಡಿಯ ಬಾಗಿಲನ್ನು ತೆರೆಯಲು ಮುಂದಾಗುತ್ತಾರೆ. ಕೊಠಡಿಯ ದ್ವಾರಪಾಲಕನಾಗಿದ್ದಂತಹ ಲಕ್ಷ್ಮಣ ಶ್ರೀ ರಾಮರು ಬೇರೆಯವರ ಜೊತೆ ಖಾಸಗಿ ಸಂಭಾಷಣೆಯಲ್ಲಿ ನಿರತರಾಗಿದ್ದಾರೆ ಎಂದು ಹಾಗೂ ಅವರ ಸಂಭಾಷಣೆಯೇ ಮುಗಿಯುವವರೆಗೂ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲವೆಂದು ದೂರ್ವಾಸ ಮುನಿಗಳಿಗೆ ಲಕ್ಷ್ಮಣ ಹೇಳುತ್ತಾರೆ. ಹಾಗೆಯೇ ಬಾಗಿಲ ಬಳಿ ನಿಂತಿರಬೇಕೆಂದು ವಿನಂತಿಸಿಕೊಳ್ಳುತ್ತಾರೆ. ಇದನ್ನು ನಿರಾಕರಿಸಿದಕ್ಕೆ ದುರ್ವಾಸನೆಗಳು ಸಿಡಿಮಿಡಿ ಗೊಳ್ಳುತ್ತಾರೆ.ಕೋಪದಲ್ಲಿ ದೂರ್ವಸಮುನಿಗಳು ಶ್ರೀ ರಾಮನನ್ನು ಹಾಗೂ ಅವರ ಸಾಮ್ರಾಜ್ಯವನ್ನು ಸಪಿಸುವುದಾಗಿ ತಿಳಿಸುತ್ತಾರೆ.

ಲಕ್ಷ್ಮಣನಿಗೆ ಬೇರೆ ದಾರಿ ಕಾಣದೆ ಬಾಗಿಲನ್ನು ತೆರೆದು ತನ್ನ ಸಾಮ್ರಾಜ್ಯವನ್ನು ಎಲ್ಲಾ ಕಳೆದುಕೊಳ್ಳುವ ಬದಲು ತನ್ನ ಶಿರಚ್ಚೆದನವಾಗುವುದೇ ಒಳ್ಳೆಯದು ಎಂದು ಕೊಠಡಿಯನ್ನು ಪ್ರವೇಶಿಸುತ್ತಾನೆ. ಇದರಿಂದ ರಾಮನಿಗೆ ದಿಕ್ಕೆ ತೋಚದಂತಾಗುತ್ತದೆ ಇದನ್ನರಿತ ವಶಿಷ್ಠ ಮಹರ್ಷಿಗಳು ಅಲ್ಲಿಗೆ ಆಗಮಿಸುತ್ತಾರೆ. ಶಿರಚ್ಚೆದನ ಮಾಡುವ ಮೊದಲು ಲಕ್ಷ್ಮಣನನ್ನು ಗಡಿಪಾರು ಮಾಡುವಂತೆ ಯಮಧರ್ಮನಲ್ಲಿ ಕೇಳಿಕೊಳ್ಳುತ್ತಾರೆ. ಲಕ್ಷ್ಮಣನು ಬೇಸರಗೊಂಡು ಅಯೋಧ್ಯೆಯಿಂದ ಗಡಿ ಪಾರಾಗುತ್ತಾನೆ. ಇದೇ ಕಾರಣಕ್ಕೆ ಲಕ್ಷ್ಮಣ ಬೇಸರಗೊಂಡು ಸರಯೂ ನದಿಗೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ. ಮುಂದೆ ಆದಿಶೇಷನಾಗಿ ಸ್ವರ್ಗವನ್ನು ಸೇರಿಕೊಳ್ಳುತ್ತಾನೆ.

ಲಕ್ಷ್ಮಣನ ಪ್ರಾಣ ತ್ಯಾಗದಿಂದ ಮನನೊಂದು ಶ್ರೀರಾಮನಿಗೆ ಭೂಮಿ ಮೇಲೆ ಇನ್ನೇನು ಕೆಲಸವಿಲ್ಲದಂತಾಗುತ್ತದೆ. ಈ ಕಾರಣಕ್ಕಾಗಿ ರಾಮನಾವತಾರವನ್ನು ಕೊನೆಗೊಳಿಸಿ ವೈಕುಂಠಕ್ಕೆ ತೆರಳಲು ನಿರ್ಧರಿಸುತ್ತಾರೆ. ಶ್ರೀರಾಮರು ಕೂಡ ಸರಯೂ ನದಿಗೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಶ್ರೀ ರಾಮರ ಅವತಾರವು ಭೂಮಿಯ ಮೇಲೆ ಕೊನೆಗೊಳ್ಳುತ್ತದೆ. ಇದನ್ನು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ‌.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.