ಯಾವ ದಿನ ಬಂಗಾರವನ್ನ ಖರೀದಿಸಿದರೆ ಹಾಗೂ ಧರಿಸಿದರೆ ಉತ್ತಮ.

ಚಿನ್ನ ಎಂದರೆ ಪ್ರತಿಯೊಬ್ಬರಿಗೂ ಹೇಗೆ ಇಷ್ಟವೋ ಅದೇ ರೀತಿಯಾಗಿ ಚಿನ್ನವನ್ನು ಖರೀದಿಸಲು ಕೂಡ ಇಷ್ಟಪಡುತ್ತಾರೆ, ಆದರೆ ಚಿನ್ನವನ್ನು ಯಾವ ದಿನ ಖರೀದಿಸಿದರೆ ಒಳ್ಳೆಯದು ಯಾವ ದಿನ ಖರೀದಿಸಬಾರದು ಎಂದು ತಿಳಿದುಕೊಳ್ಳುವುದು ಅತಿಮುಖ್ಯ, ಹಾಗಾದರೆ ಚಿನ್ನವನ್ನು ಯಾವ ದಿನ ಖರೀದಿಸಬೇಕು ಖರೀದಿಸಬಾರದು ನೋಡೋಣ. ಮೊದಲು ಚಿನ್ನವು ವೃದ್ಧಿಯಾಗಬೇಕು ಅಂದರೆ ಈ ಒಂದು ಕೆಲಸವನ್ನು ಮಾಡಿ, ನಿಮ್ಮ ಮನೆಯ ಹತ್ತಿರ ಇರುವ ಬಾಳೆಹಣ್ಣಿನ ಗಿಡದ ಬುಡದ ಹತ್ತಿರ ಹೋಗಿ ಅಲ್ಲಿ ಬಾದಾಮಿ ಎಲೆಯನ್ನು ಇಟ್ಟು ಅಲ್ಲಿ ಲಕ್ಷ್ಮೀನಾರಾಯಣ ಸ್ವಾಮಿಯ ಚಿತ್ರಪಟವನ್ನು ಇಡಬೇಕು.

ನಂತರ ನಿಮ್ಮ ಹತ್ತಿರ ಇರುವ ಯಾವುದಾದರೂ ಒಡವೆಯನ್ನು ಚಿತ್ರಪಟದ ಮುಂದೆ ಇಟ್ಟು ದೀಪಾ ರಾಧನೆಯನ್ನು ಮಾಡಬೇಕು, ಈ ರೀತಿಯಾಗಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀನಾರಾಯಣಸ್ವಾಮಿಯ ಅನುಗ್ರಹದಿಂದ ನಿಮ್ಮ ಹತ್ತಿರ ಇರುವ ಬಂಗಾರ ವೃದ್ಧಿಸುತ್ತದೆ. ಇನ್ನು ಸಾಮಾನ್ಯವಾಗಿ ಜನರು ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲಿ ಚಿನ್ನವನ್ನು ಖರೀದಿಸಲು ಮುಂದಾಗುತ್ತಾರೆ, ಆದರೆ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಭಾನುವಾರದಂದು ಯಾವುದೇ ಕಾರಣಕ್ಕೂ ಬಂಗಾರವನ್ನು ಖರೀದಿ ಮಾಡಬಾರದು.

ಒಂದು ವೇಳೆ ಭಾನುವಾರ ದಿನದಂದು ಬಂಗಾರವನ್ನು ಖರೀದಿ ಮಾಡಿದ್ದಲ್ಲಿ ಖರೀದಿ ಮಾಡಿದ ಬಂಗಾರ ಹಾಗೂ ಮನೆಯಲ್ಲಿದ್ದ ಬಂಗಾರವು ನಶಿಸಿ ಹೋಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ, ಅದೇ ರೀತಿಯಾಗಿ ಶನಿವಾರದಂದು ಚಿನ್ನವನ್ನು ಖರೀದಿ ಮಾಡಿದರೆ ಕಳ್ಳತನವಾಗುತ್ತದೆ ಅಥವಾ ಬಂಗಾರವು ನಮ್ಮ ಹತ್ತಿರ ಉಳಿಯುವುದಿಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ಬುಧವಾರ, ಗುರುವಾರ ಹಾಗೂ ಶುಕ್ರವಾರ ಬಂಗಾರವನ್ನು ಖರೀದಿ ಮಾಡಲು ಉತ್ತಮ ದಿನ, ವಿಶೇಷವಾಗಿ ಗುರುವಾರದ ದಿನ ಪುಷ್ಯಮಿ ನಕ್ಷತ್ರ ಬಂದಾಗ ಬಂಗಾರವನ್ನು ಖರೀದಿ ಮಾಡಿದರೆ ತುಂಬಾ ಲಾಭದಾಯಕ ಎಂದು ಹೇಳಲಾಗುತ್ತದೆ.

ಶುಕ್ರವಾರ ಪೂರ್ವಾಷಾಡ ನಕ್ಷತ್ರ ಬಂದಾಗ ಬಂಗಾರವನ್ನು ಖರೀದಿ ಮಾಡಿದರೆ ತುಂಬಾ ಒಳ್ಳೆಯದು, ಅದೇ ರೀತಿ ಬುಧವಾರ ಗುರುವಾರ ಹಾಗೂ ಶುಕ್ರವಾರ ದಿನದಂದು ಬಂಗಾರವನ್ನು ಧರಿಸಿದರೆ ಪುಣ್ಯಗಳು ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ಭಾನುವಾರ ಹಾಗೂ ಸೋಮವಾರ ಚಿಕ್ಕಮಕ್ಕಳಿಗೆ ಹಾಕಿರುವ ಬಂಗಾರವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು.

ಬಂಗಾರ ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ಇದು ಬರೀ ಲೋಹವಲ್ಲ. ಬದಲಾಗಿ ಲಕ್ಷ್ಮೀ ದೇವಿಯ ಸ್ವರೂಪ. ಹಬ್ಬ ಹರಿದಿನಗಳಲ್ಲಿ ನಾವು ಚಿನ್ನವನ್ನ ದೇವಿಗೆ ಹಾಕಿ ಪೂಜೆ ಮಾಡುತ್ತೇವೆ. ಚಿನ್ನ ತರುವಾಗಲೂ ಸಮಯ ಮುಹೂರ್ತ ನೋಡಿ ತರುವುದು ವಾಡಿಕೆ. ಅದರಲ್ಲೂ ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ತರುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.

ಆದ್ರೆ ಅಕ್ಷಯ ತೃತೀಯವನ್ನು ಬಿಟ್ಟು ಮತ್ತೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುವಾಗಲೂ ಸಮಯ ನೋಡುವುದು ಅವಶ್ಯಕವಾಗಿದೆ. ನಿಮಗೆ ಬೇಕಾದ ಸಮಯದಲ್ಲಿ ಚಿನ್ನ ಕೊಂಡು ತಂದರೆ ಅದರಿಂದ ಅಭಿವೃದ್ಧಿಯ ಬದಲು ನಷ್ಟವೂ ಸಂಭವಿಸಬಹುದು. ಹಾಗಾಗಿ ಚಿನ್ನ ತರಲು ಕೆಲ ಶುಭ ದಿನ, ಶುಭ ಮುಹೂರ್ತಗಳನ್ನು ನೋಡಲಾಗುತ್ತದೆ.ಚಿನ್ನ ಖರೀದಿಸಲು ಅತ್ಯಂತ ಶ್ರೇಷ್ಠ ದಿನ ಎಂದರೆ ಗುರುವಾರ ಮತ್ತು ಶುಕ್ರವಾರ. ಗುರುವಾರ ಪುಷ್ಯ ನಕ್ಷತ್ರ ದಿನ ಮತ್ತು ಶುಕ್ರವಾರ ಪೂರ್ವ ಫಲ್ಗುಣಿ ನಕ್ಷತ್ರ ಬಂದಾಗ ಚಿನ್ನ ಖರೀದಿಸಿದರೆ ನಿಮ್ಮ ಮನೆಯಲ್ಲಿ ಚಿನ್ನ ಅಕ್ಷಯವಾಗುತ್ತದೆ.ಆದ್ರೆ ಚಿನ್ನ ಖರೀದಿಸಲು ಎಲ್ಲದಕ್ಕಿಂತ ಶ್ರೇಷ್ಠ ದಿನ ಅಂದ್ರೆ ಗುರುವಾರ ಮತ್ತು ಶುಕ್ರವಾರವಾಗಿದೆ. ಅದರಲ್ಲೂ ಅದಕ್ಕೆ ತಕ್ಕ ನಕ್ಷತ್ರಗಳು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಅನ್ನು ವೀಕ್ಷಿಸಿ.