ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಕೀಲು ನೋವಿಗೆ ಇದು ರಾಮಬಾಣ…..

ಇವತ್ತು ಹೇಳಿರುವಂತಹ ಮನೆಮದ್ದು ತುಂಬಾನೇ ಚೆನ್ನಾಗಿರುವಂತಹ ಮನೆಮದ್ದು.ಇದು ಮನುಷ್ಯನ ದೇಹದಲ್ಲಿರುವಂತಹ ಮೂಳೆಗಳಿಗೆ ಮರು ಜೀವ ಕೊಡುವಂತಹ ಮನೆ ಮದ್ದಾಗಿದ್ದು.ದೇಹದ ಯಾವುದೇ ಭಾಗದಲ್ಲಿ ಮೂಳೆಗಳು ಮುರಿದು ಹೋಗಿರಲಿ ಅಥವಾ ಮೂಳೆಗಳು ಕ್ರಾಕ್ ಆಗಿರಲಿ ಈ ಮನೆ ಮದ್ದನ್ನು ಮಾಡುತ್ತಾ ಬಂದರೆ ಇದು ವೇಗವಾಗಿ ವಾಸಿಯಾಗುತ್ತದೆ ಮತ್ತು ಜೋಡಣೆ ಯಾಗುತ್ತದೆ. ನಿಮಗೆ ತಿಂಗಳಗಟ್ಟಲೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತೆ ಬೇಗ ವಾಸಿಯಾಗುವಂತ ಗುಣ ಇದರಲ್ಲಿ ಇರುತ್ತದೆ. ಈ ಎಲೆಯಿಂದ ತಯಾರಿಸಿದಂತಹ ಮನೆ ಮದ್ದಿನಿಂದ ಎಲ್ಲಾ ರೀತಿಯ ಮೂಳೆಗಳಿಗೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಯಾವ ಯಾವ ಸಮಸ್ಯೆಗೆ ತುಂಬಾನೆ ಅಮೂಲ್ಯವಾದದ್ದು ಎನ್ನುವುದನ್ನು ಮುಂದೆ ಹೇಳುತ್ತಾ ಹೋಗುತ್ತೇನೆ.ಈ ಗಿಡದ ಎಲೆಗಳನ್ನ ಬಳಸಿಕೊಂಡು ಪ್ರಾಚೀನ ಕಾಲದಿಂದ ಹಿಡಿದು ಇಂದಿನ ಆಯುರ್ವೇದ ಪಂಡಿತರು ಹಳ್ಳಿಗಳು ಹಾಗೂ ಸಿಟಿಯಲ್ಲಿಯೂ ಸಹಿತ ಈ ಎಲೆಗಳನ್ನು ಬಳಸಿಕೊಂಡು ನೂರಕ್ಕೆ ನೂರು ಪರಿಹಾರವನ್ನು ಕೊಡುತ್ತಾ/ಬಂದಿದ್ದಾರೆ.

ಹಾಗಾದರೆ ಅಂತಹ ಅಮೂಲ್ಯವಾದ, ಶಕ್ತಿಯುತವಾದ ಎಲೆ ಯಾವುದು ಗಿಡ ಯಾವುದೆಂದು ನೋಡೋಣ. ಆ ಗಿಡ ಯಾವುದೆಂದು ಎಲ್ಲರಲ್ಲೂ ಕುತೂಹಲ ಉಂಟಾಗಿರಬಹುದು.ಈ ಗಿಡವನ್ನು ನೂರಕ್ಕೆ 50% ಅಷ್ಟು ಜನರು ನೋಡಿರುತ್ತಾರೆ ಇದೇ ಆ ಗಿಡ ಮುಳ್ಳರವೆ ಎಂದು ಕರೆಯುತ್ತಾರೆ ಅಂದರೆ ಅರಿವೆ ಸೊಪ್ಪುಇರುತ್ತದಲ್ಲ ಅದರಲ್ಲೇ ಮುಳ್ಳರಿವೆ ಸೊಪ್ಪು ಎಂದು ಕರೆಯುತ್ತಾರೆ ಅಥವಾ ಕಾಡು ಅರಿವೆ ಎನ್ನುತ್ತಾರೆ. ಇದನ್ನ ಎಮರ್ ಅಂತನ್ ಸ್ಪೆನಾಸಿಸ್ ಎಂದು ಕರೆಯುತ್ತಾರೆ. ಈ ಗಿಡದಲ್ಲಿ ಚಿಕ್ಕ ಚಿಕ್ಕ ಎಲೆಗಳಿರುತ್ತವೆ ಮತ್ತು ಆ ಗಿಡದ ಎಲೆಗಳ ಪಕ್ಕದಲ್ಲಿ ಮುಳ್ಳಿರುತ್ತದೆ. ಬಹಳ ಜನ ಇದರ ಪಲ್ಯವನ್ನು ತಯಾರು ಮಾಡುತ್ತಾರೆ ಸಾಂಬಾರ್ ಅನ್ನು ತಯಾರಿಸುತ್ತಾರೆ ಆರೋಗ್ಯಕ್ಕೆ ಈ ಗಿಡವು ತುಂಬಾನೇ ಒಳ್ಳೆಯದು.ಸಾಧಾರಣವಾಗಿ ಇದು ದೇಶದ ಎಲ್ಲಾ ಭಾಗದಲ್ಲೂ ಕಂಡುಬರುತ್ತದೆ ಎಲ್ಲಾ ಹಳ್ಳಿಗಳಲ್ಲೂ ಹಾಗೂ ಸಿಟಿಯಲ್ಲೂ ಸಹ ಇರುತ್ತದೆ. ಆದರೆ ಸಿಟಿಯಲ್ಲಿರುವ ಜನರಿಗೆ ಇದರ ಗುರುತಿರುವುದಿಲ್ಲ. ಹಳ್ಳಿಗಳಲ್ಲಂತೂ ರೋಡಿನ ಬದಿಯಲ್ಲಿ ಎಲ್ಲೆಲ್ಲಿ ಜಾಗವಿರುತ್ತದೆ ಅಲ್ಲೆಲ್ಲಾ ಬಹಳ ವೇಗವಾಗಿ ಈ ಗಿಡವು ಬೆಳೆದುಕೊಳ್ಳುತ್ತದೆ.ಹಳ್ಳಿಯಲ್ಲಿ ಇರುವವರಲ್ಲಿ ತುಂಬಾ ಜನರಿಗೆ ಇದು ತಿಳಿದಿದೆ ಇದರಿಂದ ತುಂಬಾ ಚೆನ್ನಾಗಿ ಸಾಂಬಾರನ್ನು ತಯಾರು ಮಾಡುತ್ತಾರೆ.

ಇದರ ಪಲ್ಯಗಳು ಹಾಗೂ ಚಟ್ನಿಯನ್ನು ಮಾಡುತ್ತಾರೆ ಇದರ ದಂಟನ್ನು ಉಪಯೋಗಿಸಿಕೊಂಡು ಸಹ ಸಾಂಬರನ್ನು ತಯಾರಿಸುತ್ತಾರೆ.ಎಲ್ಲಾ ಅರಿವೇಸೊಪ್ಪಿನಿಗಿಂತಲೂ ಇದು ತುಂಬಾನೇ ರುಚಿಯಾಗಿರುತ್ತದೆ. ಇದನ್ನು ನೀವು ಬೇಳೆ ಹಾಕಿ ಸಾಂಬಾರ್ ತಯಾರಿಸಬಹುದು. ಆದರೆ ಇದನ್ನು ಕೀಳುವುದು ತುಂಬಾನೇ ಕಷ್ಟ ಸಮಯ ಕೂಡ ಬೇಕಾಗುತ್ತದೇ ಇದರ ಎಲೆಗಳನ್ನು ಕೀಳಲು. ಈ ಗಿಡದಲ್ಲಿ ಬಹಳ ಬೀಜಗಳಿರುತ್ತದೆ. ಸಾಸಿವೆ ಕಾಳಿನ ರೀತಿಯಲ್ಲಿ ಚಿಕ್ಕ ಚಿಕ್ಕದಾಗಿ ಬೀಜಗಳು ಇರುತ್ತದೆ ಒಂದು ಗಿಡ ಇದ್ದರೆ ಅದು ಸಾವಿರಾರು ಗಿಡಗಳಾಗುತ್ತದೆ. ಇದಕ್ಕೆ ಯಾವುದೇ ಗೊಬ್ಬರ ಬೇಡ ಸ್ವಲ್ಪ ನೀರಿದ್ದರೂ ಸಾಕು ಕಲ್ಲಿನ ಪೊದೆಗಳಲ್ಲಿ ಎಲ್ಲ ಬೆಳೆದಿರುತ್ತದೆ.ಈ ಗಿಡ ತುಂಬಾ ಜನ ಹಳ್ಳಿಗರಿಗೆ ಗೊತ್ತು ಇದರಲ್ಲಿ ತುಂಬಾ ರೀತಿಯ ಅಡುಗೆಗಳನ್ನು ಮಾಡುತ್ತಾರೆ. ಆದರೆ ಇದರಲ್ಲಿ ತುಂಬಾ ಔಷಧೀಯ ಗುಣಗಳು ಇದ್ದು ಇದು ಅಮೂಲ್ಯವಾದ ಔಷಧೀಯ ಗುಣವಿದೆಯೆಂದು ಅವರಿಗೆ ತಿಳಿದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ