ನಮ್ಮ ಬಳಿ ಹಣ ಎಷ್ಟಿದೆ ಅಂತ ಲೆಕ್ಕ ಹಾಕಬಹುದು. ಆದರೆ ನಮ್ಮ ಬಳಿ ಸಮಯ ಎಷ್ಟಿದೆ ಅಂತ ಲೆಕ್ಕ ಹಾಕಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಕ್ಷಣದ ಸದ್ಬಳಕೆ ತುಂಬಾ ಮುಖ್ಯ ಆಗುತ್ತೆ. ಈ ಬದುಕಿಗೊಂದು ಪ್ರಯೋಗ ಯಾರು ಹೆಚ್ಚು ಹೆಚ್ಚು ಪ್ರಯೋಗ ಮಾಡುತ್ತಾ ಹೋಗುತ್ತಾರೋ ಅವರು ಬದುಕಿನಲ್ಲಿ ಗೆಲ್ಲುತ್ತಾ ಹೋಗುತ್ತಾರೆ. ನಿಮ್ಮ ವಯಸ್ಸು ಎಷ್ಟು ಇರಬಹುದು? ನಾಳೆಯ ಬಗ್ಗೆ ನಿಮ್ಮಲ್ಲಿ ಅದ್ಭುತ ಪ್ಲಾನ್ ಇದ್ದರೆ ನೀವು ಪ್ರತಿದಿನ ಖುಷಿಯಾಗಿ ಇರಬಹುದು. ಡೈನಮಿಕ್ ಆಗಿರಬಹುದು. ನಿಮ್ಮ ಮನಸ್ಸು ಯಾವಾಗಲೂ ಯಂಗ್ ಆಗಿ ಎನರ್ಜಿಟಿಕ್ ಆಗಿಯೇ ಇರುತ್ತೆ.

ಯಶಸ್ಸನ್ನು ನಿರ್ಧರಿಸುವುದು ನಾವು ಮಾಡಿಕೊಂಡಿರುವ ಸಿದ್ಧತೆ ಅಷ್ಟೇ. ಗುರಿ ಒಂದನ್ನ ಬಿಟ್ಟು ಮಿಕ್ಕೆಲ್ಲವು ನಮಗೆ ಅಷ್ಟಕಷ್ಟೇ ಗುರಿ ಇದ್ದರೆ ಮಾತ್ರ ನಮಗೆ ಯಶಸ್ಸು ಶತ ಸಿದ್ಧ. ಪ್ರತಿಯೊಬ್ಬರು ಜಗತ್ತನ್ನೇ ಬದಲಾಯಿಸಬೇಕು ಅಂತ ಯೋಚನೆ ಮಾಡ್ತಾ ಇರ್ತಾರೆ. ಆದರೆ ಯಾರೋ ಒಬ್ಬರು ಅಂದುಕೊಳ್ಳುವುದಿಲ್ಲ. ತಮ್ಮನ್ನ ತಾವು ಬದಲಾಯಿಸಿಕೊಳ್ಳಬೇಕು ಅಂತ ಮೌನ ಮತ್ತು ನಗು ಎರಡು ಕೂಡ ಶಕ್ತಿಶಾಲಿ ಸಾಧನಗಳು ಜೀವನದಲ್ಲಿ ತುಂಬಾ ಮುಖ್ಯ. ಯಾಕೆಂದರೆ ನಗು ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ದಾರಿ ತೋರಿಸಿದ್ದರೆ ಮೌನ ವು ಸಮಸ್ಯೆಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತದೆ ಬದುಕು ಅನ್ನೋದು ಸಂತೋಷ ದುಃಖ, ಕಷ್ಟ ಮತ್ತು ಸುಖಗಳ ಗೋಲಾಕಾರದ ವೃತ್ತ ಇದ್ದಂತೆ.

ಒಂದಾದ ಮೇಲೆ ಒಂದು ಬಂದೆ ಬರುತ್ತೆ. ಕಾಯುವ ತಾಳ್ಮೆ ನಮಗಿರಬೇಕು ಅಷ್ಟೇ. ಸೋಲಿನಿಂದ ಯಾರು ಹಿಂದೆ ನುಗ್ಗಬೇಕಾಗಿಲ್ಲ, ಯಾಕೆಂದರೆ ಸೋಲು ಗೆಲುವಿಗಿಂತ ರು ಹೆಚ್ಚು ಪಾಠ ಕಲಿಸುತ್ತೆ. ಸೋಲು ಗೆಲುವಿಗಿಂತಲೂ ಹೆಚ್ಚು ಅನುಭವ ನೀಡುತ್ತೆ. ಕಷ್ಟ ಕಾಲದಲ್ಲಿ ನಿಮಗೆ ನೆರವಾದವರು ಹಾಗೂ ಕಷ್ಟ ಕಾಲಕ್ಕೆ ನಿಮ್ಮನ್ನ ಕೈಹಿಡಿದವರು ಅಷ್ಟೇ ಅಲ್ಲ, ನಿಮ್ಮನ್ನ ಕಷ್ಟಕ್ಕೆ ದೂಡಿದವರು ಈ ಮೂವರು ಕೂಡ ನಿಮ್ಮ ಸ್ನೇಹಿತರು ನಿಮ್ಮ ಜೀವನದಲ್ಲಿ ಯಾವತ್ತು ಮರೆಯಬೇಡಿ ನಿಮ್ಮ ವೈರಿಗಳನ್ನ ಉದಾಸೀನ ಮಾಡಿ ಅವರನ್ನು ಪಳಗಿಸಲು ಅದಕ್ಕಿಂತ ಉತ್ತಮ ಅಸ್ತ್ರ ಇನ್ನೊಂದಿಲ್ಲ. ಬದುಕಿನ ಅತಿ ದೊಡ್ಡ ಸಾಧನೆಯ ಹಿಂದೆ ಅಷ್ಟೇ ದೊಡ್ಡ ತ್ಯಾಗವೂ ಇರುತ್ತೆ.

ತ್ಯಾಗ ಪರಿಶ್ರಮ ಇಲ್ಲದೆ ಯಾವುದೂ ಸಿದ್ಧಿಸುವುದಿಲ್ಲ ಎನ್ನುವುದು ನಿಮ್ಮ ತಲೆಯಲ್ಲಿ ಇರಬೇಕು ಅಷ್ಟೇ. ಮಾತು ಮಾತಿಗೂ ನಿಮ್ಮ ಮನೆಯಲ್ಲಿ ಜಗಳ ಆಗುತ್ತಿದ್ದರೆ ನೀವು ಈ ಮೂರು ಕೆಲಸವನ್ನು ಚಾಚು ತಪ್ಪದೆ ಮಾಡಿ. ಒಂದು, ಜಗಳ ಆಡುತ್ತಿದ್ದಾಗ ಆ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ನೀವು ಇರಬೇಡಿ. ಎರಡು, ಅವರ ಜೊತೆ ಯಾವತ್ತು ವಾದಕ್ಕೆ ಇಳಿಯಬೇಡಿ. ಮೂರು, ಎಲ್ಲರ ಜೊತೆ ನಗುನಗುತ್ತಾ ಇರಿ. ಮನುಷ್ಯನ ಹತ್ತಿರ ಎಷ್ಟು ಸಂಪತ್ತು ಇರಲಿ, ಸಾವು ಬಂದಾಗ ದೇವರು ನಮಗೆ ಕೊಡುವುದು ಎರಡು ಆಯ್ಕೆಗಳನ್ನ ಒಂದು ಕೊಟ್ಟು ಹೋಗುವುದು ಇನ್ನೊಂದು ಬಿಟ್ಟು ಹೋಗುವುದು ನಮ್ಮ ಜೊತೆ ತೆಗೆದುಕೊಂಡು ಹೋಗುವ ಅವಕಾಶ. ದೇವರು ನಮಗೆ ಇನ್ನೂ ಕಲ್ಪಿಸಿಲ್ಲ. ಮುಂದೆ ಕಲ್ಪಿಸುವುದು ಇಲ್ಲ.

ಮತ್ತೆ ಯಾಕೆ ಈ ಮೋಹ 100 ಬಿಂದಿಗೆಗಳಿಂದ ನೀರು ಹಾಕಿದ ಮಾತ್ರ ಕ್ಕೆ ಗಿಡ ಮರವಾಗಿ ಬೆಳೆದು ಆ ಕ್ಷಣದಲ್ಲಿಯೇ ಕಾಯಿ ಬಿಡುವುದಿಲ್ಲ. ಅದೇ ತರಹ ಮನುಷ್ಯನ ಜೀವನ ಕೂಡ ನಾವು ಬಹಳ ಕಷ್ಟ ಪಡುತ್ತಿದ್ದೇವೆ ಎಂದ ಮಾತ್ರಕ್ಕೆ ಎಲ್ಲ ಕೆಲಸಗಳು ಕ್ಷಣದಲ್ಲಿಯೇ ಮುಗಿಯುವುದಿಲ್ಲ. ಯಾವುದಕ್ಕೂ ಸಮಯ ಬರಬೇಕು, ಸಹನೆ ಇರಬೇಕು. ಯಾರನ್ನೂ ದ್ವೇಷಿಸುವ ದರಲ್ಲಿ ಕಾಲ ಕಳೆಯಬೇಡಿ, ಜೀವನ ತುಂಬಾ ಚಿಕ್ಕದು. ಯಾಕಂದ್ರೆ ನಮ್ಮ ಪಯಣ ಎಲ್ಲಿ ಎಂದು ನಮಗೆ ಇಲ್ಲಿವರಿಗೆ ಯಾರಿಗೂ ಕೂಡ ತಿಳಿದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ