ಭಾರತವನ್ನೇ ಕಬ್ಜ ಮಾಡಿಕೊಂಡ ಸ್ಟಿಂಗ್ ಎನರ್ಜಿ ಡ್ರಿಂಕ್ ಈ ಪರಿಚಯ ಬೆಳೆದಿದ್ದು ಹೇಗೆ ಗೊತ್ತಾ…..?

ಸ್ಟಿಂಗ್ ಇವತ್ತು ರೆಡ್ ಬುಲ್ ಅನ್ನು ಸಹ ಹಿಂದಿಕ್ಕಿದೆ ಭಾರತದಲ್ಲಿ ಅತಿ ಹೆಚ್ಚಾಗಿ ಯುವಕರು ಹಾಗೂ ಇತರೆ ಎಲ್ಲರೂ ಹೆಚ್ಚಾಗಿ ಸೇವಿಸುವಂತಹ ಬ್ರಾಂಡ್ ಇದು. ಸ್ಟಿಂಗ್ ಪೆಪ್ಸಿಕೊ ಕಂಪನಿಯ ಒಂದು ಪ್ರಾಡಕ್ಟ್. ಪೆಪ್ಸಿಕೊ ಸಂಸ್ಥೆ ಸ್ಲೈಸ್ 7 ಆಪ್ ಮೌಂಟೇನ್ ಡ್ಯೂ ಹಾಗೂ ಪೆಪ್ಸಿ ಮೊದಲಾದ ಪ್ರಾಡಕ್ಟ್ ಗಳನ್ನು ಉತ್ಪಾದನೆ ಮಾಡುತ್ತಿರುವಂತಹ ಸಂಸ್ಥೆ.

ಈ ಸಂಸ್ಥೆಯ ಇತರೆ ಡ್ರಿಂಕ್ ಗಳು ಸಹ ಈಗಾಗಲೇ ದೇಶ ವ್ಯಾಪ್ತಿ ಹೆಸರು ಮಾಡಿದೆ. ಇದು ಸ್ಟಿಂಗ್ ಎಂಬ ತನ್ನ ಡ್ರಿಂಕ್ ಅನ್ನು ಮೊದಲ ಬಾರಿಗೆ 2002ರಲ್ಲಿ ವಿಯಟ್ ನಮ್ ನಲ್ಲಿ ಲಾಂಚ್ ಮಾಡಿತು. ಅಲ್ಲಿ ಈ ಡ್ರಿಂಕ್ ನಿಂದ ಆದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ.

ಬಿಸಿನೆಸ್ ಆಗಿ ಹಣ ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದಿತು. ಅಲ್ಲಿ ಲಾಭವನ್ನು ತಂದು ಕೊಟ್ಟಂತಹ ಸ್ಟಿಂಗ್ ಒಂದು ಸಕ್ಸಸ್ ಫುಲ್ ಬ್ರಾಂಡ್ ಆಗಿ ಹೊರಹೊಮ್ಮಿತು. ಅಲ್ಲಿ ಇದು ಯಶಸ್ವಿಯಾದ ಬಳಿಕ ಅದನ್ನು 2008ರಲ್ಲಿ ಭಾರತದಲ್ಲಿ ಹೊರತರಲು ಯೋಚಿಸಲಾಯಿತು. ಆದರೆ ಈ ಸಮಯದಲ್ಲಿ ಇಲ್ಲಿ ಉಂಟಾದ ಆರ್ಥಿಕ ಮಹಾಕುಸಿತ ಹಾಗೂ ಇತರೆ ಕೆಲವು ರೂಲ್ಸ್ ಗಳಿಂದಾಗಿ.

ಈ ಡ್ರಿಂಕ್ ಅನ್ನು ಇಲ್ಲಿ ಲಾಂಚ್ ಮಾಡಲು ಸಾಧ್ಯವಾಗಲಿಲ್ಲ. ಮುಂದೆ 2016ರಲ್ಲಿ ಸ್ಟಿಂಗ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ರೆಡಿಯಾಯಿತು. ಈ ಸಮಯದಲ್ಲಿ ಭಾರತದ ಕೆಲವು ರೂಲ್ಸ್ ಗಳು ಸುಧಾರಣೆಯಾದವು. ಇಲ್ಲಿ ಹೊರಬರುವ ಯಾವುದೇ ಕೂಲ್ ಅಥವಾ ಎನರ್ಜಿ ಡ್ರಿಂಕ್ ನಲ್ಲಿ 300 ಮಿಲಿ ಗ್ರಾಂ ಗಿಂತಲೂ ಹೆಚ್ಚಿನ ಕೆಫೆನ್ ಅಂಶ ಇರಬಾರದು ಎಂದು ಜಾರಿಯಲ್ಲಿ ಇದೆ.

ಪೆಪ್ಸಿಕೋ ಈ ರೂಲ್ಸ್ ಗೆ ಬದ್ಧವಾಗಿದ್ದುಕೊಂಡೆ ತನ್ನ ಇತರ ಡ್ರಿಂಕ್ ಗಳನ್ನು ಮಾರುಕಟ್ಟೆಗೆ ತಂದಿದೆ. ಅದಕ್ಕೆ ಈ ರೂಲ್ ಬಗ್ಗೆ ಚೆನ್ನಾಗಿಯೇ ಗೊತ್ತು. ಈ ರೂಲ್ ಅನ್ನು ಅದು ಮೊದಲಿನಿಂದಲೂ ಸಹ ಸಿನ್ಸಿಯರ್ ಆಗಿ ಫಾಲೋ ಮಾಡಿಕೊಂಡೆ ಬಂದಿದೆ. ಈ ಮೂಲಕ 2017ರಲ್ಲಿ ಅದು ಸ್ಟಿಂಗ್ ಡ್ರಿಂಕ್ ಅನ್ನು ಭಾರತದಲ್ಲಿ ಮೊದಲನೆಯದಾಗಿ ಹೊಸದಾಗಿ ಲಾಂಚ್ ಮಾಡಿತು.

ಆದರೆ ಇಲ್ಲಿ ಮೂಡುವ ಪ್ರಶ್ನೆ ಏನು ಎಂದರೆ ಭಾರತದಲ್ಲಿ ಇವತ್ತು ಅನೇಕ ವಿಧದ ಎನರ್ಜಿ ಡ್ರಿಂಕ್ ಗಳು ಇದೆ. ಹೀಗಿದ್ದು ಸಹ ಅವುಗಳ ಮಧ್ಯೆ ಈ ಸ್ಪ್ರಿಂಗ್ ಯಾಕೆ ಇಷ್ಟು ಫೇಮಸ್ ಆಯಿತು ಎಂಬುವುದು ಇದಕ್ಕೆ ಕಾರಣ ಸಹ ಇದೆ. ಪೆಪ್ಸಿಕೊ ಸಂಸ್ಥೆಯ ಮಾಸ್ಟರ್ ಮೈಂಡ್ ಇದಕ್ಕೆ ಮುಖ್ಯ ಕಾರಣ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.