ಡಾಲ್ಡಾ ತಯಾರಾಗುವುದು ಯಾವುದರಿಂದ ಗೊತ್ತಾ? ಇಲ್ಲಿದೆ ನೋಡಿ||
ಬೆಣ್ಣೆಯಿಂದ ತಯಾರಾಗುವಂತಹ ತುಪ್ಪಕ್ಕೆ ಭಾರಿ ಬೇಡಿಕೆ ಇದೆ ಹಾಗೂ ಅನೇಕ ಖಾದ್ಯಗಳಿಗೆ ಅದು ಬಳಕೆ ಕೂಡ ಆಗುತ್ತದೆ ನಿಮ್ಮಲ್ಲಿ ಹೆಚ್ಚಿನವರು ತುಪ್ಪದ ಪ್ರಿಯರಿರಬಹುದು, ಆಗೆಲ್ಲ ಹಳ್ಳಿಗಳಲ್ಲಿ ಮನೆಯಲ್ಲಿಯೇ ತುಪ್ಪವನ್ನು ತಯಾರು ಮಾಡಿ ಮನೆ ಮನೆಗೆ ಮಾರುವವರು ಬಹಳಷ್ಟು ಜನ ಇದ್ದರೂ ಆದರೆ ಈಗ ಈ ಪರಿಪಾಠ ಸಾಕಷ್ಟು ಕಡೆ ನಿಂತು ಹೋಗಿದೆ.
ಅನೇಕರು ಈಗಲೂ ಕೂಡ ರೆಡಿಮೇಡ್ ಬೆಣ್ಣೆಯನ್ನು ತಂದು ತುಪ್ಪ ಮಾಡಿಕೊಂಡು ಸೇವಿಸುತ್ತಾರೆ ಬಜಾರ್ ನಲ್ಲಿ ಪ್ಯಾಕೆಟ್ ಹಾಗೂ ರೆಡಿಮೇಡ್ ತುಪ್ಪ ಲಗ್ಗೆ ಇಟ್ಟು ಬಹಳಷ್ಟು ಕಾಲವೇ ಆಗಿದೆ, ಇನ್ನು ಹಾಲಿನ ಬೆಲೆ ಜಾಸ್ತಿ ಆದಂತೆಲ್ಲ ನಮ್ಮಲ್ಲಿ ಬೆಣ್ಣೆ, ಮೊಸರು, ತುಪ್ಪದ ಬೆಲೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ.
ಎಲ್ಲ ದುಬಾರಿ ವಸ್ತುಗಳಿಗೆ ಇರುವಂತೆ ತುಪ್ಪಕ್ಕೂ ಕೂಡ ಆಲ್ಟರ್ನೇಟಿವ್ ಆಗಿ ತದನಂತರ ಬಂದ ವಸ್ತುವೇ ಡಾಲ್ಡಾ ಈ ಡಾಲ್ಡಾ 90 ರ ದಶಕದಲ್ಲಿ ತುಂಬಾ ಫೇಮಸ್ ಆಗಿತ್ತು. ಇದನ್ನು ಬಡವರ ತುಪ್ಪ ಅಥವಾ ಸಸ್ತ ತುಪ್ಪ ಎಂದೇ ಕರೆಯಲಾಗುತ್ತಿತ್ತು. ಇದನ್ನು ಬಹಳಷ್ಟು ಜನ ವನಸ್ಪತಿ ಎಂದು ಕೂಡ ಕರೆಯುತ್ತಾರೆ, ಇದನ್ನು ಅಡುಗೆ ಮಾಡಲು ಕೂಡ ಬಳಸುತ್ತಿದ್ದರು. ತುಪ್ಪದ ಕಾರ್ಖಾನೆಗಳೇ ಇವುಗಳನ್ನು ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.
ಅಷ್ಟಕ್ಕೂ ಈ ಡಾಲ್ಡಾವನ್ನು ಹೇಗೆ ತಯಾರು ಮಾಡುತ್ತಾರೆ ಇದನ್ನು ತಯಾರಿಸುವ ಕಂಪನಿಯಲ್ಲಿ ಯಾವುದೆಲ್ಲ ಪದಾರ್ಥವನ್ನು ಮಿಶ್ರಣ ಮಾಡುತ್ತಾರೆ ಇದನ್ನು ಸೇವನೆ ಮಾಡುವುದರಿಂದ ಎಷ್ಟು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಷ್ಟು ಆರೋಗ್ಯಕ್ಕೆ ಕೆಟ್ಟದ್ದು ಹೀಗೆ ಡಾಲ್ಡಾಗೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಡಾಲ್ಡಾ ಎಂಬ ಹೆಸರನ್ನು ಎಲ್ಲರೂ ಸಾಮಾನ್ಯವಾಗಿ ಕೇಳಿಯೇ ಇರುತ್ತೀವಿ ಇದನ್ನು ಪಾಮ್ ಅಥವಾ ತಾಳೆ ಮರದ ಎಣ್ಣೆಯಿಂದ ತಯಾರು ಮಾಡಲಾಗುತ್ತದೆ. ಹಾಗಾಗಿಯೇ ಇದರ ಮೇಲೆ ಪಾಮ್ ಮರದ ಚಿತ್ರಣಗಳು ಕಂಡುಬರುತ್ತದೆ ಈ ತಾಳೆ ಎಣ್ಣೆ ನಮ್ಮಲ್ಲಿ ಮಾತ್ರವಲ್ಲದೆ ಇಂಡೋನೇಷ್ಯಾ, ಬ್ರೆಜಿಲ್, ಅಮೆರಿಕ, ಹಾಗೂ ಜಪಾನ್ ದೇಶಗಳಲ್ಲಿಯೂ ಕೂಡ ಇದರ ಕಾರ್ಖಾನೆಗಳು ಇದೆ. ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆ ಆಗುವಂತಹ ಇದು.
ಸಾಕಷ್ಟು ಕಡೆ ರಫ್ತು ಕೂಡ ಆಗುತ್ತದೆ. ಈ ಡಾಲ್ಡಾ ನಮ್ಮಲ್ಲಿ ಒಂದು ಬ್ರಾಂಡ್ ಆಗಿ ಹೋಗಿರುವುದು ನಮ್ಮಲ್ಲಿ ಸಾಕಷ್ಟು ಜನರಿಗೆ ತಿಳಿದಿಲ್ಲ, ಇದು ಆಗ ಸಾಕಷ್ಟು ವಿವಾದಗಳಿಗೂ ಕೂಡ ಕಾರಣವಾಗಿತ್ತು. ಇದನ್ನು ಆಗ ಕಡಿಮೆ ಬೆಲೆಯ ಅನಿಮಲ್ ಫ್ಯಾಟ್ ಎಂದು ಜನ ದೂರಿದ್ದರು, ಪ್ರಾಣಿಗಳ ಕೊಬ್ಬಿಗೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಇದು ಕಡಿಮೆಗೆ ಸಿಗುತ್ತದೆ ಎಂದು ಸಹ ಹೆಚ್ಚಿನ ಜನ ತಿಳಿದುಕೊಂಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.