ಗೃಹಿಣಿಯರೇ ಇಂತಹ ತಪ್ಪುಗಳನ್ನ ಇನ್ನು ಮುಂದೆ ಮಾಡಲೇಬೇಡಿ ಎಚ್ಚರಿಕೆ.ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿಗೆ ಅಂತ ರಾತ್ರಿಯ ಚಪಾತಿ ಹಿಟ್ಟನ್ನು ಕಲಸಿ ಇಡಬೇಡಿ.ಕಾರಣ ಏನೇ ಇರಲಿ ಅರ್ಧ ತಾಸು ಬೇಗ ಎದ್ದು ಕಳಿಸಿಟ್ಟರು ಪರವಾಗಿಲ್ಲ ಆದರೆ ರಾತ್ರಿಗೆ ಕಲಸಿ ಇಡಲೇಬೇಡಿ. ಶಾಸ್ತ್ರಗಳು ಅದನ್ನು ಪಿಂಡಕ್ಕೆ ಸಮ ಎಂದು ಹೇಳುತ್ತದೆ.ಜೊತೆಗೆ ಅದು ಆರೋಗ್ಯಕ್ಕೂ ತುಂಬಾ ಹಾನಿಕಾರಕ ನೆನಪಿರಲಿ.ಎಲ್ಲಾ ತರಕಾರಿಗಳನ್ನು ಹಚ್ಚಿಟ್ಟು ತೊಳೆಯುವ ಅಭ್ಯಾಸ ಇದಂತು ಬಹಳ ತಪ್ಪು. ತರಕಾರಿಗಳನ್ನು ಮೊದಲು ತೊಳೆದು ನಂತರ ಹಚ್ಚಬೇಕು ಇದರಿಂದ ಪೂರ್ತಿ ಪೋಷಕಾಂಶ ತರಕಾರಿಯಲ್ಲಿ ಉಳಿಯುತ್ತದೆ.
ಕತ್ತರಿಯನ್ನು ಯಾವುದಾದರೂ ಕಾರಣಕ್ಕೆ ಬಳಸುತ್ತೇವೆ ಆದರೆ ಅದನ್ನು ವಾಪಸ್ ಇರುವಾಗ ಕತ್ತರಿಯ ಬಾಯನ್ನು ತೆರೆದಂತೆ ಇಡುತ್ತಾರೆ ಇದನ್ನು ಮಾಡಲೇಬೇಡಿ.ಇದರಿಂದ ಮನೆಯಲ್ಲಿ ದುರಾದೃಷ್ಟ ಕಾಡುತ್ತೆ ಅಡುಗೆ ಮಾಡುವಾಗ ತರಾತುರಿಯಲ್ಲಿ ಮಸಿ ಬಟ್ಟೆಗಳಿಗೆ ಬೆಂಕಿ ತಗುಲಿಕೊಳ್ಳುತ್ತದೆ.ಅಥವಾ ಐರನ್ ಮಾಡುವಾಗ ಯಾಮಾರಿ ಬಟ್ಟೆ ಸುಡುತ್ತದೆ ಅಂತಹ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ.ಅದನ್ನು ಹೊರಗಡೆ ಬಿಸಾಡುವುದು ಉತ್ತಮ ಯಾವುದೇ ಕಾರಣಕ್ಕೂ ಅರಿಶಿನ ಮತ್ತು ಉಪ್ಪನ್ನು ಒಂದೇ ಕಡೆ ಇಡಬೇಡಿ ಅದು ಒಳ್ಳೆಯದಲ್ಲ .
ಕೆಲವರು ಅಳಿದು ಉಳಿದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಮತ್ತೆ ಮರೆತು ಬಿಡುತ್ತೀರಾ ಕೊನೆಗೆ ಅದು ಫ್ರಿಡ್ಜ್ ನಲ್ಲಿ ಕಳೆತು ನಾರು ಬಂದು ನಿಮಗೆ ತಿಳಿಯುವಷ್ಟರಲ್ಲಿ ನಿಮ್ಮ ಮನೆಗೆ ನೆಗೆಟಿವ್ ಹರಡಿರುತ್ತದೆ. ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಇರಿ ಕೆಲವರು ಹಳೆಯ ಪೊರಕೆಯನ್ನು ಬಿಸಾಡುವುದಿಲ್ಲ ಇದು ನಿಮಗೆ ದುರಾದೃಷ್ಟವನ್ನು ಉಂಟುಮಾಡುತ್ತದೆ ಮನೆಯ ಒಳಗೆ ಶೋಗೆ ಅಂತ ಅಪ್ಪಿ ತಪ್ಪಿಯು ಮುಳ್ಳಿನಿಂದ ಕೂಡಿದ ಗಿಡಗಳನ್ನು ಇಡಬೇಡಿ.ಇದು ವಾಸ್ತು ದೋಷವನ್ನು ಮತ್ತು ಮಾನಸಿಕ ಕಿರಿಕಿರಿಯನ್ನು ಉಂಟುಮಾಡುತ್ತದೆ ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ.