ಬಟ್ಟೆ ಒಗೆದ ಮೇಲೆ ಬರಿ ಇಷ್ಟು ಮಾಡಿ ಸಾಕು ಬಟ್ಟೆ ಇಸ್ತ್ರಿ ಆಗುತ್ತೆ ನೀವು ಶ್ರಮ ಪಡಬೇಕಾಗಿಲ್ಲ ಬಾರಿ ಉಳಿತಾಯ.

ನಾವೆಲ್ಲರೂ ಬಟ್ಟೆಯನ್ನು ಪ್ರತಿದಿನ ಒಗೆಯುತ್ತೇವೆ ಒಗೆದ ನಂತರ ಇಸ್ತ್ರಿ ಹಾಕುವುದು ದೊಡ್ಡ ಕೆಲಸ ಎಂದು ಹೇಳಬಹುದು ಇನ್ನು ಕೆಲವರು ಮನೆಯಲ್ಲಿ ಇಸ್ತ್ರೀ ಹಾಕಿಕೊಂಡರೆ ಇನ್ನೂ ಕೆಲವರು ಹೊರಗಡೆ ಹಣ ಕೊಟ್ಟು ಇಸ್ತ್ರಿಯನ್ನು ಹಾಕಿಸುತ್ತಾರೆ. ನಾವಿಲ್ಲಿ ತಿಳಿಸುವಂತಹ ಕೆಲವೊಂದು ಟಿಪ್ಸ್ ಗಳನ್ನು ನೀವು ಬಳಸಿಕೊಂಡರೆ ಇಸ್ತ್ರಿ ಹಾಕುವುದೇ ಬೇಡ ಆದರೆ ಬಟ್ಟೆ ಇಸ್ತ್ರಿ ಹಾಕಿದ ಹಾಗೆ ಇರುತ್ತದೆ.

ಇದು ಬಹಳ ಹಳೆಯ ಟಿಪ್ಸ್ ಇದಕ್ಕೆ ಕರೆಂಟ್ ಬೇಡ ಬಿಸಿನೀರು ಬೇಡ ಏನು ಬೇಡ ಸುಲಭ ವಾಗಿ ಬರಿ ಇಷ್ಟು ಮಾಡಿದರೆ ಸಾಕು ಬಟ್ಟೆ ಇಸ್ತ್ರಿ ಹಾಕಿದ ಹಾಗೆ ಇರುತ್ತದೆ ಒಗೆದ್ದು ಒಣಗಿರುವಂತಹ ಬಟ್ಟೆಗಳನ್ನು ತೆಗೆದುಕೊಂಡು ಇದನ್ನು ನೀಟಾಗಿ ಮಡಚಿಕೊಳ್ಳಬೇಕು ನಾವು ಬಟ್ಟೆಯನ್ನು ಮಡಚುವಂತಹ ಸಂದರ್ಭದಲ್ಲಿ ಅದನ್ನು ನೀಟಾಗಿ ಕೆಳಗಡೆ ಹರಡಿ ನಂತರ ಅದನ್ನು ಕೈಯಿಂದ ಉಜ್ಜಿ ಮಡಚಿದರೆ ಇದರಲ್ಲಿ ಇರುವಂತಹ ರಿಂಕಲ್ಸ್ ಗಳು ಅರ್ಧದಷ್ಟು ಹೋಗುತ್ತದೆ.

ಬಟ್ಟೆ ಒಗೆಯುವಂತಹ ಸಂದರ್ಭದಲ್ಲಿ ಜಾಸ್ತಿ ಬಟ್ಟೆಗಳನ್ನು ಹಿಂಡಬಾರದು ವಾಷಿಂಗ್ ಮಿಷಿನ್ ನಲ್ಲಿ ಹಾಕಿದಾಗ ಸ್ಪಿನ್ ಆಪ್ಷನ್ ಅನ್ನು ಆದಷ್ಟು ಕಡಿಮೆ ಬಳಸಬೇಕು ಈ ರೀತಿ ಮಾಡುವುದರಿಂದ ಬಟ್ಟೆಗಳಲ್ಲಿ ಸುಕ್ಕು ಬರುವುದಿಲ್ಲ ಬಟ್ಟೆಗಳಲ್ಲಿ ಸುಕ್ಕು ಬಂದಿಲ್ಲ ಎಂದರೆ ಅರ್ಧ ಕೆಲಸ ಮುಗಿದ ಹಾಗೆ ಇನ್ನೂ ಈ ರೀತಿ ಪ್ರತಿಯೊಂದು ಬಟ್ಟೆಗಳನ್ನು ಕೂಡ ನಾವು ತಿಳಿಸಿದಂತಹ ರೀತಿಯಲ್ಲಿ ಮಡಚಿಕೊಂಡು ಒಂದು ಕಡೆ ನೀಟಾಗಿ ಜೋಡಿಸಿ.

ಯಾವ ರೀತಿಯಾದಂತಹ ಬಟ್ಟೆಗಳು ಆದರೂ ಸಹ ಕೈಯಲ್ಲಿ ಚೆನ್ನಾಗಿ ಉಜ್ಜಿ ಚೆನ್ನಾಗಿ ಮಡಚಿಕೊಳ್ಳಬೇಕು. ಗಂಡಸರ ಶರ್ಟ್ ಗಳು ಟೀ ಶರ್ಟ್ ಗಳು ಇದೇ ರೀತಿಯಲ್ಲಿ ಮಡಚಿಕೊಳ್ಳಿ, ಎಲ್ಲ ಬಟ್ಟೆಗಳನ್ನು ಮಡಚಿದ ನಂತರ ನಾವು ಮಲಗುವಂತಹ ಹಾಸಿಗೆಯ ಕೆಳಗೆ ಒಂದು ಚಾಪೆ ಅಥವಾ ಬೆಡ್ ಶೀಟನ್ನು ಹಾಕಿ ಅದರ ಕೆಳಗೆ ನಾವು ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಿಕೊಳ್ಳಬೇಕು

ಈ ರೀತಿ ಮಾಡಿದರೆ ನಮ್ಮ ಬಟ್ಟೆಗಳು ಇಸ್ತ್ರಿ ಹಾಕಿದ ಹಾಗೆ ಆಗುತ್ತದೆ ಈ ರೀತಿಯಾಗಿ ಹಾಸಿಗೆ ಕೆಳಗಡೆಯಲ್ಲಿ ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಿಕೊಂಡು ಒಂದು ದಿನ ಹಾಗೆ ಬಿಡಿ. ಹೀಗೆ ಮಾಡುವುದರಿಂದ ನಾವು ಇದಕ್ಕೆ ಕರೆಂಟ್ ಸಹ ಉಪಯೋಗ ಮಾಡುವಂತಿಲ್ಲ ಹಾಗೆಯೇ ನಿಮ್ಮ ಸಮಯವೂ ಸಹ ಉಳಿತಾಯವಾಗುತ್ತದೆ ಹೆಚ್ಚು ಖರ್ಚು ಇಲ್ಲ. ಈ ರೀತಿ ಮಾಡುವುದರಿಂದ ವಾರ್ಡ್ರೋಬ್ ನಲ್ಲಿಯೂ ಸಹ ಸ್ಪೇಸ್ ಇರುತ್ತದೆ ನೀವು ಎಲ್ಲಾದರೂ ಅರ್ಜೆಂಟಾಗಿ ಹೋಗಬೇಕು ಎಂದಿದ್ದಾರೆ ಬಟ್ಟೆಗಳನ್ನು ಐರನ್ ಮಾಡದೆ ನೀವು ಹಾಗೆ ಹಾಕಿಕೊಂಡು ಹೋಗಬಹುದು.