3.20 – 5.40 ಸಮಯದಲ್ಲಿ ಇದು ನಡೆಯುತ್ತೆ ಅದೃಷ್ಟ ಬದಲಾಯಿಸುವ ಸಂಖ್ಯೆಗಳು…
ಈ ದಿನದ ಸಂಚಿಕೆಯಲ್ಲಿ ಬೆಳಿಗ್ಗೆ ಬೇಗ ಹೇಳುವದರಿಂದ ಆಗುವ ಲಾಭಗಳ ಕುರಿತಾಗಿ ಮಾಹಿತಿಯನ್ನು ನೋಡೋಣ. ಭಾರತ ಎಂದು ಹೇಳಿದರೆ ಇದು ಕೇವಲ ಒಂದು ದೇಶವಲ್ಲ ಇದು ಕೇವಲ ಒಂದು ಕೋಶವಲ್ಲ ಭಾರತ ಎಂದು ಹೇಳಿದರೆ ಇದು ಆತ್ಮಶಕ್ತಿ ಪ್ರಪಂಚವನ್ನ ಸಂಪೂರ್ಣವಾಗಿ ಒಂದು ದೇಹಕ್ಕೆ ಹೋಲಿಸಿದರೆ ಆ ಪ್ರಪಂಚದ ಹೃದಯ ಯಾವುದಾದರೂ ಇದ್ದರೆ ಅದು ಭಾರತ. ಭಾರತ ಎಂದು ಹೇಳಿದರೆ ಉತ್ಪತ್ತಿ ಭಾರತದ ಶಬ್ದ ಬ್ರು ಎಂಬ ಧಾತುವಿನಿಂದ ಆಗಿದೆ ಬ್ರು ಅಂದರೆ ಪ್ರಕಾಶಿಸು ಬೆಳಕು ತ್ಯಾಗ ಸಹನೆ ಪ್ರೀತಿ ವಿಶ್ವಾಸ ಕರುಣೆ ಶಕ್ತಿ ಎಂದು ಅರ್ಥ. ಹೀಗೆ ಭಾರತೀಯರು ಎಂಬ ಹೆಮ್ಮೆ ನಮಗಿರಬೇಕು ಏಕೆಂದರೆ ನಮ್ಮ ಹಿರಿಯರು ಸಂತರು ಶರಣರು ತಪಸ್ವಿಗಳು ಜ್ಞಾನಿಗಳು ಆಂತರಿಕ ಸಾಧನೆಯನ್ನು ಮಾಡಲು ಮಧ್ಯಾಹ್ನ 12 ಗಂಟೆಗೆ ಹೇಳುತ್ತಿರಲಿಲ್ಲ.ಬೆಳಿಗ್ಗೆ ಸುಪ್ರಭಾತ ಸಮಯದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಹೇಳುತ್ತಿದ್ದರು. ಈ ದೇಶದಲ್ಲಿ ವಿವೇಕಾನಂದರಾದರು ಈ ದೇಶದಲ್ಲಿ ರಮಣ ಮಹರ್ಷಿಗಳಾದರು ಈ ದೇಶದಲ್ಲಿ ತುಕಾರಾಮ ಆಗಿರಬಹುದು ಈ ದೇಶದಲ್ಲಿ ಕನಕದಾಸರು ಪುರಂದರದಾಸರು.
ಬಸವಣ್ಣನವರು ಅಕ್ಕಮಹಾದೇವಿ ಎಲ್ಲಮ್ಮ ಪ್ರಭುಗಳನ್ನು ಒಳಗೊಂಡು ಸಾವಿರಾರು ಶರಣರು ದೇಶದಲ್ಲಿ ಆಗಿ ಹೋದರು.ಹರಳಯ್ಯ ಮಧುವರಸ ದೋಹಾರ ಕಕ್ಕಯ್ಯ ನೂಲಿಯ ಚಂದಯ್ಯ ಒಕ್ಕಲಿಗ ಮುತ್ತಣ್ಣ ಕುಂಬಾರ ಗುಂಡಯ್ಯ ಸಮಗಾರ ಹರಳಯ್ಯ. ಅಸಂಖ್ಯಾತ ಶರಣರಾಗಿ ಹೋದರು ಆತ್ಮ ತತ್ವದಲ್ಲಿ ಅದ್ಭುತವಾಗಿರುವ ಶಕ್ತಿಯಿಂದ ಸ್ವಯಂ ಪರಿವರ್ತನೆಯಾಗಿ ಸಮಾಜವನ್ನು ಸಹ ಪರಿವರ್ತನೆ ಮಾಡಿ 12ನೇ ಶತಮಾನದಲ್ಲಿ ಕಲ್ಯಾಣ ರಾಜ್ಯವನ್ನ ಕಟ್ಟಿದರು. ಇದನ್ನು ಕಟ್ಟಲಿಕ್ಕೆ ಮೂಲ ಶಕ್ತಿ ಯಾವುದೆಂದರೆ ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದರೆ ತಪ್ಪುವುದು ಅಪ್ಪ ಮೃತ್ಯುಕಾಲ ಕರ್ಮಗಳೆಲ್ಲ ದೇವ ಪೂಜೆಯ ಮಾಟ ದುರಿತ ಬಂಧನದ ಊಟ ಶಂಭು ನಿಮ್ಮಯ ನೋಟ ತೆರೆ ಹಿಂಗದ ಕಣ್ಬೇಟ ಸದಾ ಸಂಹಿತವಾಗಿ ನಂಬುವುದು. ಶರಣ್ ಎಂಬುವುದು ಕೂಡಲಸಂಗಮದೇವರ ಕೂಡುವ ಕೂಟ ಆತ್ಮದಲ್ಲಿ ಪರಮಾತ್ಮನ ನೆಲೆಯನ್ನು ಕಂಡುಕೊಳ್ಳುವುದು ಆತ್ಮದಲ್ಲಿ ಪರಮಾನಂದದ ಸುಖವನ್ನು ಅನುಭವಿಸುವುದು ಯಾವುದರಿಂದ ಎಂದರೆ ಬೆಳಗ್ಗೆ ಬೇಗ ಹೇಳುವುದರಿಂದ ಇದು ಆಧ್ಯಾತ್ಮಿಕ ವಿಚಾರವಾಯಿತು.
ಬೆಳಿಗ್ಗೆ ಬೇಗ ಹೇಳುವುದರಿಂದ ಜೀವಶಕ್ತಿ ವೃದ್ಧಿಯಾಗುತ್ತದೆ ಜೀವಶಕ್ತಿ ವೃದ್ಧಿ ಆದರೆ ಮನುಷ್ಯನಿಗೆ ನೂರಕ್ಕೂ ಅಧಿಕ ವರ್ಷ ಬಾಳುವ ಶಕ್ತಿ ಇರುತ್ತದೆ.ಒಂದು ಸಲ ಹುಟ್ಟಿದ್ದೇವೆ ಯಾರಿಗೆ ತಾನೇ ಹೆಚ್ಚು ಆಯಸ್ಸಿನ ವರೆಗೂ ಬಾಳಲಿಕೆ ಆಸೆ ಇಲ್ಲ ಹೇಳಿ, ಯಾರಿಗಾದರೂ ಅವರು 50 ಅಥವಾ 40 ವರ್ಷಕ್ಕೆ ಸಾಯಲು ಇಚ್ಛೆ ಇರುತ್ತದೆಯೇ, ನೂರು ವರ್ಷ ಬಾಳುವ ಇಚ್ಛೆ ಇರುತ್ತದೆ ನಮಗೆ ಹಾಗೆ ಬಾಳಬೇಕು ಎಂದರೆ ಅದಕ್ಕೆ ಪೂರಕವಾಗಿರುವಂತಹ ವ್ಯವಸ್ಥೆಯನ್ನು ಸೃಷ್ಟಿ ಮಾಡಿಕೊಳ್ಳಬೇಕು. ಮನುಷ್ಯನ ಆಯಸ್ಸನ್ನು ವೃದ್ಧಿ ಮಾಡುವಂತಹ ಶಕ್ತಿ ಸುಪ್ರಭಾತ ಸಮಯಕ್ಕೆ ಇದೆ. ನೀವು ಬೆಳಗ್ಗೆ ಬೇಗ ಎದ್ದರೆ ನಿಮ್ಮ ಆಯಸ್ಸು ವೃದ್ಧಿ ಯಾಗುವುದು ನೂರಕ್ಕೆ ನೂರು ಸತ್ಯ ಹಿಂದಿನ ಜನ 100 ವರ್ಷ ಬದುಕುತ್ತಿದ್ದರು ಎಂದು ಏಕೆ ಹೇಳಲಾಗುತ್ತದೆ ಎಂದರೆ ಹಿಂದಿನ ಜನ ಬೆಳಿಗ್ಗೆ ಬೇಗ ಎದ್ದು ಕೃಷಿ ಕಾರ್ಯ ಮಾಡುತ್ತಿದ್ದರು. ವಿಭಿನ್ನವಾಗಿರುವಂತಹ ಕುಂಬಾರ ಗಡಿಗೆ ಮಾಡುತ್ತಿದ್ದ ಕಂಬಾರ ತನ್ನ ಉದ್ಯೋಗ ಮಾಡುತ್ತಿದ್ದ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ