ದಿನ ಭವಿಷ್ಯ 17 ಜೂನ್ 2023||

ಮೇಷ ರಾಶಿ:- ಇಂದು ನೀವು ಯಾವುದೇ ಒಂದು ದೊಡ್ಡ ಕೆಲಸ ಮಾಡುವ ಮೊದಲು ದೊಡ್ಡವರ ಸಲಹೆಯನ್ನು ಪಡೆಯಿರಿ. ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ವಿವಾದಗಳು ಇಂದು ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಕೊನೆಗೊಳ್ಳುತ್ತದೆ. ಕುಟುಂಬ ಸದಸ್ಯರಿಂದ ಕೆಲವು ಸಮಸ್ಯೆಗಳು ಬರಬಹುದು. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 8:40 ರವರೆಗೆ.

ವೃಷಭ ರಾಶಿ:- ಇಂದು ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ಹೊಸ ಯೋಜನೆಗಳನ್ನು ಮಾಡಲು ಇಷ್ಟಪಡುತ್ತೀರಿ ಮತ್ತು ಇದಕ್ಕಾಗಿ ನಿಮ್ಮ ಅಧಿಕಾರಿಗಳ ಬೆಂಬಲವನ್ನು ಕೂಡ ಪಡೆಯುತ್ತೀರಿ. ಮತ್ತು ಇಂದು ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣವನ್ನು ಮಾಡಲು ಯೋಚಿಸುತ್ತೀರಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:40 ರವರೆಗೆ.

ಮಿಥುನ ರಾಶಿ:- ನೀವು ಮಾಡುತ್ತ ಇರುವಂತಹ ವ್ಯವಹಾರದಲ್ಲಿ ಬಹಳನೇ ಅವಸರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಅದರಲ್ಲಿ ಅಡಚಣೆ ಅಥವಾ ನಷ್ಟ ಉಂಟಾಗಬಹುದು. ಹಾಗಾಗಿ ನಿಮ್ಮ ವ್ಯವಹಾರದಲ್ಲಿ ನಿರ್ಧಾರವನ್ನು ಬಹಳ ಯೋಚನೆಯಿಂದ ಮಾಡಿ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ.

ಕರ್ಕಾಟಕ ರಾಶಿ:- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಇಂದು ಸಾಕಷ್ಟು ಉತ್ತಮವಾಗಿರುತ್ತದೆ. ಇದರಿಂದ ನಿಮ್ಮ ಆತ್ಮ ವಿಶ್ವಾಸವು ಕೂಡ ಹೆಚ್ಚಾಗುತ್ತದೆ. ನೀವು ನಿಮ್ಮ ಅತ್ಯುತ್ತಮವಾದದನ್ನು ಕೆಲಸದ ಕ್ಷೇತ್ರದಲ್ಲಿ ನೀಡುತ್ತೀರಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:00 ರಿಂದ 7:00 ರವರೆಗೆ.

ಸಿಂಹ ರಾಶಿ:- ನೀವು ವಿದ್ಯಾರ್ಥಿಯಾಗಿದ್ದರೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ. ನಿಮ್ಮ ಅಧ್ಯಯನದ ಮೇಲೆ ಸಂಪೂರ್ಣ ಗಮನವನ್ನು ಹರಿಸಲು ಸೂಚಿಸಲಾಗಿದೆ. ಮತ್ತು ನಿಮ್ಮ ಆರೋಗ್ಯವು ಸರಿಯಾಗಿ ಇಲ್ಲದಿದ್ದರೆ ಕೆಲವು ದಿನಗಳಲ್ಲಿ ಸುಧಾರಿಸುವ ಬಲವಾದ ಸಾಧ್ಯತೆ ಇರುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:30 ರವರೆಗೆ.

ಕನ್ಯಾ ರಾಶಿ:- ಇಂದು ನಿಮ್ಮ ದಿನವನ್ನು ಮನೆಯ ಹತ್ತಿರ ಯಾವುದಾ ದರೂ ದೇವಸ್ಥಾನ ಇದ್ದರೆ ಆ ದೇವಸ್ಥಾನಕ್ಕೆ ಹೋಗಿ ಬಂದು ದಿನವನ್ನು ಆರಂಭಿಸಿ. ಇದರಿಂದ ನಿಮಗೆ ಉತ್ತಮವಾದ ಫಲ ಸಿಗುತ್ತದೆ. ಹಾಗೂ ಇಂದು ಅಗತ್ಯ ಇರುವವರಿಗೆ ಸಹಾಯ ಮಾಡಿ ಅಥವಾ ಬಡವರಿಗೆ ದಾನವನ್ನು ಮಾಡಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:30 ರವರೆಗೆ.

ತುಲಾ ರಾಶಿ:- ಹಣದ ವಿಷಯದಲ್ಲಿ ಈ ದಿನವೂ ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲವನ್ನು ಕೂಡ ನೀವು ಇಂದು ನಿರೀಕ್ಷಿಸ ಬಹುದು. ಹಾಗೂ ವ್ಯಾಯಾಮವನ್ನು ನಿಮ್ಮ ದಿನನಿತ್ಯ ದಿನಾಚರಣೆ ಯಲ್ಲಿ ಭಾಗವಹಿಸುವ ಮೂಲಕ ನೀವು ಆರೋಗ್ಯವಂತರಾಗಿರಿ. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 12:00 ರವರೆಗೆ.

ವೃಶ್ಚಿಕ ರಾಶಿ:- ಕೆಲವು ಕಾರಣದಿಂದಾಗಿ ನಿಮ್ಮ ತಂದೆ ನಿಮ್ಮ ಮೇಲೆ ಕೋಪಗೊಳ್ಳಬಹುದು. ನಿಮ್ಮ ತಪ್ಪುಗಳನ್ನು ಕ್ಷಮೆಯಾಚಿಸಿ ಮತ್ತು ಈ ವಿಷಯವನ್ನು ಇಂದು ಇಲ್ಲೇ ಕೊನೆಗೊಳಿಸಲು ಪ್ರಯತ್ನಿಸಿ. ನಿಮ್ಮ ಹಿರಿಯರು ನಿಮಗೆ ಒಳ್ಳೆಯದನ್ನು ಬಯಸುತ್ತಾರೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 11:00 ರಿಂದ ಮಧ್ಯಾಹ್ನ 3:00 ರವರೆಗೆ.

ಧನಸ್ಸು ರಾಶಿ:- ಕುಟುಂಬದಲ್ಲಿ ಉತ್ತಮವಾದ ವಾತಾವರಣ ಇರುವುದರಿಂದ ನಿಮಗೆ ಒತ್ತಡ ನಿವಾರಣೆಯಾಗುತ್ತದೆ. ಕಾಲಕ್ಕೆ ನಿಮ್ಮ ಕುಟುಂಬದವರ ಜೊತೆ ಸ್ವಲ್ಪ ಸಮಯವನ್ನು ಕಳೆಯುತ್ತೀರಿ. ವೈವಾಹಿಕ ಜೀವನದಲ್ಲಿ ದೀರ್ಘಕಾಲದ ವರೆಗೆ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಇಂದು ಪರಿಸ್ಥಿತಿಗಳು ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 9:00 ರಿಂದ ಸಂಜೆ 4:00 ರವರೆಗೆ.

ಮಕರ ರಾಶಿ:- ಈ ದಿನ ಪ್ರತಿಯೊಂದು ಪ್ರಯತ್ನವು ಯಶಸ್ಸನ್ನು ಕಾಣಬಹುದು. ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಎರಡರಲ್ಲೂ ಕೂಡ ನೀವು ಅತ್ಯುತ್ತಮವಾದದ್ದು ನೀಡಲು ಪ್ರಯತ್ನವನ್ನು ಮಾಡುತ್ತೀರಿ. ಇಂದು ನಿಮ್ಮ ಕೆಲಸದಲ್ಲಿ ಕಚೇರಿಯ ವಾತಾವರಣ ಉತ್ತಮವಾಗಿರುತ್ತದೆ. ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 5:00 ರಿಂದ ಮಧ್ಯಾಹ್ನ 1:00 ರವರೆಗೆ.

ಕುಂಭ ರಾಶಿ:- ಈ ದಿನ ಹಣಕಾಸಿನ ವಿಷಯದಲ್ಲಿ ನಿರಾಶೆ ಆಗಬಹುದು. ನಿಮ್ಮ ಖರ್ಚನ್ನು ನೀವು ಆದಷ್ಟು ನಿಯಂತ್ರಿಸಬೇಕು. ಅಗತ್ಯ ವಸ್ತುಗಳ ಮೇಲೆ ಮಾತ್ರ ನೀವು ಖರ್ಚನ್ನು ಮಾಡಬೇಕಾಗುತ್ತದೆ. ಒಡಹುಟ್ಟಿದವರ ಜೊತೆ ಕೆಲವು ವ್ಯತ್ಯಾಸಗಳು ಆಗುತ್ತದೆ. ಅವರು ನಿಮ್ಮ ಮಾತುಗಳನ್ನು ಒಪ್ಪದೆ ಇರಬಹುದು. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 2:00 ರವರೆಗೆ.

ಮೀನ ರಾಶಿ:- ವೈಯಕ್ತಿಕ ಜೀವನದಲ್ಲಿ ತೊಂದರೆಗಳು ಹೆಚ್ಚಾಗಬಹುದು. ಹಳೆಯ ಸದಸ್ಯರೊಂದಿಗೆ ಸಂಬಂಧವು ಕೆಡಬಹುದು. ಮನೆಯಲ್ಲಿನ ಕೆಲವು ಗೊಂದಲಗಳು ನಿಮಗೆ ನಿಮ್ಮ ಮನಸ್ಸಿನ ಶಾಂತಿಯನ್ನು ಭಂಗಗೊಳಿಸುತ್ತದೆ. ನೀವು ಬುದ್ಧಿವಂತಿಕೆಯಿಂದ ವಿಷಯವನ್ನು ಬಗೆಹರಿಸಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 5:00 ರಿಂದ 11:30 ರವರೆಗೆ.