ಮೇಷ ರಾಶಿ:- ಇಂದು ಕೌಟುಂಬಿಕ ಜೀವನದಲ್ಲಿ ಸಂತೋಷಗಳನ್ನು ಹೊಂದಿರುತ್ತೀರಿ. ಹಣಕಾಸಿನ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ. ನಿಮ್ಮ ಕುಟುಂಬದ ಸದಸ್ಯರಿಂದ ಹೆಚ್ಚು ವಾತ್ಸಲ್ಯವನ್ನು ಹೊಂದಿರುತ್ತೀರಿ. ನಿಮ್ಮ ಕುಟುಂಬದ ಜನರಿಗೆ ವಸ್ತುಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 1:00 ರವರೆಗೆ.

ವೃಷಭ ರಾಶಿ:- ನೀವು ನಿರುದ್ಯೋಗಿಯಾಗಿ ಕೆಲಸ ಹುಡುಕುತ್ತಾ ಇದ್ದರೆ ಈ ದಿನ ನಿಮಗೆ ಉತ್ತಮವಾದ ದಿನವಾಗಿರುತ್ತದೆ ಹಾಗೂ ನಿಮಗೆ ಕೆಲಸ ಸಿಗುವ ಕಡೆ ಹೆಚ್ಚು ಗಮನವನ್ನು ವಹಿಸಬೇಕಾಗುತ್ತದೆ. ನಿಮ್ಮ ಮಾತು ಗಳ ಮೇಲೆ ನಿಮಗೆ ಎಚ್ಚರಿಕೆಯಿಂದ ಇರಬೇಕು. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 6:00 ರಿಂದ ರಾತ್ರಿ 9:00 ರವರೆಗೆ.

ಮಿಥುನ ರಾಶಿ:- ವ್ಯಾಪಾರಸ್ಥರಿಗೆ ಇಂದು ಹಣಕಾಸಿನ ಬಹಿವಾಟು ಚೆನ್ನಾಗಿರುವುದಿಲ್ಲ. ಕೌಟುಂಬಿಕ ಜೀವನವು ಸಾಮಾನ್ಯವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರುವುದಿಲ್ಲ. ನಿಮ್ಮ ಕುಟುಂಬದ ಜೊತೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತೀರಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:00 ರವರೆಗೆ.

ಕರ್ಕಾಟಕ ರಾಶಿ:- ಕೆಲಸದಲ್ಲಿ ನೀವು ಉತ್ತಮವಾದ ಯಶಸ್ಸನ್ನು ಪಡೆಯುತ್ತೀರಿ. ಕೆಲಸದಲ್ಲಿ ದೊಡ್ಡ ಅಧಿಕಾರಿಗಳಿಂದ ಉತ್ತಮವಾದ ಸಲಹೆಗಳನ್ನು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಈ ದಿನ ಮಿಶ್ರಫಲವಾದ ದಿನವಾಗಿರುತ್ತದೆ. ಈ ದಿನ ನಿಮ್ಮ ಸಹೋದ್ಯೋಗಿಯೊಂದಿಗೆ ಕಾಲವನ್ನು ಕಳೆಯುತ್ತಿರಿ. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ.

ಸಿಂಹ ರಾಶಿ:- ವೈವಾಹಿಕ ಜೀವನದಲ್ಲಿ ಇಂದು ಅಪಶ್ರುತಿ ಹೆಚ್ಚಾಗ ಬಹುದು. ನೀವು ಇಂದು ಸಂಗಾತಿಯೊಂದಿಗೆ ಜಗಳವಾಡಬಹುದಾದ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಕೋಪ ಮತ್ತು ಮಾತನ್ನು ನಿಯಂತ್ರಿಸಿ ಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಮನೆಯ ಶಾಂತಿಗೆ ಬಂಗವಾಗು ತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 6:45 ರವರೆಗೆ.

ಕನ್ಯಾ ರಾಶಿ:- ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಅಷ್ಟೇನೂ ಒಳ್ಳೆಯದಲ್ಲ. ನೀವು ಇಂದು ತುಂಬಾ ದುರ್ಬಲರಾಗಿರುತ್ತೀರಿ. ಹಾಗಾಗಿ ಯಾವುದೇ ಕೆಲಸದಲ್ಲಿ ನಿಮ್ಮ ಗಮನವಿರುವುದಿಲ್ಲ. ನಿಮ್ಮನ್ನು ನೀವು ತಾಜಾತನದಿಂದ ಇಟ್ಟುಕೊಳ್ಳಲು ಪ್ರತಿದಿನ ವ್ಯಾಯಾಮವನ್ನು ಮಾಡಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 9:00 ರವರೆಗೆ.

ತುಲಾ ರಾಶಿ:- ನೀವು ಇಂದು ಏನೇ ಮಾಡಿದರು ಬಹಳ ಯೋಚನೆ ಯನ್ನು ಮಾಡಿ. ನೀವು ನೌಕರಿ ಮಾಡುತ್ತಾ ಇದ್ದರೆ ಇಂದು ಕಚೇರಿಯಲ್ಲಿ ಕೆಲವು ದೊಡ್ಡ ಜವಾಬ್ದಾರಿಗಳನ್ನು ನೀಡಬಹುದು. ಅಂತಹ ಪರಿಸ್ಥಿತಿ ಯಲ್ಲಿ ನಿಮ್ಮ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಗಮನ ವಹಿಸಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 5:00 ರವರೆಗೆ.

ವೃಶ್ಚಿಕ ರಾಶಿ:- ನೀವು ವ್ಯಾಪಾರ ಮಾಡುತ್ತಾ ಇದ್ದರೆ ಇಂದು ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಈ ನಿರ್ಧಾರದ ಸೂಕ್ತ ಫಲಿತಾಂಶವನ್ನು ನೀವು ಪಡೆಯುವ ಸಾಧ್ಯತೆ ಇದೆ. ಇಂದು ಸಣ್ಣ ವ್ಯಾಪಾರಿಗಳು ಉತ್ತಮ ಲಾಭ ಪಡೆಯ ಬಹುದು. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 5:00 ರಿಂದ ರಾತ್ರಿ 9:00 ರವರೆಗೆ.

ಧನಸ್ಸು ರಾಶಿ:- ನೀವು ಕೆಲಸ ಮಾಡುತ್ತಾ ಇದ್ದರೆ ಮತ್ತು ಸ್ವಲ್ಪ ಸಮಯ ದವರೆಗೆ ನಿರೀಕ್ಷೆಯಂತೆ ಫಲಿತಾಂಶವನ್ನು ಪಡೆಯದಿದ್ದರೆ ಇಂದು ನಿಮಗೆ ಒಳ್ಳೆಯದೇ ಆಗುತ್ತದೆ. ನಿಮ್ಮ ಕೆಲಸ ಮತ್ತು ಕೌಶಲ್ಯದಿಂದ ಹಿರಿಯ ಅಧಿಕಾರಿಗಳ ಮನಸ್ಸನ್ನು ಗೆಲ್ಲುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಮಧ್ಯಾಹ್ನ 1:30 ರಿಂದ ಸಂಜೆ 4:15 ರವರೆಗೆ.

ಮಕರ ರಾಶಿ:- ಇಂದು ನೀವು ಸಾಮಾಜಿಕವಾಗಿ ತುಂಬಾ ಸಕ್ರಿಯರಾಗಿ ರುತ್ತೀರಿ. ನಿಮ್ಮ ಇಡೀ ಕುಟುಂಬದೊಂದಿಗೆ ನೀವು ಸಾಮಾಜಿಕ ಕಾರ್ಯ ಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಇಂದು ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 6:15 ರವರೆಗೆ.

ಕುಂಭ ರಾಶಿ:- ನೌಕರಸ್ಥರಿಗೆ ಇಂದು ಉತ್ತಮ ದಿನವಾಗಿರಲಿದೆ. ಉದ್ಯೋಗ ಮಾಡುವವರಿಗೆ ಕಚೇರಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ನಿಮಗೆ ದೊಡ್ಡ ಕೆಲಸವನ್ನು ನಿಯೋಜಿಸಬಹುದು. ನಿಗದಿತ ಸಮಯದಲ್ಲಿ ಈ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 6:00 ರವರೆಗೆ.

ಮೀನ ರಾಶಿ:- ಕೋರ್ಟು ಕಚೇರಿಯ ಯಾವುದೇ ಹಳೆಯ ಪ್ರಕರಣ ಗಳಲ್ಲಿ ಇಂದು ನೀವು ಯಶಸ್ಸನ್ನು ಪಡೆಯುವ ನಿರೀಕ್ಷೆ ಇದೆ. ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯು ನಿಮಗೆ ದೀರ್ಘ ಕಾಲದಿಂದ ತೊಂದರೆ ನೀಡುತ್ತಿದ್ದರೆ ನೀವು ಅದರಿಂದ ಮುಕ್ತಿಯನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 3:00 ರವರೆಗೆ.