ಮೇಷ ರಾಶಿ:- ಇಂದು ಕುಟುಂಬದ ಸದಸ್ಯರ ಜೊತೆಗೆ ಸಂತೋಷದ ಸಮಯವನ್ನು ಕಳೆಯುತ್ತೀರಿ. ಮನೆಯ ಹಿರಿಯರ ಬೆಂಬಲ ಹಾಗೂ ಆಶೀರ್ವಾದ ಇಂದು ನಿಮಗೆ ಸಿಗಲಿದೆ. ನಿಮ್ಮ ಜೀವನದ ಮುಖ್ಯ ವಿಷಯಗಳ ಕುರಿತು ಕುಟುಂಬದವರ ಜೊತೆ ಚರ್ಚಿಸುತ್ತೀರಿ. ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಮಾಧುರ್ಯ ಹೆಚ್ಚುತ್ತದೆ.
ಅದೃಷ್ಟದ ಸಂಖ್ಯೆ: 5 ಅದೃಷ್ಟದ ಬಣ್ಣ: ಗುಲಾಬಿ.
ಉತ್ತಮ ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:15 ರವರೆಗೆ.

ವೃಷಭ ರಾಶಿ:- ಉದ್ಯೋಗಸ್ಥರು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕಚೇರಿಯಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ತಿ ಮಾಡಲು ಪ್ರಯತ್ನಿಸುತ್ತೀರಿ, ಅದು ಪೂರ್ತಿಯಾದ ಬಳಿಕ ನೆಮ್ಮದಿಯನ್ನು ಕೂಡ ಕಾಣುತ್ತೀರಿ. ವ್ಯಾಪಾರಸ್ಥರಿಗೂ ಕೂಡ ಅವರ ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶಗಳನ್ನು ಪಡೆಯುವ ಅವಕಾಶಗಳು ಇವೆ.
ಅದೃಷ್ಟದ ಸಂಖ್ಯೆ: 4 ಅದೃಷ್ಟದ ಬಣ್ಣ: ಕಂದು.
ಉತ್ತಮ ಸಮಯ: ಸಂಜೆ 6:20 ರಿಂದ ರಾತ್ರಿ 9:00 ರವರೆಗೆ.

ಮಿಥುನ ರಾಶಿ:- ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಲ್ಲ. ಹೊಟ್ಟೆಗೆ ಸಂಬಂಧ ಪಟ್ಟ ಹಾಗೆ ಯಾವುದಾದರೂ ಅಸ್ವಸ್ಥತೆ ಉಂಟಾಗಬಹುದು. ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸುವುದು ಒಳ್ಳೆಯದು. ಕೆಲಸ ಕಾರ್ಯಗಳ ವಿಚಾರವಾಗಿ ಇಂದು ಕಛೇರಿಗಳಲ್ಲಿ ಕೆಲಸ ಮಾಡುವವರಿಗೆ ಕೆಲಸದ ಹೊರೆ ಹೆಚ್ಚಾಗಬಹುದು.
ಅದೃಷ್ಟದ ಸಂಖ್ಯೆ: 2 ಅದೃಷ್ಟದ ಬಣ್ಣ: ಕೆಂಪು.
ಉತ್ತಮ ಸಮಯ: ಸಂಜೆ 5:00ರಿಂದ ರಾತ್ರಿ 8:30 ರವರೆಗೆ.

ಕರ್ಕಾಟಕ ರಾಶಿ:- ಹಣದ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ. ಇಂದು ಯಾರಿಗೆ ಆಗಿದ್ದರೂ ಹಣವನ್ನು ಕೊಡುವುದು ಅಥವಾ ನೀವು ಯಾರಿಂದಲಾದರೂ ಹಣ ಪಡೆಯುವುದನ್ನು ತಪ್ಪಿಸಿ. ಜೊತೆಗೆ ಯಾವುದಾದರೂ ಅಮೂಲ್ಯ ವಸ್ತುವನ್ನು ಅಥವಾ ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ದಿನ ಅದಕ್ಕೆ ಸೂಕ್ತವಲ್ಲ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಒತ್ತಡದಿಂದ ಕೂಡಿರುತ್ತದೆ.
ಅದೃಷ್ಟದ ಸಂಖ್ಯೆ: 6 ಅದೃಷ್ಟದ ಬಣ್ಣ: ಹಳದಿ.
ಉತ್ತಮ ಸಮಯ: ಬೆಳಿಗ್ಗೆ 6:15 ರಿಂದ 11:00 ರವರೆಗೆ.

ಸಿಂಹ ರಾಶಿ:- ಆರೋಗ್ಯದ ದೃಷ್ಟಿಯಲ್ಲಿ ಇಂದು ನಿಮಗೆ ಅಷ್ಟು ಉತ್ತಮವಾದ ದಿನವಲ್ಲ. ವಿಶೇಷವಾಗಿ ಈ ರಾಶಿಯ ಗರ್ಭಿಣಿಯರು ಈ ದಿನ ಹೆಚ್ಚಿನ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಇರಬೇಕು. ಸಣ್ಣ ಸಮಸ್ಯೆ ಇದ್ದರೂ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಕೆಲಸದ ವಿಚಾರವಾಗಿ ವ್ಯಾಪಾರಸ್ಥರಿಗೆ ಬಹಳ ಕಾರ್ಯನಿರತವಾದ ದಿನವಾಗಿರುತ್ತದೆ.
ಅದೃಷ್ಟದ ಸಂಖ್ಯೆ: 4 ಅದೃಷ್ಟದ ಬಣ್ಣ: ಗುಲಾಬಿ.
ಉತ್ತಮ ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ರವರೆಗೆ.

ಕನ್ಯಾ ರಾಶಿ:- ಕೆಲಸದ ಆರಂಭದಲ್ಲಿ ಈ ದಿನವು ನಿಮಗೆ ಕೆಲವು ಸವಾಲುಗಳನ್ನು ತರಬಹುದು. ಉದ್ಯೋಗಸ್ಥರು ಕೆಲಸದ ವೇಳೆಯಲ್ಲಿ ಸಮಯದ ಬಗ್ಗೆ ಹೆಚ್ಚು ಗಮನಹರಿಸುವ ಅವಶ್ಯಕತೆ ಇರುತ್ತದೆ. ಇಂದು ನಿಮಗೆ ಯಾವುದೇ ಜವಾಬ್ದಾರಿಯನ್ನು ವಹಿಸಿದ್ದರು ಕೂಡ ಅದನ್ನು ಕಠಿಣ ಪರಿಶ್ರಮದೊಂದಿಗೆ ಸರಿಯಾದ ಸಮಯಕ್ಕೆ ಪೂರ್ತಿ ಮಾಡಲು ಪ್ರಯತ್ನಿಸಿ.
ಅದೃಷ್ಟದ ಸಂಖ್ಯೆ: 3 ಅದೃಷ್ಟದ ಬಣ್ಣ: ನೇರಳೆ.
ಉತ್ತಮ ಸಮಯ: ಸಂಜೆ 5:00ರಿಂದ ರಾತ್ರಿ 9:00 ರವರೆಗೆ.

ತುಲಾ ರಾಶಿ:- ಉದ್ಯೋಗದ ವಿಚಾರವಾಗಿ ಬಹಳ ಮುಖ್ಯವಾದ ದಿನವಾಗಿರುತ್ತದೆ. ಇಂದು ಕಚೇರಿಯಲ್ಲಿ ಒಂದು ಪ್ರಮುಖವಾದ ಸಭೆಯು ಏರ್ಪಡಬಹುದು. ನಿಮಗೆ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಕೂಡ ಕೊಡಬಹುದು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಶೀಘ್ರವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಕೆಲಸದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತೀರಿ.
ಅದೃಷ್ಟದ ಸಂಖ್ಯೆ: 5 ಅದೃಷ್ಟದ ಬಣ್ಣ: ಹಸಿರು.
ಉತ್ತಮ ಸಮಯ: ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ.

ವೃಶ್ಚಿಕ ರಾಶಿ:- ಮನೆಯ ವಾತಾವರಣ ಇಂದು ಉತ್ತಮವಾಗಿರುವುದಿಲ್ಲ. ಮನೆಯ ಹಿರಿಯರ ಜೊತೆ ಚಿಕ್ಕ ಮನಸ್ತಾಪವನ್ನು ಕೂಡ ಮಾಡಿಕೊಳ್ಳುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ನೀವು ಬಳಸುವ ಪದವನ್ನು ಚಿಂತನಕಾರಿಯಾಗಿ ಉಪಯೋಗಿಸ ಬೇಕಾಗುತ್ತದೆ. ಹಿರಿಯರ ಕೊಡುವ ಸಲಹೆ ನಿಮಗೆ ಪ್ರಯೋಜನಕಾರಿಯಾಗಿರುತ್ತದೆ. ಅವರ ಮಾತುಗಳನ್ನು ನಿರ್ಲಕ್ಷಿಸಬೇಡಿ.
ಅದೃಷ್ಟದ ಸಂಖ್ಯೆ: 7 ಅದೃಷ್ಟದ ಬಣ್ಣ: ನೀಲಿ.
ಉತ್ತಮ ಸಮಯ: ಸಂಜೆ 5:00 ರಿಂದ ರಾತ್ರಿ 8:00 ರವರೆಗೆ.

ಧನಸ್ಸು ರಾಶಿ:- ಇಂದು ನಿಮಗೆ ಕೊಡುವ ಕೆಲಸಗಳನ್ನು ಪೂರ್ಣಶಕ್ತಿ ಹಾಗೂ ಆಸಕ್ತಿಯಿಂದ ಪೂರ್ತಿಗೊಳಿಸಿ, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಜೊತೆಗೆ ನಿಮ್ಮ ಮೇಲಾಧಿಕಾರಿಗಳ ಆಜ್ಞೆಗಳಂತೆ ನಡೆದರೆ ಪರಿಸ್ಥಿತಿ ಅನುಕೂಲಕರವಾಗಿರಲಿದೆ. ವ್ಯಾಪಾರಸ್ಥರಿಗೆ ಉತ್ತಮ ಲಾಭಗಳು ಉಂಟಾಗುವ ಅವಕಾಶಗಳು ಸಿಗುತ್ತದೆ.
ಅದೃಷ್ಟದ ಸಂಖ್ಯೆ: 4 ಅದೃಷ್ಟದ ಬಣ್ಣ: ಕಂದು.
ಉತ್ತಮ ಸಮಯ: ಬೆಳಗ್ಗೆ 8:20 ರಿಂದ ಮಧ್ಯಾಹ್ನ 12:00 ರವರೆಗೆ.

ಮಕರ ರಾಶಿ:- ಇಂದು ಯಾವುದೇ ಕೆಲಸಗಳನ್ನು ಮಾಡಿದರೂ ಎಚ್ಚರಿಕೆಯಿಂದ ಮಾಡಿ. ನಿಮ್ಮ ಆತುರದ ನಿರ್ಧಾರಗಳು ನಿಮ್ಮನ್ನು ಆಗಾಗ ತೊಂದರೆಗೆ ಸಿಲುಕಿಸುತ್ತವೆ. ನೀವು ವ್ಯಾಪಾರ ಮಾಡಲು ಹೊರಟಿದ್ದರೆ ಅಥವಾ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದರೆ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು.
ಅದೃಷ್ಟದ ಸಂಖ್ಯೆ: 4 ಅದೃಷ್ಟದ ಬಣ್ಣ: ನೀಲಿ
ಉತ್ತಮ ಸಮಯ: ಸಂಜೆ 7:15ರಿಂದ ಮಧ್ಯಾಹ್ನ 2:00 ರವರೆಗೆ.

ಕುಂಭ ರಾಶಿ:- ಪ್ರೀತಿಯ ವಿಚಾರದಲ್ಲಿ ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ. ನೀವು ಯಾರ ಬಳಿಯಾದರೂ ಪ್ರೀತಿಯನ್ನು ನಿವೇದಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದರೆ ನಿಮ್ಮ ಮನಸ್ಸಿನಲ್ಲಿ ಇರುವುದನ್ನು ಹೊರಹಾಕಲು ಈ ದಿನ ಅನುಕೂಲಕರವಾಗಿರುತ್ತದೆ. ನಿಮ್ಮ ನಿರೀಕ್ಷೆಯಂತೆ ಸಕಾರಾತ್ಮಕ ಉತ್ತರಗಳನ್ನು ಕೂಡ ಪಡೆಯುವ ಸಾಧ್ಯತೆ ಇದೆ.
ಅದೃಷ್ಟದ ಸಂಖ್ಯೆ: 2 ಅದೃಶ್ಯದ ಬಣ್ಣ: ಬಿಳಿ.
ಉತ್ತಮ ಸಮಯ: ಮಧ್ಯಾಹ್ನ 12:00 ರಿಂದ 3:45 ರವರೆಗೆ.

ಮೀನ ರಾಶಿ:- ಇಂದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಸಂಗಾತಿ ಜೊತೆಗಿನ ಸಂಬಂಧದಲ್ಲಿ ಪ್ರೀತಿ ಅಧಿಕವಾಗುತ್ತದೆ. ನಿಮ್ಮ ಸಂಗಾತಿ ಜೊತೆಗೆ ಪ್ರಣಯದ ದಿನವನ್ನು ಕಳೆಯುತ್ತೀರಿ. ಉದ್ಯೋಗಸ್ಥರು ಕೆಲಸದಲ್ಲಿ ಸಮರ್ಪಣೆ ಮತ್ತು ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕು. ಅದು ನಿಮಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಅದೃಷ್ಟದ ಸಂಖ್ಯೆ: 8 ಅದೃಶ್ಯದ ಬಣ್ಣ: ಹಳದಿ.
ಉತ್ತಮ ಸಮಯ: ಸಂಜೆ 4:00 ರಿಂದ ರಾತ್ರಿ 9:00 ರವರೆಗೆ.