ದಿನ ಭವಿಷ್ಯ 16 ಜೂನ್ 2023||

ಮೇಷ ರಾಶಿ:- ನೀವು ವ್ಯಾಪಾರವನ್ನು ಮಾಡುತ್ತಾ ಇದ್ದರೆ ಈ ದಿನ ನಿಮಗೆ ಉತ್ತಮವಾದ ಲಾಭ ಸಿಗಬಹುದು ಮತ್ತು ಈ ದಿನ ನೀವು ಕೆಲವು ಹೊಸ ಯೋಜನೆಗಳನ್ನು ಸಹ ನಡೆಸಬಹುದು. ನಿಮ್ಮ ಸಹಭಾಗಿತ್ವದಲ್ಲಿ ವ್ಯವಹಾರ ಮಾಡಲು ಬಯಸಿದ್ದರೆ ಸರಿಯಾದ ಸಮಯ ಇರುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 9:30 ರಿಂದ ಮಧ್ಯಾಹ್ನ 2:00 ರವರೆಗೆ.

ವೃಷಭ ರಾಶಿ:- ಇಂದು ನಿಮ್ಮ ಆರ್ಥಿಕ ಪ್ರಯತ್ನಗಳು ಯಶಸ್ವಿಯಾಗಿ ಇರಬಹುದು. ಮತ್ತು ಈ ದಿನ ನಿಮ್ಮ ಆದಾಯವೂ ಕೂಡ ಹೆಚ್ಚಾಗ ಬಹುದು. ಇದಲ್ಲದೆ ನಿಮ್ಮ ಯಾವುದೇ ಹಳೆಯ ಸಾಲವನ್ನು ಕೂಡ ನೀವು ತೆಗೆದು ಹಾಕಬಹುದು. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ರಿಂದ ರಾತ್ರಿ 8:00 ರವರೆಗೆ.

ಮಿಥುನ ರಾಶಿ:- ನಿಮಗೆ ಏನಾದರೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಇದ್ದರೆ ನೀವು ಔಷಧಿಯನ್ನು ಸರಿಯಾದ ಸಮಯಕ್ಕೆ ತೆಗೆದು ಕೊಳ್ಳಿ ಮತ್ತು ವಿಶ್ರಾಂತಿಯ ಕಡೆ ಹೆಚ್ಚು ಗಮನ ಕೊಡಿ. ನಿಮ್ಮ ಕೆಲಸವು ಹೆಚ್ಚು ಒತ್ತಡದಿಂದ ಕೂಡಿರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 7:30 ರಿಂದ 11:00 ರವರೆಗೆ.

ಕರ್ಕಾಟಕ ರಾಶಿ:- ನಿಮ್ಮ ಕೋಪದ ಸ್ವಭಾವದಿಂದಾಗಿ ಇಂದು ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಇದರಿಂದ ನೀವು ಸಾಕಷ್ಟು ಟೀಕೆಗೆ ಒಳಗಾಗುತ್ತೀರಿ. ಕಷ್ಟದ ಸಂದರ್ಭದಲ್ಲಿ ನಿಮ್ಮನ್ನು ವಿಶ್ರಾಂತವಾಗಿ ಇಟ್ಟುಕೊಳ್ಳಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 12:00 ರವರೆಗೆ.

ಸಿಂಹ ರಾಶಿ:- ಇಂದು ನಿಮ್ಮ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಮತ್ತು ಕೆಲಸಕ್ಕೆ ಸಂಬಂಧಪಟ್ಟಂತೆ ನೀವು ಉತ್ತಮವಾದ ಸಾಧನೆಯನ್ನು ಮಾಡುವ ಸಾಧ್ಯತೆ ಇದೆ. ನೀವು ನಿರುದ್ಯೋಗಿಯಾಗಿದ್ದರೆ ಇಂದು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8:00 ರವರೆಗೆ.

ಕನ್ಯಾ ರಾಶಿ:- ಇಂದು ನೀವು ಇತರರ ಮಾತನ್ನು ಕೇಳುವುದನ್ನು ಬಿಟ್ಟು ನಿಮ್ಮ ಮನಸ್ಸಿನ ಮಾತನ್ನು ಕೇಳಿ ಯಾವುದು ಒಳ್ಳೆಯದು ಮತ್ತು ಯಾವುದು ಅಲ್ಲ ಎಂಬುವುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಹಾಗಾಗಿ ನಿಮ್ಮ ಬುದ್ಧಿ ನಿಮ್ಮ ಹತ್ತಿರ ಇರಬೇಕು. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30 ರವರೆಗೆ.

ತುಲಾ ರಾಶಿ:- ಸಣ್ಣ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳುವ ನಿಮ್ಮ ಅಭ್ಯಾಸವನ್ನು ಬದಲಾಯಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ನೀವು ಯಾವಾಗಲೂ ನಿರಾಶರಾಗಿ ಇರುತ್ತೀರಿ. ಮತ್ತು ಅದು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30 ರವರೆಗೆ.

ವೃಶ್ಚಿಕ ರಾಶಿ:- ನೀವು ಸಂತೋಷದ ದಾಂಪತ್ಯ ಜೀವನವನ್ನು ಅನುಭವಿ ಸಲು ಪ್ರಯತ್ನಿಸಿದರೆ ನೀವು ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅನಗತ್ಯ ಮುಖಾಮುಖಿಯನ್ನು ತಪ್ಪಿಸಿ ಮತ್ತು ಪ್ರೀತಿ ಪಾತ್ರರನ್ನು ಗೌರವದಿಂದ ಇರಿಸಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 1:00 ರವರೆಗೆ.

ಧನಸ್ಸು ರಾಶಿ:- ನೀವೇನಾದರೂ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇದ್ದರೆ ಇಂದು ಆರ್ಥಿಕವಾಗಿ ನಿಮಗೆ ಲಾಭಗಳಿಸುವ ಎಲ್ಲಾ ಸಾಧ್ಯತೆ ಗಳು ಇವೆ. ಹಾಗೂ ಇಂದು ಎಲ್ಲಾ ಕೆಲಸವು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತದೆ. ಹಣದ ಪರಿಸ್ಥಿತಿ ಕೂಡ ಈ ದಿನ ಉತ್ತಮ ವಾಗಿರುತ್ತದೆ. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:00 ರವರೆಗೆ.

ಮಕರ ರಾಶಿ:- ಈ ದಿನ ವ್ಯಾಪಾರಸ್ಥರಿಗೆ ಹಾಗೂ ದೊಡ್ಡ ಉದ್ಯಮಿಗಳಿಗೆ ಇದ್ದಕ್ಕಿದ್ದಂತೆ ದೂರದ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ಈ ಪ್ರಯಾಣದಿಂದ ನಿಮಗೆ ಹೆಚ್ಚು ಲಾಭವಿರುತ್ತದೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 1:00 ರಿಂದ ಮಧ್ಯಾಹ್ನ 1:00 ರವರೆಗೆ.

ಕುಂಭ ರಾಶಿ:- ಅನಗತ್ಯ ವಿಷಯಗಳ ಬಗ್ಗೆ ಯೋಚನೆ ಮಾಡಿ. ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಹಾಗೂ ನೀವು ಬುದ್ಧಿವಂತಿಕೆಯಿಂದ ಈ ದಿನ ಇರಬೇಕಾಗುತ್ತದೆ. ಮತ್ತು ಅನಗತ್ಯ ಚಿಂತೆಗಳಿಂದ ಆದಷ್ಟು ದೂರವಿರಿ. ಹಾಗೂ ಪ್ರಮುಖ ಕಾರ್ಯಗಳ ಬಗ್ಗೆ ಗಮನವನ್ನು ವಹಿಸಿ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 5:00 ರವರೆಗೆ.

ಮೀನ ರಾಶಿ:- ಕಚೇರಿಯಲ್ಲಿ ನಿಮ್ಮ ಪೂರ್ಣ ಕೆಲಸವನ್ನು ಪೂರ್ಣ ಗೊಳಿಸಿ. ನಾಳೆ ಯಾವುದೇ ಕೆಲಸವನ್ನು ಮುಂದೂಡಬೇಡಿ. ಹಾಗೂ ವ್ಯಾಪಾರಿಗಳು ಇಂದು ಉತ್ತಮ ಲಾಭವನ್ನು ಪಡೆಯುತ್ತೀರಿ. ಇಂದು ಆರ್ಥಿಕ ರಂಗದಲ್ಲಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಗಮನವನ್ನು ವಹಿಸಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಸಂಜೆ 5:00 ರವರೆಗೆ.