ಚಿಕ್ಕ ವಯಸ್ಸಿಗೆ ಅಪ್ಪ-ಅಮ್ಮನನ್ನ ಕಳಕೊಂಡ ರಘುವೀರ್ ಸಿಂಧು ಮಗಳು ಸದ್ಯ ಹೇಗಿದ್ದಾರೆ.. ಕನ್ನಡ ಸಿನಿಮಾ ಇಂಡಸ್ಟ್ರಿಯ ದುರಂತ ನಾಯಕ ಅಂದರೆ ಅದು ರಘುವೀರ್, ರಘುವೀರ್ ಕೊನೆಯ ಸಂದರ್ಶನದಲ್ಲಿ ಒಂದು ಮಾತನ್ನ ಹೇಳುತ್ತಾರೆ ನಾನು ಅಂದು ನನ್ನ ವಿದ್ಯಾಭ್ಯಾಸಕ್ಕೆ ತಕ್ಕ ಹಾಗೆ ಇಂಜಿನಿಯರಿಂಗ್ ಆಗಿದ್ದರೆ ಇವತ್ತು ನನಗೆ ಈ ರೀತಿಯಾದಂತಹ ಪರಿಸ್ಥಿತಿ.
ಬರುತ್ತಿರಲಿಲ್ಲ ಯಾವುದೋ ಮೋಹಕ್ಕೆ ಬಿದ್ದು ಯಾವುದೋ ವ್ಯಾಮೋಹಕ್ಕೆ ಒಳಗಾಗಿ ಸಿನಿಮಾ ಇಂಡಸ್ಟ್ರಿಗೆ ಬಂದೆ ಇವತ್ತು ಎಲ್ಲವನ್ನು ಕಳೆದುಕೊಂಡು ನಿಮ್ಮ ಮುಂದೆ ದುರಂತ ನಾಯಕ ಎಂದು ಅನಿಸಿಕೊಳ್ಳುತ್ತಿದ್ದೇನೆ ಬದುಕು ಹೇಗೆ ಬದಲಾಗುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಅವತ್ತು ನಾನು ಈ ಕಡೆಗೆ ಇಟ್ಟಂತಹ ಹೆಜ್ಜೆಯನ್ನ ಆ ಕಡೆ ಇಟ್ಟಿದ್ದರೆ ಇವತ್ತು ನಾನು.
ಆರಾಮಾಗಿ ಇರುತ್ತಿದ್ದೆ ಎನ್ನುವಂತಹ ಮಾತನ್ನ ರಘುವೀರ್ ಹೇಳುತ್ತಾರೆ.ರಘುವೀರ್ ಅದಕ್ಕೆ ತಕ್ಕ ಹಾಗೆ ನಮ್ಮ ಮುಂದೆ ದುರಂತ ನಾಯಕನಾಗಿ ನಿಂತುಕೊಂಡರು ಸಾಯಬಾರದಂತಹ ವಯಸ್ಸಿಗೆ 46 ವರ್ಷಕ್ಕೆ ವಿಧಿವಶರಾಗುವಂತಹ ಪ್ರಸಂಗ ಎದುರಾಯಿತು ರಘುವೀರ್ ಅವರ ಬಗ್ಗೆ ನಿಮಗೆ ಗೊತ್ತು ಅವರ ಪತ್ನಿಯಾದಂತಹ ಸಿಂಧು ಅವರ ಬಗ್ಗೆಯೂ ನಿಮಗೆ ಗೊತ್ತು.
ಹಾಗಾದರೆ ರಘುವೀರ್ ಮಗಳು ಎಲ್ಲಿದ್ದಾಳೆ ಏನು ಮಾಡುತ್ತಿದ್ದಾಳೆ ಸದ್ಯ ಯಾವ ರೀತಿಯಾಗಿ ಜೀವನವನ್ನ ಸಾಗಿಸುತ್ತಿದ್ದಾರೆ ಅದೆಲ್ಲವನ್ನು ಕೂಡ ಇವತ್ತಿನ ಈ ವಿಡಿಯೋದಲ್ಲಿ ನೋಡೋಣ. ಅದಕ್ಕೂ ಮುನ್ನ ರಘುವೀರ್ ಗೆ ಸಂಬಂಧಪಟ್ಟ ಎರಡು ವಿಚಾರಗಳನ್ನು ಹೇಳುತ್ತೇನೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಘುವೀರ್ ಹುಟ್ಟಿದ್ದು ಶ್ರೀಮಂತ ಕುಟುಂಬದಲ್ಲಿ ಅವರ.
ತಂದೆಯ ಮುನಿಯಲ್ಲಪ್ಪ ಆ ಕಾಲದ ದೊಡ್ಡ ಕಾಂಟ್ರಾಕ್ಟರ್ ಆಗಿದ್ದರು ಬಹುತೇಕ ಬೆಂಗಳೂರಿನ ಬಿಲ್ಡಿಂಗಗಳನ್ನ ಕಟ್ಟಿಸಿದ್ದು ಅವರ ತಂದೆಯಾದಂತಹ ಮುನಿಯಲ್ಲಪ್ಪ ಅಂದರೆ ಕಾಂಟ್ರಾಕ್ಟರ್ ಆಗಿ ಆ ಎಲ್ಲಾ ಬಿಲ್ಡಿಂಗ್‌ಗಳನ್ನು ಕಟ್ಟಿಸುವಂತಹ ಕೆಲಸವನ್ನು ಮಾಡಿದ್ದಾರೆ ಇನ್ನು ಮುನಿಯಲ್ಲಪ್ಪ ಅಂಬರೀಶ್ ಅವರ ಮನೆಯನ್ನ ಕಟ್ಟಿಸುವ ಸಂದರ್ಭದಲ್ಲಿ ರಘುವೀರ್ ಅವರಿಗೆ.
ಅಂಬರೀಶ್ ಅವರ ಪರಿಚಯವಾಗುತ್ತದೆ ಹೀಗಾಗಿ ಸಿನಿಮಾ ಇಂಡಸ್ಟ್ರಿಯ ವ್ಯಾಮೋಹ ಬೆಳೆಯುತ್ತದೆ ಈ ಕಾರಣಕ್ಕಾಗಿ ತನ್ನ ವಿದ್ಯಾಭ್ಯಾಸಕ್ಕೆ ತಕ್ಕ ಹಾಗೆ ಕೆಲಸ ಮಾಡುವುದನ್ನು ಬಿಟ್ಟು ಸಿನಿಮಾ ಇಂಡಸ್ಟ್ರಿಗೆ ಬರುತ್ತಾರೆ ಅಜಯ್ ವಿಜಯ್ ಎನ್ನುವಂತಹ ಸಿನಿಮಾವನ್ನು ಮಾಡುತ್ತಾರೆ ಮೊದಲ ಸಿನಿಮಾ ಸೋಲು ಕಾಣುತ್ತದೆ ಅದಾದ ನಂತರ ಚೈತ್ರದ ಪ್ರೇಮಾಂಜಲಿ.
ಎನ್ನುವಂತಹ ಸಿನಿಮಾವನ್ನ ಎಸ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಾರೆ ಅವರಿಗೂ ಕೂಡ ಪ್ರಥಮ ಸಿನಿಮಾ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಇಡೀ ಚಿತ್ರತಂಡ ಒದ್ದಾಡುತ್ತದೆ ಅವಮಾನಗಳನ್ನು ಎದುರಿಸುತ್ತದೆ ಇವನೊಬ್ಬ ಹೀರೋ ನಾ ಎಂದು ಆಡಿಕೊಳ್ಳುತ್ತದೆ ಅಂತಿಮವಾಗಿ ಚೈತ್ರದ ಪ್ರೇಮಾಂಜಲಿ ಸೆಟ್ ಮಾಡಿರುವಂತಹ ದಾಖಲೆ ನಿಮ್ಮೆಲ್ಲರಿಗೂ.
ಕೂಡ ಗೊತ್ತು ಅದೇ ಉತ್ಸಾಹದಲ್ಲಿ ಆನಂತರ ಬಂದಂತಹ ಸಿನಿಮಾವೆಂದರೆ ಶೃಂಗಾರ ಕಾವ್ಯ ಆ ಸಿನಿಮಾ ಕೂಡ ಬಿಗ್ ಹಿಟ್ ಆಗುತ್ತದೆ ರಘುವೀರ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಓರ್ವ ಸೂಪರ್ ಹಿಟ್ ಹೀರೋ ಹಾಗಿ ಆಗ ನಿಂತುಕೊಳ್ಳುತ್ತಾರೆ ಅದಾದ ನಂತರ ರಘುವೀರ್ ಬದುಕಿನಲ್ಲಿ ಆದಂತಹ ಎಡವಟ್ಟು ಅಂದರೆ ಅದೇ ಸಿನಿಮಾದ ನಾಯಕಿ ಆಗಿರುವಂತಹ ಸಿಂಧು ಅವರನ್ನ.
ಪ್ರೀತಿಸಿ ಮದುವೆಯಾಗುತ್ತಾರೆ ಪ್ರೀತಿಸಿ ಮದುವೆಯಾಗಿದ್ದು ಯಾಕೆ ಎಡವಟ್ಟು ಎಂದರೆ ಅವರ ತಂದೆ ರಘುವೀರ್ ಗೆ ಎಲ್ಲವೂ ಕೂಡ ಆಗಿದ್ದರು ಅವರಿಗೆ ಬ್ಯಾಕ್ ಬೋನ್ ಗಾಡ್ ಫಾದರ್ ಅವರ ತಂದೆ ಆಗಿದ್ದರು ಆದರೆ ತಂದೆಯ ವಿರೋಧದ ನಡುವೆ ಸಿಂಧೂ ಅವರನ್ನ ಮದುವೆಯಾಗುತ್ತಾರೆ.
ಆದರೆ ಅವರ ತಂದೆಗೆ ಅವರ ಪತ್ನಿಯ ತಮ್ಮನ ಮಗಳನ್ನು ಮದುವೆ ಮಾಡಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಆದರೆ ರಘುವೀರ್ ಅದೆಲ್ಲವನ್ನು ಧಿಕ್ಕರಿಸಿ ಸಿಂಧು ಅವರನ್ನ ಮದುವೆಯಾಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ