ಅಜ್ಜಿ ಮುತ್ತಜ್ಜಿ ಕೂಡ ಹೇಳಲಾರದಂತ ಟಿಪ್ಸ್….||

ಸಾಮಾನ್ಯವಾಗಿ ಎಲ್ಲರೂ ಕೂಡ ಯಾವುದೇ ಒಂದು ಕೆಲಸದ ಬಗ್ಗೆ ಆ ಕೆಲಸ ಬೇಗ ಆಗಲಿ ಅಥವಾ ಆ ಕೆಲಸ ಸುಲಭವಾಗಿ ಆಗುವಂತೆ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಅದರಿಂದ ಕೆಲಸ ಬೇಗ ಆಗುತ್ತದೆ ಮತ್ತು ಹೆಚ್ಚು ಪರಿಶ್ರಮವಿಲ್ಲದೆ ಕಡಿಮೆ ಸಮಯದಲ್ಲಿ ಆ ಕೆಲಸ ಆಗುತ್ತದೆ ಎಂದು ಕೆಲವೊಬ್ಬರು ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.

ಅದೇ ರೀತಿಯಾಗಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಅಡುಗೆ ಮನೆಯಲ್ಲಿ ಯಾವುದೇ ಕೆಲಸದ ಬಗ್ಗೆ, ಆ ಕೆಲಸ ಬೇಗ ಆಗಲಿ ಎನ್ನುವಂತೆ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಅದೇ ರೀತಿಯಾಗಿ. ಅಡುಗೆ ಮನೆಯಲ್ಲಿ ಮಾಡುವಂತಹ ಕೆಲಸವನ್ನು ಹೇಗೆ ಸುಲಭವಾಗಿ ಮತ್ತು ಬೇಗ ಮಾಡಬಹುದು ಎನ್ನುವಂತಹ ವಿಧಾನಗಳ ಬಗ್ಗೆ ಕೆಲವೊಬ್ಬರು ಬೇರೆಯವರ ಬಳಿ ವಿಷಯಗಳನ್ನು ತಿಳಿದುಕೊಂಡು ಆ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.

https://youtu.be/Aurg4jxMwZA

ಅದೇ ರೀತಿಯಾಗಿ ಈ ದಿನ ಮನೆಯಲ್ಲಿ ಅನುಸರಿಸುವಂತಹ ಕೆಲವೊಂದು ಸೂಪರ್ ಟಿಪ್ಸ್ ಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹಾಗೂ ಈ ವಿಧಾನವನ್ನು ಅನುಸರಿಸುವುದರಿಂದ ನಿಮಗೆ ಹೆಚ್ಚಿನ ಉಪಯೋಗವಾಗುತ್ತದೆ ಜೊತೆಗೆ ಕೆಲವೊಮ್ಮೆ ನಮ್ಮಿಂದ ಬೇರೆಯವರಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಕೂಡ ಬರುವುದಿಲ್ಲ. ಆದ್ದರಿಂದ ಈ ವಿಧಾನಗಳು ಬಹಳ ಉಪಯುಕ್ತವಾಗಿರುತ್ತದೆ ಎಂದೇ ಹೇಳಬಹುದು.

ಹಾಗಾದರೆ ಮೊದಲನೆಯ ಸೂಪರ್ ಟಿಪ್ಸ್ ಯಾವುದು ಎಂದು ನೋಡುವುದಾದರೆ ಸಾಮಾನ್ಯವಾಗಿ ಎಲ್ಲರೂ ಕೂಡ ಸಿಹಿ ಪದಾರ್ಥ ಗಳಿಗೆ ಕೆಲವೊಮ್ಮೆ ಪಾಯಸ, ರವೆ ಉಂಡೆ, ಈ ರೀತಿ ಕೆಲವೊಂದು ಪದಾರ್ಥಗಳನ್ನು ಮಾಡುವುದಕ್ಕೆ ಏಲಕ್ಕಿ ಕಾಯಿ ಬಳಸುತ್ತೇವೆ, ಆದರೆ ಅದರ ಸಿಪ್ಪೆಯನ್ನು ಹೊರಗಡೆ ಹಾಕುತ್ತೇವೆ ಆದರೆ ಅದನ್ನು ಹೊರಗೆ ಹಾಕುವುದರ ಬದಲು ಚಹಾ ಡಬ್ಬಿಯ ಒಳಗೆ ಹಾಕಿ ಚಹಾ ಮಾಡುವ ಸಮಯದಲ್ಲಿ ಅದಕ್ಕೆ ಹಾಕಿದರೆ.

ಚಹಾದ ರುಚಿಯು ದುಪ್ಪಟ್ಟಾಗುತ್ತದೆ ಎಂದೇ ಹೇಳಬಹುದು ಆದ್ದರಿಂದ ಇದು ಸೂಪರ್ ಟಿಪ್ಸ್ ಆಗಿದೆ. ಇನ್ನು ಎರಡನೆಯದಾಗಿ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಅಡುಗೆ ಎಣ್ಣೆಯ ಪ್ಯಾಕೆಟ್ ತರುತ್ತೇವೆ ಆದರೆ ಅದನ್ನು ಮುಂದಿನ ಭಾಗ ಕತ್ತರಿಸಿ ಬಿಸಾಕುತ್ತೇವೆ. ಆದರೆ ಅದನ್ನು ಹೊರಗಡೆ ಹಾಕಿದರೆ ಕೆಲವೊಮ್ಮೆ ಪ್ರಾಣಿಪಕ್ಷಿಗಳು ಅದನ್ನು ತಿನ್ನುವುದರಿಂದ ಅವುಗಳ ಆರೋಗ್ಯ ಹಾಳಾಗುತ್ತದೆ.

ಅದರ ಬದಲು ಎಣ್ಣೆ ಪ್ಯಾಕೆಟ್ ಕವರ್ ಮಧ್ಯ ಭಾಗದಲ್ಲಿ ಕತ್ತರಿಸಿ ಅದರಿಂದ ಎಣ್ಣೆಯನ್ನು ಉಪಯೋಗಿಸುವುದರಿಂದ ಯಾವುದಕ್ಕೂ ಅಪಾಯವಾಗುವುದಿಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಯೂ ಕೂಡ ಕಿತ್ತಳೆ ಹಣ್ಣು ಅಥವಾ ಮೋಸಂಬಿ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಕುತ್ತೇವೆ. ಆದರೆ ಅದನ್ನು ಒಂದು ಚಿಕ್ಕ ಬೌಲಿಗೆ ನೀರನ್ನು ಹಾಕಿ ಅದರೊಳಗೆ ಸಿಪ್ಪೆ ಹಾಕಿ ಅಡುಗೆ ಮನೆಯಲ್ಲಿ ಇಡುವುದರಿಂದ ಯಾವುದೇ ರೀತಿಯಾದಂತಹ ನೊಣಗಳು ಬರುವುದಿಲ್ಲ ಒಳ್ಳೆಯ ಸುವಾಸನೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

https://youtu.be/Aurg4jxMwZA