ಮೇಷ ರಾಶಿ:- ಕೆಲಸದ ವಿಷಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ಕೆಲಸ ಮಾಡುವ ಕಚೇರಿಯಲ್ಲಿ ನಿಮ್ಮ ನಡವಳಿಕೆಯ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕು. ಶುಲ್ಕದ ವಿಷಯದಲ್ಲಿ ಸಹೋದ್ಯೋಗಿಗಳೊಂದಿಗೆ ಆಗುವ ತಪ್ಪನ್ನು ನಿಲ್ಲಿಸಿ. ಈ ದಿನ ನಿಮಗೆ ಲಾಭದಾಯಕವಾಗಿರಲಿದೆ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಸಂಜೆ 6:45 ರಿಂದ ರಾತ್ರಿ 10:00 ರವರೆಗೆ.

ವೃಷಭ ರಾಶಿ:- ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ದೀರ್ಘ ಕಾಲದವರೆಗೆ ಉದ್ಯೋಗಗಳು ಇಲ್ಲದಿದ್ದರೆ ಇಂದು ನಿಮಗೆ ಬಹಳ ಶುಭ ದಿನವಾಗಿರಲಿದೆ. ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ವ್ಯಾಪಾರಿಗಳು ಕೆಲವು ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ- ಗುಲಾಬಿ ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5:00 ರವರೆಗೆ.

ಮಿಥುನ ರಾಶಿ:- ನೀವು ವ್ಯಾಪಾರ ಮಾಡುತ್ತಿದ್ದರೆ ಮತ್ತು ದೊಡ್ಡ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಲಾಭದ ಸ್ಥಳದಲ್ಲಿ ನಷ್ಟವಾಗಬಹುದು. ನಿಮ್ಮ ಬಾಸ್ ನಿಮಗೆ ಒಂದು ಪ್ರಮುಖ ಕಾರ್ಯವನ್ನು ವಹಿಸಿದರೆ ಅದನ್ನು ಎಚ್ಚರಿಕೆಯಿಂದ ಮಾಡಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ 10:00 ರವರೆಗೆ.

ಕರ್ಕಾಟಕ ರಾಶಿ:- ಹಣದ ವಿಷಯದಲ್ಲಿ ಇಂದು ನಿಮಗೆ ಅಷ್ಟು ಉತ್ತಮ ದಿನವಲ್ಲ. ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ನೀವು ಶ್ರಮಿಸಬೇಕಾಗುತ್ತದೆ. ನೀವು ನಿರೀಕ್ಷಿಸಿದ ಫಲಿತಾಂಶಗಳನ್ನು ಪಡೆಯದಿದ್ದರೆ ನಿರಾಶೆ ಗೊಳ್ಳುವ ಅಗತ್ಯವಿಲ್ಲ. ಅದೃಷ್ಟ ಸಂಖ್ಯೆ -03 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8:30 ರವರೆಗೆ.

ಸಿಂಹ ರಾಶಿ:- ರಸ್ತೆಯಲ್ಲಿ ನಡೆಯುವಾಗ ಸ್ವಲ್ಪ ಕಾಳಜಿ ವಹಿಸಿ ಇಲ್ಲದಿ ದ್ದರೆ ನೀವು ಅಪಘಾತಕ್ಕೆ ಈಡಾಗುವ ಸಾಧ್ಯತೆ ಇದೆ. ನೀವು ವಿದ್ಯಾರ್ಥಿ ಯಾಗಿದ್ದರೆ ಈ ಸಮಯದಲ್ಲಿ ನಿಮ್ಮ ಅಧ್ಯಯನದ ಬಗ್ಗೆ ಸ್ವಲ್ಪ ನಿರ್ಲಕ್ಷ ವಹಿಸಬೇಡಿ ನಿರಂತರವಾಗಿ ಅಭ್ಯಾಸ ಮಾಡುವುದನ್ನು ಮುಂದುವರಿಸಿ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 12:30 ರಿಂದ 3:00 ರವರೆಗೆ.

ಕನ್ಯಾ ರಾಶಿ:- ಇಂದು ನಿಮಗೆ ತುಂಬಾ ಶುಭದಿನವಾಗಿರಲಿದೆ. ಇದ್ದಕ್ಕಿ ದ್ದಂತೆ ನಿಮ್ಮ ಒಂದು ಪ್ರಮುಖ ಸಮಸ್ಯೆ ಕೊನೆಗೊಳ್ಳಬಹುದು. ಹಣದ ಬಗ್ಗೆ ಹೇಳುವುದಾದರೆ ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿ ದ್ದರೆ ಇಂದು ನೀವು ಯಶಸ್ಸನ್ನು ಪಡೆಯಬಹುದು. ಆದರೆ ಹಣದ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ಮಾಡುವ ಸಂದರ್ಭದಲ್ಲಿ ಎಚ್ಚರಿಕೆಯಾಗಿರಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12:00 ರವರೆಗೆ.

ತುಲಾ ರಾಶಿ:- ಈ ದಿನ ನಿಮಗೆ ಬಹಳ ಮುಖ್ಯವಾದ ದಿನವಾಗಿರಲಿದೆ. ಕಬ್ಬಿಣದ ವ್ಯಾಪಾರಿಗಳು ಇಂದು ದೊಡ್ಡ ಲಾಭಗಳಿಸುವ ಅವಕಾಶವನ್ನು ಪಡೆಯಬಹುದು. ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುವ ವ್ಯಕ್ತಿಗಳು ಬಹಳ ಸಮಯದ ನಂತರ ಅಪಾರವಾದ ಆರ್ಥಿಕ ಲಾಭವನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 4:14 ರಿಂದ 7:00 ರವರೆಗೆ.

ವೃಶ್ಚಿಕ ರಾಶಿ:- ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಂಘರ್ಷ ಉಂಟಾಗಬಹುದು ನಿಮ್ಮ ಕೋಪವನ್ನು ಸಮತೋಲನದಲ್ಲಿ ಇರಿಸಿ ಕೊಳ್ಳುವುದು ಮತ್ತು ಕೆಟ್ಟ ಪದಗಳನ್ನು ಬಳಸುವುದನ್ನು ತಪ್ಪಿಸುವುದು ನಿಮಗೆ ಉತ್ತಮವಾಗಿದೆ. ಇಲ್ಲದಿದ್ದರೆ ನಿಮ್ಮ ಕೆಲಸವೂ ಅಪಾಯಕ್ಕೆ ಸಿಲುಕಬಹುದು. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2:30 ರವರೆಗೆ.

ಧನಸ್ಸು ರಾಶಿ:- ಬಾಕಿ ಇರುವ ಕೆಲಸದಿಂದ ಇಂದು ನಿಮಗೆ ದೊಡ್ಡ ಪರಿಹಾರ ಸಿಗುತ್ತದೆ. ಈ ರಾಶಿಯವರಿಗೆ ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು. ಸಾಲದ ಹೊರೆ ನಿಮ್ಮ ಮೇಲೆ ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರು ತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ.

ಮಕರ ರಾಶಿ:- ನಿಮ್ಮ ವೃತ್ತಿ ಜೀವನದ ಬಗ್ಗೆ ನಿಮಗೆ ಯಾವುದೇ ಗೊಂದ ಲಗಳು ಇದ್ದರೆ ನೀವು ಉತ್ತಮ ಮತ್ತು ಅನುಭವಿ ಸಲಹೆಗಾರರನ್ನು ಸಂಪರ್ಕಿಸಬೇಕು. ನಿಮ್ಮದೇ ಆದ ಯಾವುದೇ ನಿರ್ಧಾರವನ್ನು ತೆಗೆದು ಕೊಳ್ಳಬೇಡಿ ಕಚೇರಿಯ ವಾತಾವರಣ ಸಾಕಷ್ಟು ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 6:15 ರವರಿಗೆ.

ಕುಂಭ ರಾಶಿ:- ಇಂದು ವಾಹನವನ್ನು ಬಳಸುವಾಗ ಹೆಚ್ಚು ಜಾಗರೂಕ ರಾಗಿರಿ ಅತಿ ವೇಗದಲ್ಲಿ ವಾಹನ ಚಲಾಯಿಸುವುದನ್ನು ತಪ್ಪಿಸಬೇಕು. ಪೋಷಕರೊಂದಿಗಿನ ಸಂಬಂಧ ಬಲವಾಗಿರುತ್ತದೆ. ಮತ್ತು ನೀವು ಅವರ ಪ್ರೀತಿಯನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಸ್ವಲ್ಪ ಸಮಯದಿಂದ ಸರಿಯಾಗಿ ಇಲ್ಲದಿದ್ದರೆ ಇಂದು ಅದನ್ನು ಸರಿಪಡಿಸಲು ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ – 08 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 6:15 ರಿಂದ 9:00 ರವರೆಗೆ.

ಮೀನ ರಾಶಿ:- ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವ ಜನರಿಗೆ ಇಂದು ಶುಭದಿನ ವಾಗಿರಲಿದೆ. ನೀವು ಬಯಸಿದ ವರ್ಗಾವಣೆಯನ್ನು ಪಡೆಯಬಹುದು. ಇಂದಿನ ನಿಮ್ಮ ಆದಾಯವು ಹೆಚ್ಚು ಆಗುವ ಸಂದರ್ಭವಿದೆ. ನೀವು ವ್ಯಾಪಾರ ಮಾಡಿದರೆ ನಿಮ್ಮ ಆದಾಯವು ಹೆಚ್ಚಾಗುತ್ತದೆ. ಆದರೆ ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಲು ನಿಮಗೆ ಸೂಚಿಸಲಾಗಿದೆ. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 4:30 ರಿಂದ 6:00 ರವರೆಗೆ.