ಕರ್ನಾಟಕದ ಪ್ರತಿ ನಗರ ಹಾಗೂ ಹಳ್ಳಿಯಲ್ಲೂ ಇದು ನೀವು ಮಾಡಬಹುದು.
12 ವರ್ಷಗಳಿಂದಲೂ ಕೂಡ ಕೆಲಸ ಮಾಡುವ ಯುವಕರಿಗೆ ಕೆಲಸವನ್ನು ಕೊಡುವ ಯಶಸ್ವಿ ಪ್ರಯತ್ನವನ್ನು ಮದರ್ಸ್ ಸ್ಪೀಕ್ನಾಲಜಿ ಕಾರ್ಖಾನೆ ಮಾಡುತ್ತಿದೆ. ಬೆಂಗಳೂರಿನ ಪೀಣ್ಯ 2ನೇ ಹಂತದ ಬಳಿ ಇರುವ ಮದರ್ಸ್ ಟೆಕ್ನಾಲಜಿ ಎಂಬ ಕಾರ್ಖಾನೆ, ಅತ್ಯಾಧುನಿಕ ಗಾಣದ ಎಣ್ಣೆ ತೆಗೆಯುವ ಹಾಗೂ ಅಡಿಕೆ ಎಲೆಯ ಪ್ಲೇಟ್ ತಯಾರಿಸುವ ಮತ್ತು ಪವರ್ ಪ್ಲೇಟ್ ಯಂತ್ರಗಳನ್ನು ತಯಾರಿಸಿ ರಾಜ್ಯದ ರೈತರಿಗೆ ಹಾಗೂ ಇತರ ಉದ್ಯಮಿ ದಾರಿದಾರರಿಗೆ ಸಹಾಯಕ ಸಂಸ್ಥೆಯಾಗಿ ಮುಂದುವರಿಯುತ್ತಿದೆ.
ಇದರ ಮಾಲೀಕರಾದ ಲೋಕೇಶ್ ಮತ್ತು ನಿಂಗೇಗೌಡರ ಪ್ರಕಾರ ಇವತ್ತಿಗೂ ಕೂಡ ನಿರುದ್ಯೋಗ ಎನ್ನುವುದು ರಾಜ್ಯದ ಹಾಗೂ ರಾಷ್ಟ್ರದ ಸಮಸ್ಯೆ ಯುವಕರಲ್ಲಿ ಕೆಲಸ ಮಾಡುವ ಶಕ್ತಿ ಮತ್ತು ಆಸಕ್ತಿ ಇದ್ದರೂ ಸೂಕ್ತ ನೌಕರಿ ಅವರ ಬಳಿ ಇಲ್ಲ, ಇಂತಹ ಯುವಕರ ತಂಡಕ್ಕೆ ಕೆಲಸ ನೀಡುವ ಮತ್ತು ಅದರ ಮೂಲಕ ತಾನು ದುಡಿದು ಜನಸೇವೆ ಮಾಡುವದು ಏಕೈಕ ಗುರಿ.
ಆಗ ಇವರು ಆರಿಸಿದ್ದೆ ಈ ಮಷೀನರಿ ತಯಾರಿಕೆ ಉದ್ಯಮವನ್ನು ಮದರ್ಸ್ ಟೆಕ್ನಾಲಜಿ ಪ್ರಾರಂಭವಾಗಿದ್ದು 2011 ಅದಕ್ಕೂ ಮುನ್ನ ಇಂತಹ ಮಷೀನ್ಗಳು ರಾಜ್ಯದಲ್ಲಿ ಎಲ್ಲೂ ಕೂಡ ಸಿಗುತ್ತಾ ಇರಲಿಲ್ಲ ಅದಕ್ಕಾಗಿ ಜನ ದೂರದ ಊರುಗಳ ಕಾರ್ಖಾನೆಗಳಿಗೆ ಹೋಗಬೇಕಿತ್ತು ಅಲ್ಲಿ ಸಿಗುವಂತಹ ಮಷೀನ್ ಗಳ ದುಬಾರಿ ವೆಚ್ಚ, ಸಾರಿಗೆ ಖರ್ಚು ಹಾಗೂ ಯಂತ್ರಗಳ ಸರ್ವಿಸ್ ಹಾಗೂ ರಿಪೇರಿಗೆ ತಗಲುತ್ತಿದ್ದಂತಹ ಹೆಚ್ಚು ಹಣ ಹಾಗೂ ಸಮಯ ಹಾಳು ಇದರಿಂದ ಮುಕ್ತಿ ಹೊಂದಬೇಕಾದರೆ.
ಅವುಗಳನ್ನು ರಾಜ್ಯದಲ್ಲಿಯೇ ಜನರಿಗೆ ಸಿಗುವ ಹಾಗೆ ಮಾಡಿ ಅದನ್ನು ಬೆಂಗಳೂರಿನಲ್ಲಿ ಉತ್ಪಾದನೆ ಮಾಡಿ ರಾಜ್ಯದಲ್ಲಿ ಅಗತ್ಯ ಇರುವವರಿಗೆ ರೀಸನಬಲ್ ಬೆಲೆಗೆ ಯಾಕೆ ಮಾರಬಾರದು ಎಂದು ಲೋಕೇಶ್ ಹಾಗೂ ನಿಂಗೇಗೌಡ ಯೋಚಿಸಿದರು ಈ ಒಂದು ಯೋಚನೆಯ ಫಲವೇ ಇವತ್ತು ತಲೆ ಎತ್ತಿ ನಿಂತಿರುವ ಅವರ ಮದರ್ಸ್ ಟೆಕ್ನಾಲಜಿ.
ಈ ಮದರ್ಸ್ ಟೆಕ್ನಾಲಜಿ ಉದ್ಯಮ ಮೊದಲಿಗೆ ಇಲ್ಲಿ ಸಿಗುವಂತಹ ಯಂತ್ರಗಳು ಹಾಗೂ ತಯಾರಾಗುವ ಯಂತ್ರಗಳು ಎಲ್ಲ ವಿಧವಾದಂತಹ ವಸ್ತುಗಳ ಹಾಗೂ ಬೇಳೆಗಳ ಎಣ್ಣೆಗಳನ್ನು ತೆಗೆಯುವಂತಹ ಆಧುನಿಕ ಸಾಧನದ ಯಂತ್ರಗಳು ಹಾಗೂ ಅಡಿಕೆ ಎಲೆಗಳನ್ನು ತಯಾರಿಸುವ ಯಂತ್ರಗಳು. ನಿರುದ್ಯೋಗಿಗಳಿಗೆ ಹಾಗು ಸ್ವ ಉದ್ಯೋಗಿಗಳಿಗೆ ಇದು ಉಪಯೋಗವಾಗಲಿ ಎಂದು ಕಾರ್ಖಾನೆಯನ್ನು ತೆರೆದರು. ಮಾರುಕಟ್ಟೆಯಲ್ಲಿ ಸಿಗುವಂತಹ ರೀಫೈನ್ಡ್ ಆಯಿಲ್ಗಳಿಂದ ನಾನಾ ವಿಧವಾದಂತ ಆರೋಗ್ಯ ಸಮಸ್ಯೆಗಳು ಆವರಿಸುತ್ತವೆ.
ಆದ್ದರಿಂದ ಈ ಒಂದು ಮಿಷನ್ಗಳನ್ನು ನಾವು ಬಳಸಿಕೊಂಡು ಸ್ವಉದ್ಯೋಗವನ್ನು ಹೊಂದಬಹುದು ಹಾಗೆಯೇ ಈ ಮೆಷಿನ್ ಗಳಿಂದ ತಯಾರಿಸಿದ ಎಣ್ಣೆಗಳನ್ನು ಬಳಸುವುದರಿಂದ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಇದನ್ನು ನಾವು ಪ್ರತಿ ಹಳ್ಳಿ, ಜಿಲ್ಲೆ, ತಾಲೂಕು, ರಾಜ್ಯದಲ್ಲೂ ಸಹ ತಂದು ಇದರ ಬಳಕೆಯನ್ನು ನಾವು ಸದುಪಯೋಗ ಪಡಿಸಿಕೊಳ್ಳಬಹುದು.