ಕರ್ಮ ಮತ್ತು ಧರ್ಮಗಳ ನಡುವಿನ ವ್ಯತ್ಯಾಸ ಏನು ಗೊತ್ತಾ…? ಇಲ್ಲಿದೆ ನೋಡಿ…..||
ನಮ್ಮ ಸನಾತನ ಶಾಸ್ತ್ರೋಪ ನಿಶತ್ತುಗಳಲ್ಲಿ ಧರ್ಮ ಹಾಗೂ ಕರ್ಮಗಳ ಬಗ್ಗೆ ವಿವರಣೆ ಬರುತ್ತದೆ. ನಾವು ಇಲ್ಲಿ ಮಾಡುವಂತಹ ಪ್ರತಿಯೊಂದು ಧರ್ಮ ಹಾಗೂ ಕರ್ಮಗಳ ಸುತ್ತಲೇ ಸುತ್ತುತ್ತಿರುತ್ತದೆ. ಇವೆರಡರಲ್ಲಿ ಧರ್ಮ ದೊಡ್ಡದ ಅಥವಾ ಕರ್ಮ ದೊಡ್ಡದ ಎಂಬ ವಿಚಾರದ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.
ಇವುಗಳ ಬಗ್ಗೆ ತಿಳಿದುಕೊಳ್ಳುವುದಕ್ಕೂ ಮೊದಲು ಇವುಗಳ ಅರ್ಥ ಏನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಕರ್ಮ ಎಂದರೆ ನಾವು ದಿನನಿತ್ಯ ಮಾಡುವಂತಹ ಎಲ್ಲಾ ಬಗೆಯ ಕೆಲಸಗಳು. ಮನುಷ್ಯ ಎಂದ ಮೇಲೆ ಅವನ ಬೆನ್ನಿಗೆ ಹಲವಾರು ಜವಾಬ್ದಾರಿಗಳು ಹಾಗೂ ಕೆಲಸಗಳು ಇದ್ದೇ ಇರುತ್ತದೆ. ಹೊಟ್ಟೆಪಾಡಿಗೆ ಅವನು ಅಥವಾ ಅವಳು ಮಾಡುವಂತಹ ಕೆಲಸವೇ ಕರ್ಮ.
ಈ ಒಂದು ಕರ್ಮವನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದೇ ಮುಖ್ಯ. ಯಾರಿಗೂ ಯಾವುದೇ ತೊಂದರೆ ಕೊಡದೆ ಯಾರಿಗೂ ಯಾವು ದೇ ವಿಧದಲ್ಲೂ ಹಾನಿಯನ್ನು ಮಾಡದೆ ನಾವು ನಮ್ಮ ಕರ್ಮವನ್ನು ನೀಗಿಸಬೇಕು. ನಾವು ಮಾಡುವಂತಹ ಕರ್ಮದಿಂದ ನಮ್ಮ ಸುತ್ತಲಿನ ನಾಲ್ಕು ಜನರಿಗೆ ಒಳ್ಳೆಯದಾಗುವಂತೆ ಇರಬೇಕು. ಕೊನೆಯದಾಗಿ ನಾವು ನಮ್ಮ ಕರ್ಮವನ್ನು ಸಕ್ರಮವಾಗಿ ಮಾಡಿ ಮುಗಿಸಿ ದೇವರ ಸನ್ನಿಧಿಗೆ ಪಾತ್ರವಾಗುವುದೇ ಧರ್ಮ.
ಈಗ ಈ ಧರ್ಮ ದೊಡ್ಡದ ಅಥವಾ ಕರ್ಮ ದೊಡ್ಡದ ಎಂದು ತಿಳಿಸುವ ಸಲುವಾಗಿ ಎಲ್ಲರಿಗೂ ಅರ್ಥವಾಗುವಂತೆ ಒಂದು ಕಥೆಯ ಮೂಲಕ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಕಥೆ ಎಲ್ಲರ ಬದುಕಿಗೆ ಉಪಯುಕ್ತ ವಾಗುವಂತಹ ಜೀವನ ಸಂದೇಶವನ್ನು ಸಾರುವುದರಿಂದ ಇದನ್ನು ತಪ್ಪದೆ ಎಲ್ಲರೂ ಕೂಡ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಬಹಳ ಹಿಂದೆ ಕರ್ಮ ಹಾಗೂ ಧರ್ಮ ಎಂಬ ಇಬ್ಬರು ಇದ್ದರು.
ಇವರಿಬ್ಬರು ಒಮ್ಮೆ ತಮ್ಮ ಇಬ್ಬರಲ್ಲಿ ಯಾರು ಶ್ರೇಷ್ಠ ಎಂಬ ವಾದವನ್ನು ಮಾಡಿದರು. ಇವರಿಬ್ಬರಿಗೂ ಕೂಡ ತಾನೇ ಶ್ರೇಷ್ಠ ಎಂಬ ಮದ ತಲೆಗೆ ಹತ್ತಿತು. ಈ ಬಗ್ಗೆ ತಿಳಿಸಲು ಆ ಇಂದಿರನೇ ಸೂಕ್ತ ವ್ಯಕ್ತಿ ಎಂದು ಭಾವಿಸಿ ಅವರಿಬ್ಬರೂ ಅಲ್ಲಿಗೆ ಹೋಗಿ ಈ ಜಿಜ್ಞಾಸೆಯನ್ನು ಅವನ ಮುಂದೆ ನಿರ್ಧರಿಸೋಣ ಎಂದು ಈ ಧರ್ಮ ಹಾಗೂ ಕರ್ಮ
ನೇರ ಇಂದಿರನ ಅಮರಾವತಿಗೆ ತೆರಳುತ್ತಾರೆ. ಅವರನ್ನು ನೋಡಿದಂತಹ ಇಂದಿರಾ ಸಂತೋಷದಿಂದಲೇ ಅವರನ್ನು ಬರ ಮಾಡಿಕೊಳ್ಳುತ್ತಾನೆ. ಆದರೆ ಈ ಇಬ್ಬರು ತನ್ನ ಬಳಿಗೆ ಯಾಕೆ ಬಂದರು ಎಂಬ ಗೊಂದಲ ಆತನಿಗೆ ಏರ್ಪಡುತ್ತದೆ. ಅದೇ ಒಂದು ಅಚ್ಚರಿಯಿಂದ ಆತ ಬಂದ ವಿಷಯ ಏನು ಎಂದು ಕೇಳಿದಾಗ ನಡೆದ ಎಲ್ಲಾ ವಿಚಾರವನ್ನು ವಿವರಿಸಿ ದರು ಧರ್ಮ ಹಾಗೂ ಕರ್ಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.