ಇದ್ದಕ್ಕಿದ್ದಂತೆ ಮಂಗಳ ಸೂತ್ರ ಕಳಚಿ ಬಿದ್ದರೆ ಶುಭನಾ? ಅಶುಭನಾ?

ಮಂಗಳಸೂತ್ರವು ಮಂಗಳ ಮತ್ತು ಸೂತ್ರ ಅನ್ನೋ ಎರಡು ಪದಗಳ ಸಂಯೋಜನೆಯಾಗಿದೆ. ಮಂಗಳಸೂತ್ರವನ್ನು ಕರಿಮಣಿ ತಾಳಿ ಅಂತ ಕೂಡ ಕರೆಯುತ್ತಾರೆ. ಮಂಗಳ ಅಂದರೆ ಪವಿತ್ರ, ಸೂತ್ರ ಎಂದರೆ ಹಾರ ಮಂಗಳಸೂತ್ರ ಎಂದರೆ ಪವಿತ್ರ ಬಂಧನವನ್ನು ಸೂಚಿಸುವಂತಹ ಹಾರವಾಗಿದೆ. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ವಿವಾಹಿತ ಮಹಿಳೆಯರು ಕಡ್ಡಾಯವಾಗಿ ಮಂಗಳಸೂತ್ರವನ್ನು ಧರಿಸಬೇಕು.

ಆದ್ದರಿಂದ ಹಿಂದೂ ಧರ್ಮದಲ್ಲಿ ಪವಿತ್ರ ಮಂಗಳಸೂತ್ರಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ವಿವಾಹ ಸಂದರ್ಭದಲ್ಲಿ ಅನುಸರಿಸುವಂತಹ ಪದ್ಧತಿಗಳಲ್ಲಿ ವರನು ವಧುವಿನ ಕೊರಳಿಗೆ ಕಟ್ಟುವಂತಹ ಮಂಗಳ ಸೂತ್ರವೇ ಹೆಚ್ಚು ಪ್ರಮುಖವಾದದ್ದು. ತಾಳಿಯನ್ನು ಸುಮಂಗಲಿಯರ ಸಂಕೇತ ಅಂತ ಪರಿಗಣಿಸಲಾಗುತ್ತದೆ. ವಿವಾಹಿತ ಸ್ತ್ರೀ ತನ್ನ ಕುತ್ತಿಗೆಯಲ್ಲಿ ಮಂಗಳಸೂತ್ರವನ್ನು ಧರಿಸುವುದರಿಂದ ಗಂಡ ಹೆಂಡತಿ ಇಬ್ಬರ ನಡುವಿನ ಸಂಬಂಧ ಸದೃಢವಾಗುತ್ತದೆ.

ವಿವಾಹದ ನಂತರ ಸ್ತ್ರೀ ಎಷ್ಟೇ ಅಲಂಕಾರವನ್ನು ಮಾಡಿಕೊಂಡರು ಮಂಗಳಸೂತ್ರವಿಲ್ಲದ ಅವಳ ಅಲಂಕಾರ ವ್ಯರ್ಥವಾಗುತ್ತದೆ. ಮಂಗಳ ಸೂತ್ರವನ್ನು ಧರಿಸುವುದರ ಮಹತ್ವ ಮತ್ತು ನಿಯಮಗಳ ಕುರಿತು ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳೋಣ. ನಮ್ಮ ಹಿರಿಯರು, ತಿಳಿದವರು, ಪಂಡಿತರು, ವಿವಾಹಿತ ಸ್ತ್ರೀ ಕಡ್ಡಾಯವಾಗಿ ಮಂಗಳಸೂತ್ರವನ್ನು ಧರಿಸಬೇಕು ಅಂತ ಸಲಹೆಯನ್ನು ನೀಡುತ್ತಾರೆ. ಯಾಕೆ ಎಂದರೆ ಅದು ಅವರ ವೈವಾಹಿಕ ಸಂಬಂಧವನ್ನು ಬಲಪಡಿಸುತ್ತದೆ ಅನ್ನುವ ನಂಬಿಕೆ ಇದೆ.

ಮಂಗಳಸೂತ್ರದಲ್ಲಿ ಜೋಡಿಸಲಾದಂತಹ ಕಪ್ಪು ಮಣಿಗಳು ದಾಂಪತ್ಯ ಜೀವನಕ್ಕೆ ಯಾವುದಕ್ಕೂ ಕೆಟ್ಟ ದೃಷ್ಟಿ ಬೀಳದಂತೆ ಕಾಪಾಡುತ್ತದೆ. ಈ ಕಪ್ಪು ಮಣಿಗಳು ವಿವಾಹಿತ ಮಹಿಳೆಯ ಪತಿಯನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ ಮತ್ತು ಆತನ ಆಯಸ್ಸು ಹೆಚ್ಚಾಗುವಂತೆ ಕೂಡ ಮಾಡುತ್ತದೆ. ಸಾಂಪ್ರದಾಯಿಕ ಮಂಗಳಸೂತ್ರವು 9 ಚಿನ್ನದ ಮಣಿಗಳನ್ನು ಹೊಂದಿದ್ದು ಇದು ದುರ್ಗಾದೇವಿಯ 9 ಅವತಾರಗಳನ್ನು ಪ್ರತಿನಿಧಿಸುತ್ತದೆ.

ಮತ್ತು ದುರ್ಗಾದೇವಿಯ ಆಶೀರ್ವಾದವು ಆ ದಾಂಪತ್ಯ ಜೀವನದಲ್ಲಿ ಇರುವಂತೆ ಮಾಡುತ್ತದೆ ಅಂತ ನಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಯಿಂದ ವಿವಿಧ ವಿನ್ಯಾಸದ ಮಂಗಳಸೂತ್ರವನ್ನು ಧರಿಸು ತ್ತಾರೆ. ವಿವಾಹಿತ ಮಹಿಳೆಯರು ನಿಯಮಿತವಾಗಿ ಮಂಗಳಸೂತ್ರವನ್ನು ಧರಿಸಿದರೆ ಗುರುವು ಅವರಿಗೆ ಶುಭ ಫಲಿತಾಂಶವನ್ನು ನೀಡುತ್ತಾನೆ. ಈ ಕಾರಣದಿಂದಾಗಿ ಅವರ ವೈವಾಹಿಕ ಜೀವನವು ಸಂತೋಷ ಮತ್ತು ಶಾಂತಿಯುತವಾಗಿ ಸಾಗುತ್ತದೆ.

ಸ್ನಾನದ ಸಮಯದಲ್ಲಿ ಚಿನ್ನವನ್ನು ಸ್ಪರ್ಶಿಸಿ ದೇಹದ ಮೇಲೆ ಬೀಳು ವಂತಹ ನೀರು, ವಿವಾಹಿತ ಮಹಿಳೆ ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಎಲ್ಲಾ ಪಾಪಗಳನ್ನು ತೊಡೆಯುತ್ತದೆ. ಆದ್ದರಿಂದ ಚಿನ್ನದಿಂದ ಮಾಡಿದಂತಹ ಮಂಗಳಸೂತ್ರವು ದೇಹ ಮತ್ತು ಮನಸ್ಸು ಎರಡನ್ನು ಶುದ್ಧಮಾಡುತ್ತದೆ. ಮಂಗಳಸೂತ್ರದ ಕಪ್ಪು ಬಣ್ಣದ ಮಣಿಗಳು ಶನಿ ಗ್ರಹದ ಸಂಕೇತವಾಗಿದೆ ಮತ್ತು ಮಂಗಳಸೂತ್ರದ ಚಿನ್ನವೂ ಗುರು ಗ್ರಹದ ಸಂಕೇತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.