ಮೇಷ ರಾಶಿ:- ಹಣದ ವಿಷಯದಲ್ಲಿ ಈ ದಿನ ನಿಮಗೆ ಪ್ರಯೋಜನಕಾರಿ ಯಾಗುವ ಸಾಧ್ಯತೆ ಇದೆ. ಇಂದು ಇದ್ದಕ್ಕಿದ್ದಂತೆ ಸಂಪತ್ತು ಪಡೆಯುವ ಸಾಧ್ಯತೆ ಇದೆ. ನೀವು ವ್ಯಾಪಾರ ಮಾಡುತ್ತಾ ಇದ್ದರೆ ಮತ್ತು ನಿಮ್ಮ ವ್ಯವಹಾರವನ್ನು ಮತ್ತು ಹೆಚ್ಚಿಸಲು ಯೋಚಿಸುತ್ತಿದ್ದರೆ ಇಂದು ನಿಮ್ಮ ಯೋಜನೆ ಸುಲಭವಾಗಿರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 7:00 ರಿಂದ 11:00 ರವರೆಗೆ.

ವೃಷಭ ರಾಶಿ:- ನೀವು ಭಾವನಾತ್ಮಕವಾಗಿ ಇಂದು ತುಂಬಾ ಬಲಶಾಲಿ ಯಾಗಿರುತ್ತೀರಿ. ಮತ್ತು ನೀವು ಪ್ರತಿ ಅಡೆತಡೆಗಳನ್ನು ತುಂಬಾ ಧೈರ್ಯದಿಂದ ಎದುರಿಸುತ್ತೀರಿ. ಮತ್ತು ಉದ್ಯೋಗಿಗಳಿಗೆ ಕೆಲಸದಲ್ಲಿ ಏರಿಳಿತ ಇರುತ್ತದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮನಸ್ತಾಪಗಳು ಇರುತ್ತದೆ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 2:25 ರವರೆಗೆ.

ಮಿಥುನ ರಾಶಿ:- ಕಚೇರಿಯಲ್ಲಿ ಪರಿಸ್ಥಿತಿಯು ಉದ್ವಿಜ್ಞವಾಗಿರುತ್ತದೆ. ನಿಮ್ಮ ಕೆಲಸದ ಬಗೆಗಿನ ನಿರ್ಲಕ್ಷ್ಯವೂ ನಿಮಗೆ ತೊಂದರೆಗಳನ್ನು ಹೆಚ್ಚಿಸುತ್ತದೆ. ನಿಮಗೆ ನೀಡಲಾದ ಯಾವುದೇ ಪ್ರಮುಖ ಜವಾಬ್ದಾರಿ ಯನ್ನು ನಿಮ್ಮಿಂದ ಹಿಂತಿರುಗಿ ಪಡೆಯಲಾಗುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಸಂಜೆ 6:00 ರಿಂದ ರಾತ್ರಿ 9:00 ರವರೆಗೆ.

ಕರ್ಕಾಟಕ ರಾಶಿ:- ಕಣ್ಣು ಮುಚ್ಚಿ ಯಾರನ್ನು ನಂಬಬೇಡಿ ಇಲ್ಲದಿದ್ದರೆ ನೀವು ಇಂದು ಮೋಸ ಹೋಗುವ ಸಾಧ್ಯತೆ ಇದೆ. ಹಣದ ವಿಷಯದಲ್ಲಿ ನೀವು ಜಾಗರೂಕರಾಗಿರಬೇಕು. ಇನ್ನು ಕೆಲಸದ ಬಗ್ಗೆ ಹಣಕಾಸಿನ ಸಂಬಂಧಿಸಿದ ಕೆಲಸ ಮಾಡುವವರು ಇಂದು ಪ್ರಯೋಜನ ಪಡೆಯ ಬಹುದು. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 11:00 ರಿಂದ 3:45 ರವರೆಗೆ.

ಸಿಂಹ ರಾಶಿ:- ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನೀವು ಯಾವುದೇ ಹಣಕಾಸಿನ ವಹಿವಾಟನ್ನು ಸಹ ಮಾಡಬಹುದು. ಇದಲ್ಲದೆ ಇಂದು ನೀವು ನಿಮಗಾಗಿಯೇ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು. ಇಂದು ನೀವು ಕೆಲಸದ ಆರಂಭದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯು ತ್ತೀರಿ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 11:00 ರಿಂದ ಮಧ್ಯಾಹ್ನ 3:30 ರವರೆಗೆ.

ಕನ್ಯಾ ರಾಶಿ:- ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ. ನಿಮ್ಮ ದೀರ್ಘಕಾಲದ ಪಟಿನ ಪರಿಶ್ರಮವು ಮತ್ತು ಪ್ರಯತ್ನಗಳ ಉತ್ತಮ ಫಲಿತಾಂಶವನ್ನು ನೀವು ಇಂದು ಪಡೆಯುವ ಸಾಧ್ಯತೆ ಇರುತ್ತದೆ. ನೌಕರರು ಎಂದು ಕಚೇರಿಯಲ್ಲಿ ವೃತ್ತಿ ಜೀವನಕ್ಕೆ ಹೊಸ ತಿರುವನ್ನು ಪಡೆಯುತ್ತಾರೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 6:00 ರವರೆಗೆ.

ತುಲಾ ರಾಶಿ:- ನಿಮ್ಮ ವಯಕ್ತಿಕ ಜೀವನದಲ್ಲಿ ಅಥವಾ ವೃತ್ತಿಪರ ಜೀವನದಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿಗಳು ಇರಬಹುದು. ಹಠಾತ್ ಜವಾಬ್ದಾರಿಗಳು ನಿಮಗೆ ಸುಸ್ತನು ಉಂಟುಮಾಡುತ್ತದೆ. ನಿಮ್ಮ ದಿನದ ಕೆಲಸವನ್ನು ಮುಂಚಿತವಾಗಿಯೇ ಯೋಚಿಸುವುದು ಉತ್ತಮ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 4:00 ರಿಂದ ರಾತ್ರಿ 9:00 ರವರೆಗೆ.

ವೃಶ್ಚಿಕ ರಾಶಿ:- ಇಂದು ಮನಸ್ಸು ಶಾಂತವಾಗಿರುತ್ತದೆ. ಮತ್ತು ನೀವು ಇಂದು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಮತ್ತು ನೀವು ನಿಮಗಾಗಿ ಸಾಕಷ್ಟು ಸಮಯವನ್ನು ಕೂಡ ಕಳೆಯುತ್ತೀರಿ. ತುಂಬಾ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 12:45 ರವರೆಗೆ.

ಧನಸ್ಸು ರಾಶಿ:- ಕೆಲಸದ ವಿಷಯದಲ್ಲಿ ಇಂದು ನಿಮಗೆ ಅದೃಷ್ಟವಾದ ದಿನವಾಗಿರಲಿದೆ. ಮತ್ತೊಂದೆಡೆ ನೀವು ಸಮಯಕ್ಕೆ ಸರಿಯಾಗಿ ಉದ್ಯೋಗಿಗಳಿಂದ ಸಹಾಯವನ್ನು ಪಡೆಯುತ್ತೀರಿ. ಇಂದು ಬ್ಯಾಂಕಿಗೆ ಸಂಬಂಧಿಸಿದ ಉದ್ಯೋಗ ಮಾಡುವವರಿಗೆ ಒತ್ತಡ ಜಾಸ್ತಿಯಾಗುತ್ತದೆ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:45 ರವರೆಗೆ.

ಮಕರ ರಾಶಿ:- ಕಚೇರಿಯಲ್ಲಿ ನಮಗೆ ಯಾವುದೇ ಕಷ್ಟದ ಕೆಲಸವನ್ನು ನಿಯೋಜಿಸಬಹುದು. ಆದರೆ ನಿಮ್ಮ ಬುದ್ಧಿವಂತಿಕೆ ತುಂಬಾ ಬಲವಾಗಿ ರುತ್ತದೆ. ಅದರ ಬಲದ ಮೇಲೆ ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 3:00 ರವರೆಗೆ.

ಕುಂಭ ರಾಶಿ:- ಇಂದು ಉದ್ಯೋಗಸ್ಥರಿಗೆ ಶುಭವಾದ ದಿನವಾಗಿರಲಿದೆ. ನಿಲ್ಲಿಸಿದ ಕೆಲಸ ಪೂರ್ಣಗೊಳ್ಳುತ್ತದೆ. ಮತ್ತು ನಿಮಗೆ ಲಾಭ ಸಿಗುತ್ತದೆ. ಮರದ ಕೆಲಸ ಮಾಡುತ್ತಿದ್ದರೆ ಆರ್ಥಿಕವಾಗಿ ಲಾಭ ಪಡೆಯುವಿರಿ. ನಿಮ್ಮ ಸಂಗಾತಿಯ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ.

ಮೀನ ರಾಶಿ:- ನಿಮಗೆ ಈ ದಿನ ಉತ್ತಮ ದಿನವಾಗಿರಲಿದೆ. ಇಂದು ನೀವು ಮಾಡುವ ಯಾವುದೇ ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಕೆಲಸದಲ್ಲಿ ನೀವು ಸ್ವಲ್ಪ ಸಮಯದವರೆಗೆ ನಿರಂತರ ವಾಗಿ ಕೆಲಸ ಮಾಡುತ್ತಿರುವುದರ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಬೆಳಗ್ಗೆ 9:20 ರಿಂದ ಮಧ್ಯಾಹ್ನ 2:30 ರವರೆಗೆ.