ಮೇಷ ರಾಶಿ:- ಈ ದಿನ ನಿಮಗೆ ಉತ್ತಮ ದಿನವಾಗಿರುತ್ತದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಮೋಷನ್ ಪಡೆಯುವ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸಬಹುದು. ದಂಪತಿಗಳಿಗೆ ಈ ದಿನ ಸಾಮಾನ್ಯ ದಿನವಾಗಿರುತ್ತದೆ. ಆರ್ದಿಕ ವಿಷಯದಲ್ಲಿ ಯಾವುದಾದರೂ ಒಂದು ಮೂಲದಿಂದ ಹಣಕಾಸಿನ ಒಳಹರಿವು ಬರುತ್ತದೆ. ಈ ದಿನ ಕೆಲವು ಪ್ರಮುಖ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12:30 ವರೆಗೆ.

ವೃಷಭ ರಾಶಿ:- ವೈಯಕ್ತಿಕ ತೊಂದರೆಗಳನ್ನು ತಪ್ಪಿಸಲು ನೀವು ಆದಷ್ಟು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮಾತನಾಡು ವಾಗ ನಿಮ್ಮ ಮಾತು ಮತ್ತು ನಡವಳಿಕೆ ಮೇಲೆ ಹೆಚ್ಚು ನಿಯಂತ್ರಣ ಇಟ್ಟುಕೊಳ್ಳಿ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಇರುತ್ತದೆ ಇಂದು ನಿಮ್ಮ ಜೀವನ ಸಂಗಾತಿ ನಿಮ್ಮ ಜೊತೆ ಸಂತೋಷವಾಗಿ ಇರುತ್ತಾರೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಮಿಥುನ ರಾಶಿ:- ಈ ದಿನ ನಿಮ್ಮ ಕೆಲಸದಲ್ಲಿ ಉತ್ತಮವಾದ ಫಲಿತಾಂಶ ವನ್ನು ಪಡೆಯುವ ಸಾಧ್ಯತೆ ಇದೆ. ನೀವೇನಾದರೂ ದೊಡ್ಡ ಕಂಪನಿಯಲ್ಲಿ ಕೆಲಸಕ್ಕಾಗಿ ಭಾಗವಹಿಸಿದ್ದರೆ ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸ ಬಹುದು. ವ್ಯಾಪಾರಿಗಳಿಗೆ ಈ ದಿನ ಉತ್ತಮವಾದ ದಿನವಾಗಿರುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ -ಸಂಜೆ 4 ರಿಂದ ರಾತ್ರಿ 7 ಗಂಟೆಯವರೆಗೆ.

ಕಟಕ ರಾಶಿ:- ಉದ್ಯೋಗಿಗಳಿಗೆ ಈ ದಿನ ಬಹಳ ಮುಖ್ಯವಾದ ದಿನವಾ ಗಿರುತ್ತದೆ. ನಿಮ್ಮ ಪ್ರಗತಿಯ ಬಲವಾದ ಸಾಧ್ಯತೆ ಇದೆ. ನೀವೇನಾದರೂ ಎಲೆಕ್ಟ್ರಿಕ್ ವಿಷಯವಾಗಿ ಕೆಲಸ ಮಾಡುತ್ತಿದ್ದರೆ ಈ ದಿನ ಉತ್ತಮವಾದ ಯಶಸ್ಸನ್ನು ಪಡೆಯಬಹುದು. ಯಾವುದಾದರೂ ವ್ಯವಹಾರಕ್ಕೆ ಸಂಬಂಧಿಸಿದ ದೊಡ್ಡ ಸಮಸ್ಯೆ ಇಂದು ಕೊನೆಗೊಳ್ಳಬಹುದು. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ.

ಸಿಂಹ ರಾಶಿ:- ಇಂದು ನಿಮಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಮತ್ತು ನಿಮ್ಮ ಮನಸ್ಸು ಶಾಂತವಾಗಿ ಉಳಿಯುತ್ತದೆ. ನಿಮ್ಮ ಪ್ರಮುಖ ಕೆಲಸಗಳಲ್ಲಿ ಗಮನಹರಿಸಲು ಸಾಧ್ಯವಾಗುತ್ತದೆ. ನೀವು ಕೆಲಸ ಮಾಡುವಂತಹ ಕಚೇರಿಯಲ್ಲಿ ಇಂದು ವಾತಾವರಣ ಉತ್ತಮವಾಗಿ ಇರುತ್ತದೆ. ಈ ದಿನ ನಿಮ್ಮ ಬಾಸ್ ನ ಬೆಂಬಲವನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 5:00 ಯಿಂದ ರಾತ್ರಿ 7.30 ರವರೆಗೆ.

ಕನ್ಯಾ ರಾಶಿ:- ಶೇರು ಮಾರುಕಟ್ಟೆ ಹಾಗೂ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಂತಹ ಜನರಿಗೆ ಈ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ. ನಿಮ್ಮ ಗುರಿಗಳನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಈ ದಿನ ಉತ್ತಮವಾದ ಆರ್ಥಿಕ ಲಾಭ ಸಿಗಬಹುದು. ಈ ದಿನ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಸಿಗುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12:30 ವರೆಗೆ.

ತುಲಾ ರಾಶಿ:- ನಿಮ್ಮ ಕಚೇರಿಯಲ್ಲಿ ಹಾಗೂ ಮನೆಗಳಲ್ಲಿ ಈ ದಿನ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಿರುತ್ತದೆ. ಈ ದಿನವನ್ನು ಮುಂಚಿತವಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಕಚೇರಿಯಲ್ಲಿ ಹಲವಾರು ಕಾರ್ಯಗಳು ಏಕಕಾಲದಲ್ಲಿ ಬರಬಹುದು. ಆದ್ದರಿಂದ ನೀವು ಹೆಚ್ಚು ಶ್ರಮವಹಿಸಿ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ವೃಶ್ಚಿಕ ರಾಶಿ:- ಹಣದ ದೃಷ್ಟಿಯಿಂದ ಈ ದಿನ ಅದೃಷ್ಟದ ದಿನವಾಗಿರು ತ್ತದೆ. ಮನೆಯಲ್ಲಿ ಹಿರಿಯರ ಸಹಾಯದಿಂದ ಆರ್ಥಿಕ ಲಾಭ ಪಡೆಯ ಬಹುದು. ಮನೆಯ ಹಿರಿಯರಿಂದ ಈ ದಿನ ಅಮೂಲ್ಯವಾದ ವಸ್ತುವನ್ನು ಪಡೆಯಬಹುದು. ನಿಮ್ಮ ಸಂಗಾತಿಯಿಂದ ಕೆಲವು ಒಳ್ಳೆಯ ಸುದ್ದಿಯನ್ನು ಈ ದಿನ ನಿರೀಕ್ಷಿಸಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ

ಧನಸ್ಸು ರಾಶಿ:- ಈ ದಿನ ನಿಮ್ಮ ಪ್ರಮುಖ ಕೆಲಸಗಳಲ್ಲಿ ಸಹೋದ್ಯೋಗಿ ಗಳ ಬೆಂಬಲವನ್ನು ಪಡೆಯಬೇಡಿ. ನಿಮ್ಮ ಕೆಲಸಗಳನ್ನು ನಿಮ್ಮದೇ ಆದ ರೀತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಸ್ಥರು ವ್ಯಾಪಾರ ಕ್ಷೇತ್ರದಲ್ಲಿ ಈ ದಿನ ಜಾಗರೂಕರಾಗಿ ಇರಬೇಕಾಗುತ್ತದೆ. ಒಂದು ಸಣ್ಣ ತಪ್ಪು ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 7 ಗಂಟೆಯವರೆಗೆ.

ಮಕರ ರಾಶಿ:- ಆರೋಗ್ಯದ ದೃಷ್ಟಿಯಿಂದ ಈ ದಿನ ಅನುಕೂಲಕರವಾ ಗಿರುತ್ತದೆ. ಈ ದಿನ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಸಂತೋಷ ವನ್ನು ಹೊಂದಿರುತ್ತೀರಿ. ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೀರಿ. ನೀವೇನಾದರೂ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ ಪಾಲುದಾರರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟು ಕೊಳ್ಳಬೇಕು. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 5:00 ಯಿಂದ ರಾತ್ರಿ 8:30ರ ವರೆಗೆ.

ಕುಂಭ ರಾಶಿ:- ಕೆಲವು ದಿನಗಳಿಂದ ನಿಮ್ಮ ಜೀವನದಲ್ಲಿ ಏರಿಳಿತಗಳು ಕಂಡು ಬರುತ್ತಿದ್ದರೆ ಅದು ಈ ದಿನ ಸರಿ ಹೋಗುತ್ತದೆ. ನೀವು ಈ ದಿನ ಕೆಲವೊಂದು ಸಂದರ್ಭದಲ್ಲಿ ಹುಷಾರಾಗಿ ಇರಬೇಕಾಗುತ್ತದೆ. ಕಚೇರಿ ಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಸಹೋದ್ಯೋಗಿಗ ಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ. ಈ ದಿನ ನೀವು ಆದಷ್ಟು ಚರ್ಚೆಯಿಂದ ದೂರ ಇರುವುದು ಉತ್ತಮ. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.

ಮೀನ ರಾಶಿ:- ಈ ದಿನ ನೀವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಮತ್ತು ಮನೆಯ ಕಿರಿಯ ಸದಸ್ಯರೊಂದಿಗೆ ಈ ದಿನ ಹೆಚ್ಚು ಸಮಯ ವನ್ನು ಕಳೆಯುತ್ತೀರಿ. ಪೋಷಕರ ಆರೋಗ್ಯವು ಉತ್ತಮವಾಗಿರುತ್ತದೆ. ಈ ದಿನ ನಿಮ್ಮ ಮನೆಯ ಸೌಕರ್ಯಗಳಿಗೆ ಹೆಚ್ಚು ಹಣ ಖರ್ಚು ಮಾಡಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಿಗ್ಗೆ 10 ರಿಂದ ಮಧ್ಯಾಹ್ನ 2:30 ರವರೆಗೆ