ಅದೃಷ್ಟವಂತ ಪುರುಷರ ಲಕ್ಷಣಗಳು ವ್ಯಕ್ತಿಯ ದೇಹದ ಮೇಲೆ ಇರುವ ಕೆಲವು ಗುರುತುಗಳು ಆತನ ಭವಿಷ್ಯ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಹೇಳುತ್ತವೆ‌.ಕೆಲವು ಚಿಹ್ನೆಗಳು ವ್ಯಕ್ತಿಯ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ.ಅಂದರೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಶ್ರೀಮಂತನಾಗುತ್ತಾನೆಯೆ ಅಥವಾ ಇಲ್ಲವೇ ಎಂಬುದನ್ನು ಇದರಿಂದ ಕಂಡು ಹಿಡಿಯಬಹುದು.ಅಂಗೈನ ಮಧ್ಯದಲ್ಲಿ ಮಚ್ಚೆ ಇರುವ ಪುರುಷರ ಅದೃಷ್ಟದಲ್ಲಿ ಸಂತೋಷ ಮತ್ತು ಸಮೃದ್ದಿ ಇರುತ್ತದೆ‌‌.

ಹಣ ವಾಹನ ಮತ್ತು ಸಂಪತ್ತು ಇವರಿಗೆ ಸಿಗುತ್ತದೆ ‌.ಜೀವನದಲ್ಲಿ ಗೌರವ ಮತ್ತು ಪ್ರತಿಷ್ಠೆಯೂ ದೊರಕುತ್ತದೆ. ಇದಲ್ಲದೆ ಈ ಜನರಿಗೆ ಯಾವುದೇ ರೀತಿಯ ಹಣದ ಕೊರತೆ ಕಾಡುವುದಿಲ್ಲವಂತೆ.ಎರಡನೆಯದಾಗಿ ಆಮೆಯಂತೆ ಬೆನ್ನು ಬೆಳೆದಿರುವ ಪುರುಷರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಜನರು ಜೀವನದಲ್ಲಿ ಸಾಕಷ್ಟು ಗೌರವ ಮತ್ತು ಸಂಪತ್ತನ್ನು ಗಳಿಸುತ್ತಾರಂತೆ.ಮೂರನೆಯದಾಗಿ ಅಗಲವಾದ ಎದೆ ಮತ್ತು ಉದ್ದನೆಯ ಮೂಗು ಚಿಕ್ಕ ವಯಸ್ಸಿನಲ್ಲಿಯೇ ಪ್ರಗತಿಯನ್ನು ಪಡೆಯುತ್ತಾರೆ‌‌.ನಾಲ್ಕನೆಯದಾಗಿ ಮನುಷ್ಯನ ಪಾದದ ತೋರು ಬೆರಳು ಅಂದರೆ ಹೆಬ್ಬೆರಳಿನ ಪಕ್ಕದಲ್ಲಿ ಇರುವ ಬೆರಳು ದೊಡ್ಡದಾಗಿದ್ದರೆ ಉತ್ತಮ ಜೀವನ ಸಂಗಾತಿ ಸಿಗುತ್ತಾರೆ ಎಂಬ ನಂಬಿಕೆ ಇದೆ.

ಐದನೆಯದಾಗಿ ಎದೆಯ ಮೇಲೆ ದಪ್ಪ ಕೂದಲು ಹೊಂದಿರುವ ಪುರುಷರು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ‌.ಸಂತೋಷಮಯ ಜೀವನ ಈ ವ್ಯಕ್ತಿಗಳದ್ದಾಗಿರುತ್ತದೆ.ಈ ಜನರು ಸ್ವಭಾವತಃ ತುಂಬಾ ತೃಪ್ತರಾಗಿರುತ್ತಾರೆ.ಆರನೆಯದಾಗಿ ಪಾದಗಳಲ್ಲಿ ಕಮಲ ರಥ ಮತ್ತು ಬಾಣದಂತಹ ಚಿಹ್ನೆಗಳನ್ನು ಹೊಂದಿರುವ ಪುರುಷ ಖುಷಿ ಖುಷಿಯಿಂದ ಬದುಕುತ್ತಾ ಈ ಜನರು ಜೀವನವೂ ಸಂತೋಷದಿಂದ ತುಂಬಿರುತ್ತದೆ.